ಶಹಾಬಾದ : ದನದ ಕೊಟ್ಟಿಗೆಗೆ ಬೆಂಕಿ: ಹಸು ಸಜೀವ ದಹನ
ಶಹಾಬಾದ : ಹೊಲದಲ್ಲಿ ನಿರ್ಮಿಸಿದ್ದ ದನದ ಕೊಟ್ಟಿಗೆ (ಗುಡಿಸಲು)ಗೆ ಬೆಂಕಿ ಬಿದ್ದು ಕೊಟ್ಟಿಗೆಯಲ್ಲಿದ್ದ ಆಕಳು ಸಜೀವ ದಹನವಾದ ಘಟನೆ ಮರತೂರ ಗ್ರಾಮದಲ್ಲಿ ನಡೆದಿದೆ.
ಕೊಟ್ಟಿಗೆಯಲ್ಲಿದ್ದ ಎತ್ತು, ಕರು ಪ್ರಾಣಾಪಾಯದಿಂದ ಪಾರಾಗಿದ್ದು, ಕಣಕಿ, ಹೊಟ್ಟು, ನೇಗಿಲು, ದಿಂಡು, ಗಳೇ ಸಾಮಾನುಗಳು, ಪೈಪಗಳು ಸುಟ್ಟು ಕರಕಲಾಗಿವೆ.
ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆಯೋ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಕೊಟ್ಟಿಗೆಗೆ ಬೆಂಕಿ ಹಚ್ಚಿದ್ದಾರೋ ಎಂಬ ಅನುಮಾನಗಳು ಇವೆ
ಎಂದು ರೈತ ನರಸಪ್ಪ ಚಿಡಗುಂಪ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿತ್ತು. ಆದರೆ ಹೊಲದಲ್ಲಿ ಹತ್ತಿ ಬೆಳೆ ಇರುವುದರಿಂದ ಅಗ್ನಿಶಾಮಕ ದಳದ ವಾಹನ ಹೋಗಲು ಆಗದೆ ಸಿಬ್ಬಂದಿಗಳು ಹೊಲದಲ್ಲಿದ್ದ ನೀರಿನ ಸಹಾಯದಿಂದ ಬೆಂಕಿ ನಂದಿಸಿದರು.
ಸ್ಥಳಕ್ಕೆ ಶಹಬಾದ್ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಶಹಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿಯಿಂದ ಪಾರಾದ ಎತ್ತು ಮತ್ತು ಕರುವಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪಶುವೈದ್ಯಾಧಿಕಾರಿ ಡಾ.ಮಂಜುನಾಥ ಬಿರಾದಾರ ತಿಳಿಸಿದ್ದಾರೆ
ಹೊಲದ ಕೊಟ್ಟಿಗೆಗೆ ಹತ್ತಿದ ಬೆಂಕಿಯಿಂದಾಗಿ ಆಕಳು ಸಜೀವ ದಹನವಾಗಿದ್ದು ಹಾಗೂ ಕೊಟ್ಟಿಗೆಯಲ್ಲಿದ್ದ ಕಣಕಿ, ಹೊಟ್ಟು, ಪೈಪುಗಳು, ಹಾಗೂ ಗಳೇ ಸಾಮಾನುಗಳು ಸುಟ್ಟಿದ ರಿಂದ ಸುಮಾರು 5/6 ಲಕ್ಷ ರೂಪಾಯಿ ನಷ್ಟವಾಗಿದೆ ಎಂದು ರೈತ ದೇವಾನಂದ ಚಿಡಗುಂಪ ಅಳಲು ತೋಡಿಕೊಂಡರು.