ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದ ಉದ್ಯಮಿ ರತನ್ ಟಾಟಾ!
ನವದೆಹಲಿ: ಉದ್ಯಮಿ ರತನ್ ಟಾಟಾ ಶನಿವಾರ ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದು, ಕೊರೋನಾವೈರಸ್ ಸಾಂಕ್ರಾಮಿಕದಿಂದ ಶೀಘ್ರದಲ್ಲಿಯೇ ಎಲ್ಲರನ್ನು ಸಂರಕ್ಷಿಸಿ, ರೋಗ ನಿರೋಧಕ ಶಕ್ತಿ ಹೆಚ್ಚಿಸಬಹುದು ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.
ಲಸಿಕೆ ಪ್ರಕ್ರಿಯೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹೊಗಳಿರುವ ರತನ್ ಟಾಟಾ, ಅದು ನೋವುರಹಿತವಾಗಿತ್ತು ಎಂದು ಬಣ್ಣಿಸಿದ್ದಾರೆ.
ಇಂದು ಕೊರೋನಾ ಲಸಿಕೆಯ ಮೊದಲ ಡೋಸ್ ಪಡೆದಿದ್ದಕ್ಕೆ ಧನ್ಯವಾದಗಳು, ಅದನ್ನು ತೆಗೆದುಕೊಂಡಾಗ ಯಾವುದೇ ನೋವಾಗಲಿಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಕೋವಿಡ್-19 ಕೇಸ್ ಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಲಸಿಕೆ ಪಡೆದಿರುವ ರತನ್ ಟಾಟಾ, ಎಲ್ಲರೂ ಶೀಘ್ರದಲ್ಲಿ ಸುರಕ್ಷಿತವಾಗಿ ಇರಲಿದ್ದಾರೆ ಎಂಬ ಭರವಸೆ ಹೊಂದಿರುವುದಾಗಿ ಅವರು ತಿಳಿಸಿದ್ದಾರೆ.
78 ದಿನಗಳಲ್ಲಿ ಅತಿ ಹೆಚ್ಚು ಎಂಬಂತೆ ದೇಶದಲ್ಲಿ ಶುಕ್ರವಾರ 23, 285 ಕೊರೋನಾವೈರಸ್ ಕೇಸ್ ಗಳು ದಾಖಲಾಗಿದ್ದು, ಒಟ್ಟಾರೇ ಸೋಂಕಿತರ ಸಂಖ್ಯೆ 1, 13, 08, 846ಕ್ಕೆ ಏರಿಕೆಯಾಗಿದೆ.