ಮಾರ್ಚ್ 15-16ರಂದು ಬ್ಯಾಂಕ್ ಬಂದ್
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಒಕ್ಕೂಟಗಳು ನಾಳೆಯಿಂದ ಎರಡು ದಿನಗಳ ಕಾಲ ಮುಷ್ಕರಕ್ಕೆ ಕರೆ ನೀಡಿವೆ. ಇದರಿಂದ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಲಿದೆ.
ಮಾರ್ಚ್ 13 ಎರಡನೇ ಶನಿವಾರವಾಗಿದ್ದು ಇಂದು ಭಾನುವಾರ ರಜೆ ಇದೆ. ನಂತರ ನಾಳೆ ಸೋಮವಾರ ಹಾಗೂ ಮಂಗಳವಾರ ಮುಷ್ಕರ ನಡೆಸುತ್ತಿರುವುದರಿಂದ ಒಟ್ಟು ನಾಲ್ಕು ದಿನಗಳ ಕಾಲ ಬ್ಯಾಂಕ್ ಬಂದ್ ಆದಂತಾಗಿದೆ. ಈ ನಡುವೆ ಎಟಿಎಂ ಸೇವೆ ಎಂದಿನಂತೆ ಮುಂದುವರೆಯಲಿದೆ.