ಬೆಂಗಳೂರಿನಲ್ಲಿ ಒಂದೇ ದಿನ 630 ಮಂದಿಗೆ ಕೊರೊನಾ ಸೋಂಕು ದೃಢ
ಹೈಲೈಟ್ಸ್:
- ನಗರದಲ್ಲಿ ಹೆಚ್ಚುತ್ತಿದೆ ಕೋವಿಡ್ ಮಹಾಮಾರಿಯ ಅಬ್ಬರ
- ಸಿಲಿಕಾನ್ ಸಿಟಿಯಲ್ಲಿ ಒಂದೇ ದಿನ 630 ಮಂದಿಗೆ ಕೊರೊನಾ ಸೋಂಕು
- 2020ರ ಮಾ. 8ರಿಂದ ಇಲ್ಲಿಯವರೆಗೆ ಒಟ್ಟು 4,10,811 ಸೋಂಕಿತ ಪ್ರಕರಣಗಳು ಪತ್ತೆ
- 4,00,441 ಮಂದಿ ಗುಣಮುಖ, 4,516 ಮಂದಿ ಸಾವು
ಬೆಂಗಳೂರು: ನಗರದಲ್ಲಿ ಕೋವಿಡ್ ಮಹಾಮಾರಿಯ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶನಿವಾರ ಹೊಸದಾಗಿ 630 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಕಳೆದ ಕೆಲ ದಿನಗಳಿಂದೀಚೆಗೆ ಇಷ್ಟೊಂದು ಪ್ರಕರಣಗಳು ಒಂದೇ ದಿನ ಪತ್ತೆಯಾಗಿರುವುದು ಇದೇ ಮೊದಲು.
ಬೆಂಗಳೂರು ನಗರ ಜಿಲ್ಲೆಯಲ್ಲಿ ಸೋಂಕು ವ್ಯಾಪಿಸಿದಾಗಿನಿಂದ ನಿತ್ಯ ಸಾವಿನ ಪ್ರಕರಣಗಳು ವರದಿಯಾಗುತ್ತಿದ್ದವು. ಆದರೆ, ಶನಿವಾರ ಕೋವಿಡ್ನಿಂದ ಯಾರೊಬ್ಬರೂ ಸಾವಿಗೀಡಾಗಿಲ್ಲ. ಇದರಿಂದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕಳೆದ ಫೆಬ್ರವರಿ ತಿಂಗಳ ಅಂತ್ಯದಿಂದ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇರುವುದು ಆತಂಕ ಮೂಡಿಸಿದೆ. 2020ರ ಮಾ. 8ರಿಂದ ಇಲ್ಲಿಯವರೆಗೆ ಒಟ್ಟು 4,10,811 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 4,00,441 ಮಂದಿ ಗುಣಮುಖರಾಗಿದ್ದಾರೆ. ಉಳಿದ 5,853 ರೋಗಿಗಳು ನಿಗದಿತ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಪೀಡಿತರ ಪೈಕಿ ಈವರೆಗೆ ಒಟ್ಟಾರೆ 4,516 ಮಂದಿ ಸಾವನ್ನಪ್ಪಿದ್ದಾರೆ.