ಬೆಂಗಳೂರು ಜನರಿಗೆ ಬಿ. ಎಸ್.ಯಡಿಯೂರಪ್ಪ ಕೊಟ್ರು ಖಡಕ್ ವಾರ್ನಿಂಗ್..! ನಾವು ಹೇಳಿದ ಹಾಗೇ ಕೇಳಿ.. ಇಲ್ಲ ಅಂದ್ರೆ.? ಏನ್ ಮಾಡ್ತಾರೆ ಗೊತ್ತಾ.. ಈ ಸ್ಟೋರಿ ಓದಿ.
ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ವೈ ಅವರು, ಮತದಾರರ ಪಟ್ಟಿಆಧರಿಸಿ ಹಿರಿಯ ನಾಗರಿಕರನ್ನು ಗುರುತಿಸಿ ಲಸಿಕೆ ನೀಡಲಾಗುವುದು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಲಸಿಕೆ ಹಂಚಲಾಗುವುದು. ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ಮಾಡಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕಟ್ಟುನಿಟ್ಟಾಗಿ ದಂಡ ವಿಧಿಸುವುದು ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಕೊರೋನಾ ಕೇಸ್ಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ಸಹಕಾರ ನೀಡದೇ ಹೋದರೆ ದಂಡ ವಿಧಿಸುವುದು ಅನಿವಾರ್ಯವಾಗಲಿದೆ. ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಬೇಕು. ಶಾಲೆ ಕಾಲೇಜುಗಳಲ್ಲಿ ಲಸಿಕೆ ಹಂಚಿಕೆ ಬಗ್ಗೆಯೂ ಯಾವುದೇ ತೀರ್ಮಾನ ಆಗಿಲ್ಲ. ಈ ಸಂದರ್ಭದಲ್ಲಿ ಪೋಷಕರು ಕೂಡ ಎಚ್ಚರಿಕೆ ವಹಿಸಬೇಕು. ಗಡಿ ಭಾಗದಿಂದ ಬರುವವರಿಗೆ ಟೆಸ್ಟ್ ಕಡ್ಡಾಯ ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ..
ಕೋವಿಡ್ -19 ಅವಲೋಕನಕ್ಕಾಗಿ ತಜ್ಞರ ಜೊತೆ ಸಮಾಲೊಚನೆ ನಡೆಸಲಾಗಿದೆ. ತಜ್ಞರ ಅಭಿಪ್ರಾಯದಂತೆ ಕಳೆದ 14 ದಿನಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಬೀದರ್, ಕಲಬುರಗಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಂಗಳೂರು ನಗರದಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚಾಗಿವೆ. ಕೋವಿಡ್ ಎರಡನೇ ಅಲೆಯ ಮುನ್ಸೂಚನೆ ಇದೆ. ಹೆಚ್ಚು ಪಾಸಿಟಿವ್ ಇರುವ ಜಿಲ್ಲೆಗಳಲ್ಲಿ ಲಸಿಕೆ ಹೆಚ್ಚಳಕ್ಕೆ ಸಲಹೆ ನೀಡಲಾಗಿದೆ ಅಂತ ಸಿ ಎಂ ಹೇಳಿದ್ದಾರೆ.
ಸಿಎಂ ಸಭೆಯಲ್ಲಿ ತಜ್ಞರು ಕೊಟ್ಟ ಸಲಹೆಗಳು
- 1 – 6 ನೇ ತರಗತಿ ವಿದ್ಯಾರ್ಥಿಗಳಿಗೆ ಕ್ಲಾಸ್ ಆರಂಭ ಬೇಡ
- 6 ರಿಂದ 9 ನೇ ತರಗತಿಯವ್ರಿಗೆ ಆನ್ ಲೈನ್ ಕ್ಲಾಸ್ ಮಾತ್ರ ಮಾಡಿ. ತರಗತಿ ರದ್ದುಗೊಳಿಸಿ
- ಅಪಾರ್ಟ್ ಮೆಂಟ್ ಗಳಲ್ಲೂ ವ್ಯಾಕ್ಸಿನೇಷನ್ ಗೆ ವ್ಯವಸ್ಥ
- 60 ವರ್ಷದ ಒಳಗಿನವರಿಗೂ ವ್ಯಾಕ್ಸಿನೇಷನ್ ಗೆ ಸಲಹೆ
- ಮಾಸ್ಕ್ ಕಡ್ಡಾಯ ಜಾಗೃತಿ
- ಅಂತಾರಾಜ್ಯ ಪ್ರಯಾಣಿಜರಿಗ ಟೆಸ್ಟ್ ರಿಪೋರ್ಟ್ ಕಡ್ಡಾಯ
ಮಹಾರಾಷ್ಟ್ರ ಮತ್ತು ಕೇರಳದಿಂದ ಬರುವವರ ಮೇಲೆ ನಿಗಾ ವಹಿಸಲಾಗುವುದು. ಮಾ.17ರಂದು ಪ್ರಧಾನಿ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಈ ವೇಳೆ ಪ್ರಧಾನಿಗಳ ಸಲಹೆ ಪಡೆದು ಇನ್ನೂ ಬಿಗಿಯಾದ ಕ್ರಮ ತೆಗೆದುಕೊಳ್ಳಬಾರದು. ಮತ್ತೊಮ್ಮೆ ಲಾಕ್‌ಡೌನ್ ಆಗಬಾರದು ಎಂದರೆ ಜನರೇ ಹೆಚ್ಚಿನ ಸುರಕ್ಷತೆ ವಹಿಸಬೇಕು. ಜಾತ್ರೆಗಳಲ್ಲಿ ಹೆಚ್ಚಿನ ಜನ ಮಾಸ್ಕ್ ಹಾಕುವುದಿಲ್ಲ. ಜನರ ಸಹಕಾರ ಇಲ್ಲದೇ ನಾವು ಈ ಸಾಂಕ್ರಾಮಿಕದ ವಿರುದ್ಧ ಯಶಸ್ವಿಯಾಗಲ್ಲ ಎಂದು ಸಿಎಂ ಬಿಎಸ್ವೈ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.