ಕೊರೋನಾ ಲಸಿಕೆ ಪಡೆದ ವಿಪಕ್ಷ ನಾಯಕ ಸಿದ್ಧರಾಮಯ್ಯ..!ಕೊಟ್ಟಿದ್ದು ಗೊತ್ತೇ ಆಗ್ಲಿಲ್ಲ ಅಂದ್ರು ಮಾಜಿ ಮುಖ್ಯಮಂತ್ರಿ..
ಕೊರೋನಾ ಸೋಂಕಿಗೆ ಭಾರತ ನಿರ್ಮಿತ ಲಸಿಕೆ ವಿಶ್ವದಾಂದ್ಯಂತ ಮಾನ್ಯತೆ ಪಡೆದಿದೆ. ಭಾರತ ಮಾತ್ರವಲ್ಲದೇ ಅನೇಋಕ ಮುಂದುವರೆದ ರಾಷ್ಟ್ರಗಳೂ ಭಾರತ ನಿರ್ಮಿತ ಲಸಿಕೆಗೆ ಜೈ ಎಂದಿದೆ. ಇನ್ನು ಭಾರತದಲ್ಲಿ ಎರಡನೇ ಹಂತದ ಕೊರೋನಾ ವ್ಯಾಕ್ಸಿನ್ ಡ್ರೈವ್ ಪ್ರಾರಂಭವಾಗಿದೆ. ಈ ಹಿನ್ನೆಲೆಯಲ್ಲಿ ಕೊರೋನಾ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬಂದಿದ್ದಾರೆ. ಇವೆಲ್ಲದರ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಕೋವಿಡ್ ಲಸಿಕೆ ಪಡೆದಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂದು ಸಂಜೆ 5 ಗಂಟೆಗೆ ಕೊರೋನಾ ಸೋಂಕಿಗೆ ಲಸಿಕೆ ಪಡೆದುಕೊಂಡಿದ್ದಾರೆ. ಲಸಿಕೆ ಪಡೆದುಕೊಂಡ ಬಳಿಕ ಸಿದ್ದರಾಮಯ್ಯ ಅವರು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಕೊರೋನಾ ಸೋಂಕಿಗೆ ಲಸಿಕೆ ಪಡೆದ ಬಳಿಕ ಲಸಿಕೆ ಕೊಟ್ಟು ಆಯ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ವೈದ್ಯರು ಹಾ ಲಸಿಕೆ ನೀಡಿದ್ದೇವೆ ಎಂದಿದ್ದಾರೆ. ಅಯ್ಯೋ ನೋವೇ ಆಗಿಲ್ಲ ಲಸಿಕೆ ನೀಡಿದ್ದು ಕೂಡಾ ಗೊತ್ತಾಗ್ಲಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.