ಕಾಳಗಿ ತಾಲ್ಲೂಕಿನ ಸೂಗೂರು ಕೆ ಕ್ರಾಸ್ ಬಳಿ : ಶ್ವಾನ ತಂದ ಸಾವು
ಹೌದು ಕಲಬುರಗಿ ಜಿಲ್ಲೆ ಕಾಳಗಿ ತಾಲ್ಲೂಕಿನ ಸೂಗೂರು ಕೆ ಕ್ರಾಸ್ ಬಳಿ ಮನಕಲುಕುವ ಘಟನೆ ಮಂಗಳವಾರ ಬೆಳೆಗೆ 9 ಗಂಟೆ ಹೊತ್ತಿದೆ ನಡೆದಿದೆ. ಶ್ವಾನ ಒಂದು ಏಕಾಏಕಿ ಎದುರಿಗೆ ಬಂದ ಪರಿಣಾಮ, ಬೈಕ್ ಸವಾರ ಮತ್ತು ಶ್ವಾನ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿವೆ.
ಮೃತ ಪಟ್ಟ ವ್ಯಕ್ತಿ ಅರಣಕಲ್ ಗ್ರಾಮ ದ ಬಸವರಾಜ ಆರ್ ಕಲಶೆಟ್ಟಿ ಎಂಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದಾನೆ.
ಆತ ಕಾಳಗಿ ತಾಲ್ಲೂಕಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲಿ ರಾಜ್ಯಶಾಸ್ತ್ರ ವಿಷಯಾದ ಅಥಿತಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಬೆಳಗ್ಗೆ ಎಂದಿನಂತೆ ತಮ್ಮ ಕೆಲಸಕ್ಕೆ ಹೋಗುತಿದ್ದರು.
ಹೋಗುವಾಗ ಸೂಗೂರ ಕ್ರಾಸ್ ಬಳಿ ಶ್ವಾನ ಒಂದು ಎದುರಿಗೆ ಬಂದು ತನ್ನ ಜೊತೆಗೆ ಶಿಕ್ಷಕನನ್ನು ಸಾವಿನ ಮನೆಗೆ ಕರೆದುಕೊಂಡು ಹೋಗಿದೆ.
ಮೃತ ಪಟ್ಟ ಶಿಕ್ಷಕನಿಗೆ, ಪುಟ್ಟ, ಪುಟ್ಟ ಮೂರು ಹೆಣ್ಣುಮಕ್ಕಳು ಪತ್ನಿ, ಅಪಾರ ಬಂಧು ಬಳಗದವರನ್ನು ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು . ಈ ಪ್ರಕರಣ ಕಾಳಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ವರದಿ ಶಿವರಾಜ್