ಹಲಕರ್ಟಿ ಗ್ರಾಮಕ್ಕೆ ಬಸ್ ನಿಲ್ಲಿಸಲು ಎಐಡಿಎಸ್‍ಓ ಮನವಿ

ಕಲಬುರಗಿ-ಯಾದಗಿರಿ ಬಸ್ ಚಿತ್ತಾಪೂರ ತಾಲ್ಲೂಕಿನ ಹಲಕರ್ಟಿ ಗ್ರಾಮದಲ್ಲಿ ನಿಲ್ಲಿಸದೇ ಇರುವುದರಿಂದ ವಿಧ್ಯಾರ್ಥಿಗಳಿಗೆ ಸಮಸ್ಯೆ ಆಗುತ್ತಿದ್ದು, ಬಸ್ ನಿಲ್ಲಿಸಿ ಶಾಲಾ ಮಕ್ಕಳಿಗೆ ಅನೂಕೂಲ ಮಾಡಿಕೊಡಬೇಕೆಂದು ಆಲ್ ಇಂಡಿಯಾ ಡೆಮಾಕ್ರೇಟಿಕ್ ಸ್ಟೂಡೆಂಟ್ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತ್ತು.

ಪ್ರತಿಭmನೆಯನ್ನು ಉದ್ದೇಶಿಸಿ ಎಐಡಿಎಸ್‍ಓ ಅದ್ಯಕ್ಷ ಗೌತಮ್ ಪರತೂರಕರ್ ಮಾತನಾಡಿ, ವಾಡಿ ಪಟ್ಟಣದ ಶಾಲೆಗಳಿಗೆ ಹೋಗಬೆಕಾದರೆ ಹಲಕರ್ಟಿ ಗ್ರಾಮದಲ್ಲಿ ಬಸ್ ನಿಲ್ಲದೆ ಇರುವದರಿಂದ ವಿದ್ಯಾರ್ಥಿಗಳು ಕಾಲ್ನಡಿಗೆ ಮುಖಾಂತರ ತಮ್ಮ-ತಮ್ಮ ಶಾಲೆಗಳಿಗೆ ತೆರಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ಯಾರು ಹೊಣೆ? ಅಲ್ಲದೆ ದಿನಾಲು ವಿದ್ಯಾರ್ಥಿಗಳು ರಸ್ತೆ ಮಧ್ಯೆ ನಿಂತು ಬಸ್‍ಗಳನ್ನು ನಿಲ್ಲಿಸಿ ಹೋಗುವಂತಹ ಅನಿವಾರ್ಯತೆ ಉಂಟಾಗಿದೆ. ಮೊದಲೆ ಇದು ರಾಷ್ಟ್ರಿಯ ಹೆದ್ದಾರಿ (150) ಯಾಗಿದ್ದು, ವಾಹನಗಳು ಅತ್ಯಂತ ವೇಗವಾಗಿ ಸಂಚಾರ ಮಾಡುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಏನಾದರು ಸಮಸ್ಯೆ ಆದರೆ ಅಥವಾ ರಸ್ತೆ ಅಪಘಾತಗಳು ಸಂಭವಿಸಿದರೆ ಅದಕ್ಕೆ ನೇರವಾಗಿ ಸಾರಿಗೆ ಇಲಾಖೆಯೇ ಹೊಣೆಯಾಗಬೇಕಾಗುತ್ತದೆ ತಿಳಿಸಿದರು.

ಕಾರ್ಯದರ್ಶಿ ವೆಂಕಟೆಶ ದೇವದುರ್ಗಾ ಮಾತನಾಡಿ, ಯಾದಗಿರಿಯಿಂದ ವಾಡಿ ಪಟ್ಟಣ್ಣಕ್ಕೆ ಲೋಕಲ್ ಬಸ್‍ಗಳನ್ನು ಹೆಚ್ಚಿಸಬೇಕು. ಯಾದಗಿರಿ ಹಾಗೂ ಕಲಬುರಗಿ ವಿಭಾಗದಿಂದÀ ತೆರಳುವ ಎಲಾ ಬಸ್ ಗಳನ್ನು ಹಲಕರ್ಟಿ ಗ್ರಾಮಕ್ಕೆ ನಿಲ್ಲಿಸಬೇಕು. ಲಾಡ್ಲಾಪುರ ಗ್ರಾಮದಿಂದ ಬೈಪಾಸ್ ಆಗಿ ಹೋಗುತ್ತಿರುವ ಎಲ್ಲ ಬಸ್ ಗಳನ್ನು ಊರಿನ ಒಳಗಡೆಯಿಂದ ಹೋಗಬೇಕೆಂದು ಆಗ್ರಹಿಸಿದರು. ಸದಸ್ಯರಾದ ಅರುಣ್ ಕುಮಾರ ಹಿರೇಬಾನರ, ಸಿದ್ದರಾಜ ಮದ್ರಿ, ಗೊವಿಂದ ಹೆಳವಾರ, ಯುವಜನ ನಾಯಕರಾದ ಮಲ್ಲಿನಾಥ ಹುಂಡೇಕಲ್, ರೈತ ನಾಯಕರಾದ ಶಿವಕುಮಾರ ಆಂದೊಲ, ವಿದ್ಯಾರ್ಥಿಗಳಾದ ಅಭೀಷೆಕ್, ವಿನೊದ್, ಸಾಬಣ್ಣ, ಕಿರಣ್, ವೀರೆಶ್, ರೋಹಿತ್, ಅನಿಲ್, ಅನುರಾಧ, ಶೋಭಾ, ಮಮತಾ, ಅಂಬಿಕಾ, ಬಾಗ್ಯಶ್ರೀ, ಉಪಸ್ಥಿತರಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *