ಕಲಬುರಗಿ : ವ್ಯಂಗ್ಯ ಚಿತ್ರ ಕಲೆ ಪ್ರಭಾವಶಾಲಿ ಮಾಧ್ಯಮ
ಕಲಬುರಗಿ : ಸಮಾಜದ ಅಂಕುಡೊಂಕುಗಳನ್ನು ಒರ್ವ ವ್ಯಂಗ್ಯ ಚಿತ್ರಕಲಾವಿದ ಪರಿಣಾಮಕಾರಿಯಾಗಿ ಚಿತ್ರಿಸುತ್ತಾನೆ ಎಂದು ಹಿರಿಯ ಚಿತ್ರಕಲಾವಿದರು ಸಂಶೋಧಕ ಡಾ ರೆಹಮಾನ ಪಟೇಲ ಹೇಳಿದರು.
ಆಮಂತ್ರಣ ಹೋಟೆಲ ಆವರಣದಲ್ಲಿ ವ್ಯಂಗ್ಯ ಚಿತ್ರಕಾರ ಎಂ ಸಂಜೀವ ಅವರ ವ್ಯಂಗ್ಯ ಚಿತ್ರಗಳ ಪ್ರದರ್ಶನ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವ್ಯವಸ್ಥೆಯ ದೋಷಗಳನ್ನು ವ್ಯಂಗ್ಯ ಚಿತ್ರಕಾರರು ಪರಿಣಾಮಕಾರಿಯಾಗಿ ಹಾಸ್ಯದ ಲೇಪನದೊಂದಿಗೆ ಅಭಿವ್ಯಕ್ತ ಪಡಿಸುತ್ತಾರೆ ಆದ್ದರಿಂದ ವ್ಯಂಗ್ಯ ಚಿತ್ರಗಳನ್ನು ಪತ್ರಿಕಾ ಮಾಧ್ಯಮ ಬಳಸಿ ಕೊಳ್ಳುತ್ತದೆ ಎಂದರು.
ವೆಂಕಟೇಶ ಕಡೆಚೂರ ಸಸಿಗೆ ನೀರು ಹಾಕಿ ಉದ್ಘಾಟಿಸಿದರು. ಹೋಟೆಲ ಉದ್ದಿಮೆದಾರರ ಸಂಘದ ಕಾರ್ಯದರ್ಶಿ ನರಸಿಂಹ ಮೆಂಡನ್ ಮಾತನಾಡಿದರು.
ಎಂ ಸಂಜೀವ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರಕ್ಷಿತಾಭಟ ನಿರೂಪಿಸಿ ವಂದಿಸಿದರು.
ದಯಾನಂದ ಶೆಟ್ಟಿ, ರಾಜಶೇಖರ ಎಸ್, ಲಕ್ಷ್ಮೀಕಾಂತ ಮನೋಕರ, ರೇವಣಸಿದ್ಧಪ್ಪಾ ಹೊಟ್ಟಿ, ಬಿಎಂ.ರಾವೂರ, ಹಾಜೀಮ ಮಲ್ಲಂಗ, ಅರವಿಂದ ಟೋಣಪೆ, ನಾರಾಯಣ ಎಂ. ಜೋಶಿ ಸೇರಿದಂತೆ ಮುಂತಾದವರು ಇದ್ದರು.
ಡಾ ಎಸ್ ಎಂ. ನೀಲಾ, ಮಹ್ಮದ ಅಯಾಜುದ್ದೀನ ಪಟೇಲ, ಸಂದಾನಂದ ಪೆರ್ಲಾ, ಹೋರಾಟಗಾರ ನಾಗಲಿಂಗಯ್ಯಾ ಮಠಪತಿ ಹಾಗೂ ಕನ್ನಡ ರಕ್ಷಣಾವೇದಿಕೆ ಜಿಲ್ಲಾ ಅಧ್ಯಕ್ಷ ಮಂಜುನಾಥ ನಾಲವಾರಕರ ವ್ಯಂಗ್ಯ ಚಿತ್ರ ಎಂ.ಸಂಜೀವ ಬಿಡಿಸಿದರು.