ಆಳಂದ : ಕೇಂದ್ರ ಸರ್ಕಾರದ ತೈಲಬೆಲೆ ಏರಿಕೆ ಖಂಡಿಸಿ ಬೃಹತ್ ಪ್ರತಿಭಟನೆ
ಆಳಂದ : ತಾಲೂಕಿನ ಚಿಂಚನಸೂರ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಸಿಪಿಐಎಂ ಮುಖಂಡ ಪಾಂಡುರಂಗ ಮಾವಿನ ಕರ್ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಪ್ರತಿಭಟಿಸಿ ಪ್ರತಿಭಟನೆ ನಡೆಸಲಾಯಿತು ಈ ಸಂದರ್ಭದಲ್ಲಿ ಸಿಪಿಐಎಂ ಮುಖಂಡ ಪಾಂಡುರಂಗ ಮಾವಿನಕೆರೆ ಮಾತನಾಡಿ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ಜೊತೆಗೆ ಜನಸಾಮಾನ್ಯರ ದಿನಬಳಕೆ ವಸ್ತುಗಳ ಆದ ಪೆಟ್ರೋಲ್ ಡೀಸೆಲ್ ಗ್ಯಾಸ್ ಸಿಲಿಂಡರ್ ಅಡುಗೆ ಎಣ್ಣೆ ದರ ಹೆಚ್ಚಳವಾಗಿದ್ದು ಇದರಿಂದ ಜನಸಾಮನ್ಯರ ಬದುಕು ಭರ್ಬರವಾಗುತ್ತದೆ. ಬಡ ಕುಟುಂಬಗಳು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದು ಕೂಡಲು ಬೆಲೆಯನ್ನು ಕಡಿತ ಮಾಡದಿದ್ದರೆ ತಾಲೂಕಿನಾದ್ಯಂತ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿ ದಹಿಸಿ ಕೇಂದ್ರ ಸರಕಾರದ ವಿರುದ್ದ ದಿಕ್ಕಾರ ಕೂಗಿದರು. ಈ ಕಾರ್ಯಕ್ರಮದಲ್ಲಿ ಮುಖಂಡರಾದ ಹನುಮಂತ ಕೋಟೆ ಸುನಿಲ್ ಮದನ್ ಕೃಷ್ಣಪ್ಪ ದನ್ನಿ ಪ್ರವೀಣ ದಾಡಿ ಸಚಿನ್ ದಾಡಿ ದಿಲೀಪ್ ಕೋಟೆ ಬಸವರಾಜ್ ದಂಗಲ್ ಮಂಜುನಾಥ್ ಮಾವಿನ ಅನುಸೂಯ ಮದನ್ ಜಟ್ಟಪ್ಪ ಮಾವಿನ ಹಾಗೂ ಇತರ ಗ್ರಾಮಸ್ಥರು ಭಾಗವಹಿಸಿದ್ದರು