ಬ್ರಾಹ್ಮಣರ ಹೆಣ್ಮಕ್ಕಳು ಬೇರೆ ಜಾತಿಯವರನ್ನು ಮದುವೆಯಾಗಬೇಡಿ ಎಂಬ ಹೇಳಿಕೆ ವಿವಾದ: ಪೇಜಾವರ ಶ್ರೀ ಸ್ಪಷ್ಟನೆ

ಪುತ್ತೂರು: ಬ್ರಾಹ್ಮಣರು ತಮ್ಮ ಮನೆಯ ಹೆಣ್ಮಕ್ಕಳು ಬೇರೆ ಜಾತಿಯವರನ್ನು ಮದುವೆಯಾಗದಂತೆ ನೋಡಿಕೊಳ್ಳಬೇಕು ಎಂದು ನಾನು ಹೇಳಿಲ್ಲ. ಶಿವಮೊಗ್ಗದಲ್ಲಿ ನಾನು ಮಾಡಿದ ಭಾಷಣವನ್ನು ತಿರುಚುವ ಮೂಲಕ ಸಮಾಜದ ಒಗ್ಗಟ್ಟು ಮುರಿಯುವ ಕೆಲಸಕ್ಕೆ ಕೈ ಹಾಕಲಾಗಿದೆ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

ಹಿಂದೂ ಜಾಗರಣ ವೇದಿಕೆ ಆಶ್ರಯದಲ್ಲಿ ಭಾನುವಾರ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಹಿಂದೂ ಐಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು, ಹಿಂದೂ ಸಮಾಜದ ಹೆಣ್ಮಕ್ಕಳು ಕಣ್ಮರೆಯಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಅವರು ಎಲ್ಲಿಹೋಗುತ್ತಿದ್ದಾರೆ ಎಂಬುದು ಗಂಭೀರ ವಿಚಾರ.

ಇದನ್ನು ತಡೆಯಲು ಮಾತೃಮಂಡಳಿ ರಚಿಸಬೇಕು ಎಂದು ನಾನು ಶಿವಮೊಗ್ಗದ ಭಾಷಣದಲ್ಲಿ ಹೇಳಿದ್ದೇನೆಯೇ ಹೊರತು, ಬ್ರಾಹ್ಮಣರ ಹೆಣ್ಮಕ್ಕಳನ್ನು ಬೇರೆ ಸಮಾಜದವರಿಗೆ ಮದುವೆ ಮಾಡಿಕೊಡಬಾರದು ಎಂದು ಹೇಳಿಲ್ಲ. ನನ್ನ ಭಾಷಣವನ್ನು ತಿರುಚಲಾಗಿದೆ. ಸಮಾಜ ಒಡೆಯುವ ಯತ್ನವಿದು. ಸಮಾಜ ಒಡೆಯುವವರು ನಾನಾ ರೂಪದಲ್ಲಿ ಬರಬಹುದು. ಇದರ ಬಗ್ಗೆ ಎಚ್ಚರ ಇರಬೇಕು ಎಂದು ಶ್ರೀಗಳು ನುಡಿದರು.

ದಿಕ್ಸೂಚಿ ಭಾಷಣ ಮಾಡಿದ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ ಕಾರಂತ, ‘ಹಿಂದೂ ಯುವ ಜನಾಂಗ ರಾಜಕೀಯ, ಸಂಘಟನೆಗಳ ಹೆಸರಿನಲ್ಲಿ ಚದುರಿ ಹೋಗದೆ ಧರ್ಮದ ರಕ್ಷಣೆಗಾಗಿ ಸಂಘಟಿತರಾಗಬೇಕಾಗಿದೆ. ಇದಕ್ಕಾಗಿ ಸಂಘಟಿತ ಧ್ವನಿ ಮೂಡಿ ಬರಬೇಕಾಗಿದೆ’ ಎಂದರು.

ಒಡಿಯೂರು ಕ್ಷೇತ್ರದ ಗುರು ದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ‘ಇಂದಿನ ಕಾಲಘಟ್ಟದಲ್ಲಿ ಹಿಂದೂ ಧರ್ಮದ ಮೇಲೆ ನಡೆಯುತ್ತಿರುವ ಪ್ರಹಾರಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ. ಈ ನಿಟ್ಟಿನಲ್ಲಿ ಯುವ ಜನಾಂಗ ಎಚ್ಚೆತ್ತುಕೊಳ್ಳಬೇಕಾದುದು ಅತ್ಯಗತ್ಯ’ ಎಂದರು

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *