ಸಂಡೂರು : ಸಾರ್ವಜನಿಕರಿಗೆ ಅನುಕೂಲ ರೀತಿಯಲ್ಲಿ ಕೆರೆ ಅಭಿವೃದ್ಧಿಗೆ ಕರೆ
ಸಂಡೂರು : ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಕೆರೆಯ ಅಭಿವೃದ್ದಿ ಪಡಿಸುವ ಮೂಲಕ ಸಾರ್ವಜನಿಕರ ಸದ್ಭಳಕೆಯಾಗಬೇಕು, ಅಲ್ಲದೆ ಅವರ ರಕ್ಷಣೆ ಬಹುಮುಖ್ಯವಾದುದು ಎಂದು ಸ್ಮಯೋರ್ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ , ಎಂ.ವೈ.ಘೋರ್ಪಡೆಯವರ ಮೊಮ್ಮಗ ಬೆಹರ್ಜಿ ಘೋರ್ಪಡೆ ತಿಳಿಸಿದರು.
ಅವರು ಇಂದು ಪಟ್ಟಣದ ಶಿವಪುರ ಕೆರೆಯ ಅಭಿವೃದ್ದಿ ಕಾಮಗಾರಿಗಳ ಭೂಮಿಪೂಜೆಯನ್ನು ನೆರವೇರಿಸಿ ಮಾತನಾಡಿ ಕೆರೆಯನ್ನು ಅಭಿವೃದ್ದಿ ಪಡಿಸುತ್ತಿರುವುದು ಉತ್ತಮವಾದ ಸಂಗತಿಯಾಗಿದೆ, ಅದರೆ ಅಲ್ಲಿ ಹಿರಿಯನಾಗರೀಕರು, ಮಹಿಳೆಯರು ನಿರ್ಭಿತಿಯಿಂದ ಓಡಾಡುವ ವಾತಾವರಣವಾಗಬೇಕು, ನಾಲ್ಕು ಕಡೆಗಳಲ್ಲಿ ಯಾವುದೇ ಕೆಟ್ಟ ಘಟನೆಗಳು ನಡೆಯಬಾರದು, ಅಲ್ಲದೆ ಭಾರೀ ವಾಹನಗಳ ಸಂಚಾರ ಮಾಡಬಾರದು, ಶುದ್ಧಗಾಳಿ, ಬೆಳಕು ನೀಡುವ ಈ ಸ್ಥಳದಲ್ಲಿ ಮರಗಿಡಗಳನ್ನು ಬೆಳೆಸುವ ಮೂಲಕ ಅಭಿವೃದ್ದಿಯಾಗಬೇಕು, ಅದಕ್ಕೆ ಸ್ಥಳೀಯ ಆಡಳಿತದ ಪೂರ್ಣ ಕಾರ್ಯಪ್ರಮುಖವಾದುದು, ಯಾವುದೇ ತರಹದಲ್ಲಿ ಸಮಾಜಕ್ಕೆ ಮಾರಕವಾದ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳುವುದು ಅದ್ಯ ಕರ್ತವ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಶಾಸಕ ಈ.ತುಕರಾಂ ಅವರು ಮಾತನಾಡಿ ಡಿ.ಎಂ.ಎಫ್ ನಿಧಿ(ಜಿಲ್ಲಾ ಖನಿಜ ನಿಧಿ) 2.50 ಕೋಟಿ ವೆಚ್ಚದಲ್ಲಿ ಕೆರೆಯ ಅಭಿವೃದ್ದಿಯನ್ನು ಮಾಡುವ ಮೂಲಕ ಒಂದು ಪ್ರವಾಸಿ ತಾಣವಾಗಿಸಲಾಗುತ್ತಿದೆ, ಇಲ್ಲಿ ಯಾವುದೇ ರೀತಿಯ ಕೆಟ್ಟ ಕಾರ್ಯಗಳು ನಡೆಯಬಾರದು, ಹಿರಿಯನಾಗರಿಕರು, ವಿದ್ಯಾರ್ಥಿಗಳು, ಮಹಿಳೆಯರು ಮುಕ್ತವಾಗಿ ಇರುವ ರೀತಿಯಲ್ಲಿ ಕಾವಲುಗಾರರನ್ನು ಸಹ ನೇಮಿಸುವಂತಹ ಕಾರ್ಯ, ಶೌಚ್ಚಾಲಯ ನಿರ್ಮಾಣ, ನೀರಿನ ವ್ಯವಸ್ಥೆ, ಪುಟ್ ಪಾತ್ ನಿರ್ಮಾಣ, ಕೆರೆಗೆ ಬೇಕಾದ ಚೈನ್‍ಲಿಂಗ್ ಪೆನ್ಸಿಂಗ್ ವ್ಯವಸ್ಥೆ ಮಾಡುವ ಮೂಲಕ ಉತ್ತಮ ಪ್ರವಾಸಿ ತಾಣವಾಗಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿ ಹನುಮಂತರಡ್ಡಿ ಮಾಹಿತಿ ನೀಡಿ ಒಟ್ಟು 2.25 ಕೋಟಿ ವೆಚ್ಚದ ವಿವಿಧ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತಿದೆ, ಪ್ರಮುಖವಾಗಿ ವಿವ್ ಪಾಯಿಂಟ್, ಪಾರ್ಕ ವ್ಯವಸ್ಥೆ, ಬೋರ್‍ವೆಲ್, ಮುಖ್ಯವಾಗಿ ರಕ್ಷಣೆಗೆ ಚೈನ್‍ಲಿಂಕ್ ಪೆನ್ಸಿಂಗ್ ವ್ಯವಸ್ಥೆ, ಕೆರೆಗೆ ಬೇಕಾದ ನೀರು ಬರಲು ಫೀಡರ್ ಚನಲ್,ಸೇತುವೆ, ಮಾಡುವ ಮೂಲಕ ಸಾರ್ವಜನಿಕರಿಗೆ ಉತ್ತಮ ವ್ಯವಸ್ಥೇ ಇದಾಗಲಿದೆ ಎಂದರು.
ಸಮಾರಂಭದಲ್ಲಿ ಎಂ.ವೈ.ಘೋರ್ಪಡೆಯವರ ಮೊಮ್ಮಗ ಏಕಾಂಬರ ಘೋರ್ಪಡೆ, ಪುರಸಭೆಯ ಅಧ್ಯಕ್ಷೆ ಅನಿತಾವಸಂತಕುಮಾರ್, ಮಾಜಿ ಅಧ್ಯಿಕ್ಷೆ ಅಶಾಲತಾ ಸೋಮಪ್ಪ, ಇತರ ಸದಸ್ಯರು, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು, ವಿವಿಧ ಜನಪ್ರತಿನಿಧಿಗಳು, ಸತ್ಯಪ್ಪ, ಜೆ.ಬಿ.ಟಿ. ಬಸವರಾಜ, ಜಯಣ್ಣ, ಪುರಸಭೆಯ ಸದಸ್ಯ ಕೆ.ವಿ. ಸುರೇಶ್, ಉಪಾಧ್ಯಕ್ಷ ಈರೇಶ್, ವಸಂತಕುಮಾರ್ ಇತರ ಹಲವಾರು ಗಣ್ಯರು ಉಪಸ್ಥಿತರಿದ್ದರು.