ಯತ್ನಾಳ್ ಸುಮ್ನೆ ಬಿಟ್ರೆ ಪಕ್ಷಕ್ಕೆ ಭಾರಿ ಡ್ಯಾಮೇಜ್…! ಸಿಎಂ ಯಡಿಯೂರಪ್ಪಗೆ 40ಕ್ಕೂ ಹೆಚ್ಚು ಶಾಸಕರ ದೂರು…!
ನಿನ್ನೆ ರಾತ್ರಿ ಸಿಎಂ ನಿವಾಸ ಕಾವೇರಿಗೆ ಸುಮಾರು 40ಕ್ಕೂ ಹೆಚ್ಚು ಬಿಜೆಪಿ ಶಾಸಕರ ನಿಯೋಗ ಭೇಟಿ ನೀಡಿ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಯ್ತು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಹರತಾಳು ಹಾಲಪ್ಪ, ಎಂ.ಪಿ ಕುಮಾರಸ್ವಾಮಿ ಸೇರಿದಂತೆ 50ಕ್ಕೂ ಹೆಚ್ಚು ಶಾಸಕರು ಭೇಟಿ ನೀಡಿದ್ರು. ಕ್ಷೇತ್ರಕ್ಕೆ ಅನುದಾನ ನೀಡಿಕೆ, ಅಭಿವೃದ್ಧಿ ಕಾರ್ಯಗಳು, ಶಾಸಕರ ಅನುದಾನ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ರು.
ಇದೇ ವೇಳೆ ಸಿಎಂ ಜೊತೆಗಿನ ಮಾತುಕತೆ ವೇಳೆ ರೇಣುಕಾಚಾರ್ಯ ಸೇರಿದಂತೆ ಕೆಲ ಶಾಸಕರು ಯತ್ನಾಳ್ ವಿಷಯ ಪ್ರಸ್ತಾಪಿಸಿದ್ದಾರೆ. ಪದೇ ಪದೇ ಮುಖ್ಯಮಂತ್ರಿ ಕುಟುಂಬದ ವಿರುದ್ಧ ಹೇಳಿಕೆ ನೀಡ್ತಿದ್ರೂ, ಕ್ರಮ ಕೈಗೊಳ್ಳದಿರುವ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ. ಹೈಕಮಾಂಡ್ಗೆ ದೂರು ನೀಡಿ ಅವರನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಆಗ್ರಹಿಸಿದ್ದಾರೆ.