ಕರ್ನಾಟಕ ಕ್ಷಯ ಮುಕ್ತ ರಾಜ್ಯವನ್ನಾಗಿಸಲು ಕ್ರಮ: ಡಾ. ರಾಜಶೇಖರ ಮಾಲಿ

ಜಿಲ್ಲೆಯಲ್ಲಿ 2019 ರಲ್ಲಿ 4,640 ಕ್ಷಯ ರೋಗಿಗಳಿದ್ದರು. 2020ರಲ್ಲಿ ಕೋವಿಡ್ ಸೋಂಕಿನ ಕಾರಣ ಹೆಚ್ಚಿನ ರೋಗಿಗಳು ಆಸ್ಪತ್ರೆಗೆ ಬಾರದಿರುವುದರಿಂದ ಕೇವಲ 2,714 ಪ್ರಕರಣಗಳು ಮಾತ್ರ ದಾಖಲಾಗಿವೆ. ಇನ್ನೂ 2021ರ ಮಾರ್ಚ್ 19ರ ವರೆಗೆ 741 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.

ಕಲಬುರಗಿ: ಕರ್ನಾಟಕವನ್ನು 2025 ರೊಳಗಾಗಿ ಕ್ಷಯರೋಗ ಮುಕ್ತ ರಾಜ್ಯವನ್ನಾಗಿ ಮಾಡಲು ಇಲಾಖೆಯು ಪಣ ತೊಟ್ಟಿದೆ ಎಂದು ಕಲಬುರಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ ತಿಳಿಸಿದರು.

ಜಿಲ್ಲಾ ಸಮೀಕ್ಷಣಾ ಘಟಕದಲ್ಲಿ ವಿಶ್ವ ಕ್ಷಯರೋಗ ದಿನದ ನಿಮಿತ್ತ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾರ್ಚ್ 24 ರಂದು “ಕ್ಷಯರೋಗ ನಿರ್ಮೂಲನೆಗೊಳಿಸಲು ಕಾಲ ಘಟಿಸುತ್ತಿದೆ”, ಟಿ ಬಿ. ಸೋಲಿಸಿ ಕರ್ನಾಟಕ ಗೆಲ್ಲಿಸಿ” ಎಂಬ ಘೋಷ ವಾಕ್ಯದೊಂದಿಗೆ ಕ್ಷಯ ಮುಕ್ತ ರಾಜ್ಯವಾಗಲು ನಾವೆಲ್ಲರೂ ಜೊತೆಯಾಗೋಣ ಎಂದು ಕರೆ ನೀಡಿದರು.

ಡಾ. ರಾಜಶೇಖರ ಮಾಲಿ

ಕೋವಿಡ್ ಹಿನ್ನೆಲೆ, ಈ ಬಾರಿ ಯಾವುದೇ ರೀತಿಯ ಜಾಥಾ, ರ‍್ಯಾಲಿಗಳು ಇರುವುದಿಲ್ಲ. ವಿಶ್ವ ಕ್ಷಯರೋಗ ದಿನಾಚರಣೆ ಅಂಗವಾಗಿ ಶಾಲಾ – ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕ್ಷಯರೋಗದ ಕುರಿತ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಗುವುದು. ಗ್ರಾಮ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾಯಿತ ಪ್ರತಿನಿಧಿಗಳಿಗೂ ಕ್ಷಯರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ತಾಲೂಕಿನ ಬಸ್‍ಸ್ಟಾಂಡ್‍ಗಳಲ್ಲಿಯೂ ಶ್ರವ್ಯ ಮಾಧ್ಯಮದ ಮೂಲಕ ಕ್ಷಯರೋಗ ಕುರಿತ ಜಿಂಗಲ್ಸ್ ಪ್ರಸಾರ ಮಾಡಲಾಗುತ್ತಿದೆ ಎಂದರು.

2015ರಲ್ಲಿ ದೇಶದಲ್ಲಿ ಪ್ರತಿ ಲಕ್ಷಕ್ಕೆ 192 ಕ್ಷಯರೋಗಿಗಳು ಇದಿದ್ದನ್ನು, 2025ಕ್ಕೆ ಪ್ರತಿ ಲಕ್ಷಕ್ಕೆ 44ಕ್ಕೆ ಇಳಿಸುವ ವಿಶ್ವಾಸ ಹೊಂದಲಾಗಿದೆ. ಅದೇ ರೀತಿ ಸಾವಿನ ಸಂಖ್ಯೆ ಪ್ರತಿ ಲಕ್ಷಕ್ಕೆ 15 ರಿಂದ 3ಕ್ಕೆ ಇಳಿಸಲು ಎಲ್ಲ ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದೆ.

ಜಿಲ್ಲೆಯಲ್ಲಿ 2019 ರಲ್ಲಿ 4,640 ಕ್ಷಯ ರೋಗಿಗಳಿದ್ದರು. 2020ರಲ್ಲಿ ಕೋವಿಡ್ ಸೋಂಕಿನ ಕಾರಣ ಹೆಚ್ಚಿನ ರೋಗಿಗಳು ಆಸ್ಪತ್ರೆಗೆ ಬರದಿರುವುದರಿಂದ ಕೇವಲ 2,714 ಪ್ರಕರಣಗಳು ಮಾತ್ರ ದಾಖಲಾಗಿವೆ. ಇನ್ನೂ 2021ರ ಮಾರ್ಚ್ 19ರ ವರೆಗೆ 741 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.

ಕ್ಷಯರೋಗದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರು ಮನೆ – ಮನೆ ಭೇಟಿ ನೀಡುವರು. ತಲಾ 10 ಜನರ ಎನ್.ಎಸ್.ಎಸ್. ತಂಡ ಅಂಗಡಿ, ಮುಂಗಟ್ಟು ಸೇರಿದಂತೆ ವಿವಿಧ ಕಡೆ ಭೇಟಿ ನೀಡಿ ರೋಗದ ಕುರಿತು ಅರಿವು ಮೂಡಿಸಲಿದ್ದಾರೆ. ಸರ್ಕಾರವು ಕ್ಷಯರೋಗಿಗೆ ನಿಕ್ಷಯ ಪೋಷಣಾ ಯೋಜನೆಯಡಿ ಪ್ರತಿ ತಿಂಗಳು 500 ರೂ. ಧನಸಹಾಯ ಹಾಗೂ ಕ್ಷಯರೋಗ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಖಾಸಗಿ ಹಾಗೂ ಆಶಾ ಕಾರ್ಯಕರ್ತೆಯರಿಗೆ 1000 ರೂ. ಗಳ ಗೌರವ ಧನ ನೀಡಲಾಗುವುದು ಎಂದು ತಿಳಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *