ಇಂದು ನಟಿ ಕಂಗನಾ ರನಾವತ್ ಜನ್ಮದಿನ. ’ಅತ್ಯುತ್ತಮ ನಟಿ ಪ್ರಶಸ್ತಿ’ ಘೋಷಣೆಯ ಖುಷಿ, ’ಥಲೈವೀ’ ಫಿಲ್ಮ್ ನ ಟ್ರೈಲರ್ ರಿಲೀಸ್
ಮಾರ್ಚ್ ೨೩ ನಟಿ ಕಂಗನಾ ರನಾವತ್ ಅವರ ೩೪ನೇ ಜನ್ಮದಿನ (೧೯೮೭) .ಈ ಬಾರಿ ಅತಿ ಹೆಚ್ಚು ಖುಷಿ. ನಿನ್ನೆ ೬೭ನೇ ರಾಷ್ಟ್ರೀಯ ಫಿಲ್ಮ್ ಪ್ರಶಸ್ತಿಯ ಘೋಷಣೆ ಆಗಿದೆ. ಕಂಗನಾ ರನಾವತ್ ಅವರಿಗೆ ತಮ್ಮ ಫಿಲ್ಮ್ ಬದುಕಿನ ನಾಲ್ಕನೇ ರಾಷ್ಟ್ರೀಯ ಪ್ರಶಸ್ತಿ ದೊರೆತಿರುವ ಖುಷಿ. ೨೦೧೯ರ ಫಿಲ್ಮ್ ಗಳನ್ನು ಈ ಬಾರಿ ಪ್ರಶಸ್ತಿಗಳಿಗೆ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ ಕೊರೊನಾ ಕಾರಣ ಪ್ರಶಸ್ತಿ ಘೋಷಣೆ ಆಗಿರಲಿಲ್ಲ.

ಕಂಗನಾ ರನಾವತ್ ಅವರ ’ಮಣಿಕರ್ಣಿಕಾ’ ಮತ್ತು ’ಪಂಗಾ’ ಅಭಿನಯಕ್ಕಾಗಿ ಅವರಿಗೆ ಅತ್ಯತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ. ಇದಕ್ಕಿಂತ ಮೊದಲು ’ಫ್ಯಾಶನ್’ (೨೦೦೮,) ಗೆ ಪೋಷಕ ನಟಿ ಪ್ರಶಸ್ತಿ, ’ಕ್ವೀನ್’ (೨೦೧೪) ಗೆ ಅತ್ಯುತ್ತಮ ನಟಿ ಪ್ರಶಸ್ತಿ, ’ತನು ವೆಡ್ಸ್ ಮನು ರಿಟರ್ನ್ಸ್’(೨೦೧೫) ಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ.ಇದೀಗ ನಾಲ್ಕನೇ ಬಾರಿ ಅತ್ಯತ್ತಮ ನಟಿ ಪ್ರಶಸ್ತಿ ಕಂಗನಾರ ಪಾಲಿಗೆ ಬಂದಿದೆ .
ಮತ್ತೊಂದೆಡೆ ಇಂದು ಕಂಗನಾರ ಅಫ್ ಕಮಿಂಗ್ ಫಿಲ್ಮ್ ’ತಲೈವೀ’ ಇದರ ಟ್ರೈಲರ್ ರಿಲೀಸ್ ಮಾಡಲಿದ್ದಾರೆ.
ಈ ಟ್ರೈಲರ್ ಮುಂಬೈ ಮತ್ತು ಚೆನ್ನೈ ಎರಡೂ ಶಹರಗಳಲ್ಲಿ ರಿಲೀಸ್ ಮಾಡಲಾಗುವುದು. ತಲೈವೀ ತಮಿಳುನಾಡಿನ ಮಾಜಿ ಸಿ ಎಂ ಜಯಲಲಿತಾರ ಬದುಕಿನ ಕಥೆಯಾಧಾರಿತ ಫಿಲ್ಮ್.
ಇಂದು ಮಂಗಳವಾರ ಕಂಗನಾ ಅವರ ಜನ್ಮದಿನ .ತಲೈವೀ ಟ್ರೈಲರ್ ಬಿಡುಗಡೆಯ ಮೊದಲು ಮೊನ್ನೆ ಚಿತ್ರೀಕರಣದ ಸಂದರ್ಭದಲ್ಲಿನ ಕೆಲವು ಫೋಟೋಗಳನ್ನು ಕಂಗನಾ ಶೇರ್ ಮಾಡಿದ್ದಾರೆ. ಈ ಫಿಲ್ಮ್ ಗಾಗಿ ಕಂಗನಾ ಅಂದು ೨೦ ಕಿಲೋ ತೂಕವನ್ನು ಹೆಚ್ಚಿಸಿದ್ದರು, ಅರ್ಥಾತ್ ಜಯಲಲಿತಾರಂತೆ ಕಾಣಲು. ಶೂಟಿಂಗ್ ನಂತರ ಇದೀಗ ಆ ತೂಕವನ್ನು ಇಳಿಸಿದ್ದಾರೆ.

ಶೂಟಿಂಗ್ ಸಂದರ್ಭದ ಚಿತ್ರಗಳನ್ನು ಕಂಗನಾ ಶೇರ್ ಮಾಡುತ್ತಾ – “ತಲೈವೀ ಟ್ರೇಲರ್ ಲಾಂಚ್ ಗಾಗಿ ಇನ್ನು ಕೆಲವೇ ಕ್ಷಣಗಳು” ಎಂದಿದ್ದಾರೆ. “ದೇಹದ ತೂಕವನ್ನು ಹೆಚ್ಚಿಸುವುದು ಮತ್ತು ೨೦ ಕಿಲೋ ತೂಕ ಇಳಿಸುವುದು ಸುಲಭದ ಸಂಗತಿಯಾಗಿರಲಿಲ್ಲ. ಇದೊಂದು ಸವಾಲಾಗಿತ್ತು” ಎಂದಿದ್ದಾರೆ ಕಂಗನಾ.
ಕಳೆದ ಐದು ತಿಂಗಳ ಹಿಂದೆಯೇ ಸೋಶಿಯಲ್ ಮೀಡಿಯಾದಲ್ಲಿ ತನ್ನ ದೇಹದ ತೂಕವನ್ನು ಹೆಚ್ಚಿಸುತ್ತಿರುವುದನ್ನು ಕಂಗನಾ ತಿಳಿಸಿದ್ದರು. ಅವರು ಆ ಸಂದರ್ಭದಲ್ಲಿ ಯೋಗ ಸೆಶನ್ ನ ಕೆಲವು ಫೋಟೋಗಳನ್ನೂ ಹಾಕಿದ್ದರು. “ಶೀಘ್ರ ಮಲಗೋದು ಮತ್ತೆ ಜಾಗಿಂಗ್, ವಾಕ್… ಏನೆಲ್ಲ ನನ್ನ ಜೊತೆಗಿತ್ತು ಆ ಸಂದರ್ಭದಲ್ಲಿ” ಎಂದಿದ್ದರು.
ತಲೈವೀ ಜಯಲಲಿತಾರ ಬಯೋಗ್ರಫಿ. ಎಪ್ರಿಲ್ ೨೩ರಂದು ಈ ಫಿಲ್ಮ್ ಹಿಂದಿ ತಮಿಳು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ . ಎ ಎಲ್. ವಿಜಯ್ ನಿರ್ದೇಶನದಲ್ಲಿ ನಿರ್ಮಿಸಿರುವ ಈ ಫಿಲ್ಮ್ ಕಳೆದ ವರ್ಷ ಜೂನ್ ೨೬ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಲಾಕ್ಡೌನ್ ಕಾರಣ ಏಳು ತಿಂಗಳ ಕಾಲ ಶೂಟಿಂಗ್ ನಡೆಯಲಿಲ್ಲ. .ಕಳೆದ ಅಕ್ಟೋಬರ್೪ ರಿಂದ ಮತ್ತೆ ಕಂಗನಾ ಶೂಟಿಂಗ್ ಗೆ ಹಾಜರಾಗಿದ್ದರು.