ಇಂಡಿ : ಬಿಜೆಪಿ ಯುವ ಮೋರ್ಚಾ ವತಿಯಿಂದ ಪಂಜಿನ ಮೆರವಣಿಗೆ

ಇಂಡಿ : ನಗರದಲ್ಲಿ ಬಿಜೆಪಿ ಯುವ ಮೋರ್ಚಾ ಇಂಡಿ ಮಂಡಲ ವತಿಯಿಂದ ಸ್ವಾತಂತ್ರ್ಯ ಚಳುವಳಿಗೆ ನವಶಕ್ತಿ ತುಂಬಿದ ಕ್ರಾಂತಿಕಾರಿ ದೇಶ ಭಕ್ತರಾದ ಶಹೀದ್ ಭಗತಸಿಂಗ, ರಾಜಗುರು, ಸಖದೇವ, ಅವರ ಭಾವಚಿತ್ರ ಇರುವ ಬ್ಯಾನರದೋಂದಿಗೆ ಶ್ರೀ ಶಾಂತೇಶ್ವರ ದೇವಸ್ಥಾನದಿಂದ ಭಗತಸಿಂಗ ವೃತ್ತದವರೆಗೆ ಹಾಗೂ ಅಲ್ಲಿಂದ ಬಸವೇಶ್ವರ ವೃತ್ತದವರೆಗೆ ಪಂಜಿನ ಮೇರವಣಿಗೆ ಮಾಡಲಾಯಿತ್ತು. ಬಸವೇಶ್ವರ ವೃತ್ತದಲ್ಲಿ ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸಿದ್ದಲಿಂಗ ಗುರುಗಳು ಹುತಾತ್ಮರಾದ ಭಗತಸಿಂಗ, ರಾಜಗುರು, ಸುಖದೇವ ಅವರ ದೇಶ ಮ್ರೇಮ ಸ್ವಾತಂತ್ರ್ಯ ಪಡೆಯಲೇಬೇಕೆಂಬ ಛಲ, ಅವರ ದೇಶ ಭಕ್ತಿಯನ್ನು ಸ್ಮರಿಸಿದರು. ಸಂಸತ್ತಿನ (ಅಸೆಂಬ್ಲಿಯ)ಮೇಲೆ ಬಾಂಬ್ ಬ್ಲಾಸ್ಟಮಾಡಿದ ಪ್ರಕರಣದಲ್ಲಿ ಅವರಿಗೆ ಗಲ್ಲುಶಿಕ್ಷ ವಿದಿಸುತ್ತಾರೆ ಅವರನ್ನು 24-03-1931 ರಂದು ನಿಗದಿಯಾಗಿರುತ್ತದೆ. ಆದರೆ 23-03-1931 ರಂದು ಮದ್ಯಾನ್ಹ ಜೈಲಾಧಿಕಾರಿಗಳು ಸೂಚನೆ ನಿಡುತ್ತಾರೆ ಇಂದು ನಿಮ್ಮನ್ನು ಗಲ್ಲಿಗೇರಿಸುತ್ತಾರೆ ಎಂದು 24ಕ್ಕೆ ಗಲ್ಲುಶಿಕ್ಷ ಬದಲಿಗೆ 23ಕ್ಕೆ ಗಲ್ಲುಶಿಕ್ಷ ವಿದಿಸುತ್ತಾರೆ ಅಂದರೆ ಬ್ರಿಟಿಷರಿಗೆ ನಮ್ಮ ಭಯ ಇದೆ ಎಂದು ನಗುಮುಖದಲ್ಲಿ ಕಾಣಿಸುತ್ತಾರೆ.ಇದನ್ನು ಕಂಡು ಬ್ರಿಟಿಷಧಿಕಾರಿಗಳು ಕೇಳುತ್ತಾರೆ ಸ್ವಲ್ಪೇ ಸಮಯದಲ್ಲಿ ನಿಮ್ಮನ್ನು ನೇಣಿಗೆ ಎರಿಸುತ್ತಾರೆ ಯಾಕೆ ಇಷ್ಟೋಂದು ನಗುಮುಖ ಎಂದು. ಆಗ ಅವರ ಉತ್ತರ ಕೇವಲ ನಿಮ್ಮ 5ಜನರಿಗೆ ಮಾತ್ರ ನೋಡುವ ಭಾಗ್ಯ ಸಿಕ್ಕಿದೆ. ಉಳಿದ ದೇಶದ ಜನರಿಗೆ ನೋಡುವ ಭಾಗ್ಯ ಸಿಗಲಿಲ್ಲವಲ್ಲ.ನಿವು ಅಧೃಸ್ಟವಂತರು ಜಿಲ್ಲಾಧಿಕಾರಿಗಳು, ವೈಧ್ಯಾದಿಕಾರಿಗಳು, ಜಿಲ್ಲಾಪೊಲೀಸ ವರಿಷ್ಠಅಧಿಕಾರಿಗಳು, ಜೈಲಾಧಿಕಾರಿಗಳು, ನ್ಯಾಯಾದೀಶರು ಈ 5ಜನ ಅಧಿಕಾರಿಗಳು ಹಾಜರಿದ್ದರು ಎಂದು ಅವರು ಹೇಳಿದರು. ಪುರಸಭೆ ಸದಸ್ಯರು ಅನಿಲಗೌಡ ಬಿರಾದಾರ ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಉಪಾಸ್ಥಿತರಾದ ಅನಿಲ ಜಮಾದಾರ, ಕಾಸುಗೌಡ ಬಿರಾದಾರ ರೈತ ಮೋರ್ಚಾ ಅಧ್ಯಕ್ಷರು, ಮಲ್ಲಿಕಾರ್ಜನ ಕಿವುಡೆ ಮಂಡಲ ಅಧ್ಯಕ್ಷರು, ಪುರಸಭೆ ಸದಸ್ಯರು ದೇವೆಂದ್ರ ಕುಂಬಾರ,ಬುದ್ದುಗೌಡ ಪಾಟೀಲ, ಮಲ್ಲು ವಾಲಿಕಾರ, ದತ್ತಾ, ಇನ್ನು ಹಲವಾರು ಜನರು ಬಾಗಿಯಾಗಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *