ಸಮಾಜದಲ್ಲಿ ಜನರಿಗೆ ಒಳಿತನ್ನ ಬಯಸುವುದಾದರೆ ಬೆಂಬಲಕ್ಕೆ ಬನ್ನಿ
ಬೆಂಗಳೂರು: ಸರ್ಕಾರ ನಿಯಮಗಳನ್ನು ರೂಪಿಸುತ್ತೆ. ಆದರೆ, ಜನ ಅದನ್ನ ಫಾಲೋ ಮಾಡುತ್ತಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರು ಬುಧವಾರ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಎಲ್ಲಾ ತಿಳಿದವರೇ ಕೋವಿಡ್ ನಿಯಮಗಳನ್ನ ಫಾಲೋ ಮಾಡುತ್ತಿಲ್ಲ, ಸಿನಿಮಾ ಪ್ರಮೋಷನ್ಗಾಗಿ ಕಾರ್ಯಕ್ರಮಗಳು ನಡೀತಿದೆ. ಹೆಚ್ಚು ಹೆಚ್ಚು ಜನ ಸೇರಿಕೊಳುತ್ತಿದ್ದಾರೆ. ಇವರೆಲ್ಲಾ ತಿಳುವಳಿಕೆ ಇರುವಂತವರು. ಅವರೇ ಎಚ್ಚರ ವಹಿಸಬೇಕಿದೆ ಎಂದು ಹೇಳಿದ್ದಾರೆ. ಇನ್ನು ಸಮಾಜದಲ್ಲಿ ಜನರಿಗೆ ಒಳಿತನ್ನ ಬಯಸುವುದಾದರೆ ಬೆಂಬಲಕ್ಕೆ ಬನ್ನಿ. ಕಳೆದ ವರ್ಷ ಕೂಡ ನಮಗೆ ನೀವೆಲ್ಲಾ ಬೆಂಬಲ ಕೊಟ್ಟೀದ್ದೀರಿ. ರಾಜ್ಯದ ಹಿತದೃಷ್ಟಿಯಿಂದ ಸಹಕರಿಸಿ, ನಮಗೆ ಸೋಂಕು ಹೆಚ್ಚಳವಾದರೆ ಬೇರೆ ಅವಕಾಶ ಇಲ್ಲ, ನಾನು ಲಾಕ್ ಮಾಡಬೇಕಾಗತ್ತೆ, ಸಿಎಂ ಕೂಡ ಲಾಕ್ಡೌನ್ ಮಾಡಬೇಕಾಗತ್ತೆ ಎಂದು ಹೇಳಿದ್ದಾರೆ.
ಇನ್ನು ದೇಶದ ಹಲವು ರಾಜ್ಯಗಳಲ್ಲಿ ಲಾಕ್ಡೌನ್, ಪಾರ್ಷಿಯಲ್ ಲಾಕ್ಡೌನ್ ಜಾರಿಯಲ್ಲಿದೆ. ನಮಗೆ ಸೋಂಕು ಹೆಚ್ಚಳವಾದರೆ ಬೇರೆ ಅವಕಾಶಗಳಿಲ್ಲ, ನಮಗೆ ಲಾಕ್ಡೌನ್ ಮಾಡಲು ಯಾವುದೇ ಖುಷಿ ಇಲ್ಲ. ಆದರೆ, ಸೋಂಕು ಹೆಚ್ಚಳವಾಗ್ತಾ ಹೋದರೆ ಸಿಎಂ ಏನು ಮಾಡಬೇಕು. ಅದಕ್ಕಾಗಿ ಜನರ ಸಹಕಾರ ನಾವು ಕೇಳುತ್ತಿದ್ದೇವೆ ಎಂದು ಸಚಿವ ಡಾ.ಕೆ ಸುಧಾಕರ್ ಅವರು ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ಸೂಚನೆ ಹಿನ್ನೆಲೆ ಇಂದು ಕಂಟೈನ್ಮೆಂಟ್ ಝೋನ್ಗಳ ಕುರಿತು ಸಭೆ ಮಾಡಲಾಗುವುದು. ಅಧಿಕಾರಿಗಳ ಜೊತೆ ಸಭೆ ನಡೆಸಿ ಕಂಟೈನ್ಮೆಂಟ್ ಝೋನ್ ಹೇಗಿರಬೇಕು ಅನ್ನೋದರ ಕುರಿತು ಚರ್ಚೆ ನಡೆಸಲಾಗುವುದು. ಈ ಹಿಂದೆ ಕೂಡ ಕಂಟೈನ್ಮೆಂಟ್ ಝೋನ್ ಇತ್ತು. ಈಗ ಕೇಂದ್ರ ಸರ್ಕಾರ ಮತ್ತೆ ಸೂಚನೆ ನೀಡಿದೆ. ಕೇಂದ್ರ ಸರ್ಕಾರದ ಆದೇಶವನ್ನು ಪಾಲಿಸಬೇಕು ಎಂದು ಸಚಿವ ಡಾ.ಕೆ ಸುಧಾಕರ್ ಅವರು ಮಾತನಾಡಿದ್ದಾರೆ.