ಇವರು ಮಾಡೋ ಕುತಂತ್ರಕ್ಕೆ ಚಿಲ್ಲರೆ ರಾಜಕಾರಣ ಸರಿಯಲ್ಲ – ಸಚಿವ ಬಿ.ಸಿ ಪಾಟೀಲ್
ಬೆಂಗಳೂರು: ಕಾಂಗ್ರೆಸ್ನವರಿಗೆ ಮಾಡಲು ಕೆಲಸ ಇಲ್ಲ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಬುಧವಾರ ಹೇಳಿದ್ದಾರೆ. ವಿಧಾನಸೌಧದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಬಜೆಟ್ನಲ್ಲಿ ಕೂರುವ ಕೆಲಸ ಮಾಡಲಿಲ್ಲ, ಬಜೆಟ್ ಕಲಾಪದಲ್ಲಿ ಭಾಗಿಯಾಗಲಿಲ್ಲ, ಆರೋಪ ಯಾರು ಮಾಡಿದ್ದಾರೆ. ಇವರು ಮಾಡೋ ಕುತಂತ್ರಕ್ಕೆ, ಚಿಲ್ಲರೆ ರಾಜಕಾರಣ ಸರಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಇನ್ನು ಎಲ್ಲರೂ ಶ್ರೀರಾಮಚಂದ್ರ, ಸೀತಾ ಮಾತೆಯರೇ ಆಗಬೇಕು. ಒಂದು ಬೆರಳು ಒಬ್ಬರನ್ನ ತೋರಿದ್ರೆ, ನಾಲ್ಕು ಬೆರಳು ಅವರನ್ನೇ ತೋರಲಿದೆ. ಸಿಡಿ ಆಗಿರೋದೆ ಕಾಂಗ್ರೆಸ್ನವರದ್ದು. ಮೇಟಿಯವರದ್ದು ಆಗಿದೆಯಲ್ಲ, ಹೆಣ್ಣುಮಗಳು ದೂರು ನೀಡಿದ್ರೂ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರ ವಾಚ್ ಪ್ರಕರಣ ಏನಾಯ್ತು(?) ಇದೆಲ್ಲವನ್ನೂ ಮಾತನಾಡ್ತಾ ಹೋದ್ರೆ ಹುಚ್ಚರ ಮಾತಾಗಲಿದೆ. ಸಾರ್ವಜನಿಕರ ಸಮಯ, ತೆರಿಗೆ ಹಣ ವ್ಯರ್ಥವಾಗಲಿದೆ. ಸದನದಲ್ಲಿ ಕೂತು ಅಶ್ಲೀಲವಾಗಿ ಮಾತನಾಡುವುದು ಸರಿಯಲ್ಲ ಎಂದು ಸಚಿವ ಬಿ.ಸಿ ಪಾಟೀಲ್ ಅವರು ಮಾತನಾಡಿದ್ದಾರೆ.