ಕಲಬುರಗಿ : ಮಂಜಮ್ಮ ಜೋಗತಿ ಜೊತೆ ಬಾನುಲಿ ಸಂದರ್ಶನ
ಕಲಬುರಗಿ : ಕಲಬುರಗಿ ಆಕಾಶವಾಣಿ ಕೇಂದ್ರವು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರೊಡನೆ ನಡೆಸಿದ ಸಂದರ್ಶನವನ್ನು ಮಾ. 25 ರಂದು ಮಂಗಳವಾರ ಬೆಳಗ್ಗೆ 9.15ಕ್ಕೆ ಪ್ರಸಾರ ಮಾಡಲಿದೆ.
ಜಾನಪದ ಅಕಾಡೆಮಿಯ ಕಾರ್ಯಯೋಜನೆ, ಜೋಗತಿಯರ ಸ್ಥಿತಿಗತಿ, ಹಾಗೂ ಜೋಗತಿ ಸಮುದಾಯದಿಂದ ಪದ್ಮಶ್ರೀಪ್ರಶಸ್ತಿ ಪಡೆಯುವ ತನಕದ ತಮ್ಮ ಸಾಧನೆಯ ಬಗ್ಗೆ ಸಂದರ್ಶನದಲ್ಲಿ ಅನುಭವ ಹಂಚಿಕೊಂಡಿದ್ದಾರೆ. ಇವರನ್ನು ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ. ಈ ಕಾರ್ಯಕ್ರಮವನ್ನು ಮೊಬೈಲ್ ಆ್ಯಪ್ newsonair ಮೂಲಕ ಆಲಿಸಬಹುದು ಎಂದು ಕಾರ್ಯಕ್ರಮ ಮುಖ್ಯಸ್ಥರಾದ ರಾಜೇಂದ್ರ ಆರ್. ಕುಲಕರ್ಣಿ ತಿಳಿಸಿದ್ದಾರೆ.