ಸಿ.ಡಿ ಹೋರಾಟ ಕೈಬಿಡಲ್ಲ, ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ಆಗ್ಲಿ : ಸಿದ್ದರಾಮಯ್ಯ ಹೇಳಿಕೆ..!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣ ಮತ್ತು ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡಬಾರದು ಎಂದು ಕೋರ್ಟ್​ಗೆ ತೆರಳಿದ್ದ ಆರು ಜನ ಸಚಿವರ ರಾಜಿನಾಮೆಗೆ ಆಗ್ರಹಿಸಿ ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಇನ್ನು ಪ್ರತಿಭಟನೆ ನಡೆಸಿರುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಶಿಕ್ಷಣ ಸಚಿವ ಸುಧಾಕರ್ ಓಪನ್ ಚಾಲೆಂಜ್ ಹಾಕಿದ್ರು. ಇಲ್ಲಿ ಏಕಪತ್ನಿವೃತಸ್ಥರು ಕೆಲವರು ಮಾತ್ರ ಎಲ್ಲಾ ನಾಯಕರ ಮೇಲೂ ತನಿಖೆಯಾಗಲಿ ಎಂದು ಅವರು ಹೇಳಿ, ಬಳಿಕ ಟ್ವೀಟ್ ಮೂಲಕ ವಿಷಾದ ವ್ಯಕ್ತಪಡಿಸಿದ್ದರು.


ಈ ಎಲ್ಲಾ ಘಟನೆಗಳ ಬಳಿಕ ವಿಪಕ್ಷ ನಾಯಕ ಸಿದ್ಧರಾಮಯ್ಯ ಸುದ್ದಿಗೋಷ್ಟಿ ನಡೆಸಿದ್ರು. ಸುದ್ದಿಗೋಷ್ಠಿಯುದ್ದಕ್ಕೂ ಸಚಿವ ಡಾ. ಕೆ ಸುಧಾಕರ್ ವಿರುದ್ಧ ಹರಿಹಾಯ್ದರು. ಇಷ್ಟು ಮಾತ್ರವಲ್ಲದೇ ಸಿ.ಡಿ ಪ್ರಕರಣದ ಬಗ್ಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಸುತ್ತೇವೆ ಎಂದು ಹೇಳಿದ್ರು. ಡಾ. ಸುಧಾಕರ್ ಹೇಳಿಕೆ ಬಗ್ಗೆ ಮಾತನಾಡುತ್ತಾ ಸುಧಾಕರ್ ಮಾತಿನ ಪ್ರಕಾರ ಯಾರೂ ಸತ್ಯಹರಿಶ್ಚಂದ್ರರಲ್ಲ, ಸಿಎಂ, ಸ್ಪೀಕರ್, ಸುಧಾಕರ್​​ ಕೂಡ ಸೇರಿಕೊಂಡಿದ್ದಾರೆ. ಒಬ್ಬ ಸಚಿವರಾಗಿ ಈ ರೀತಿಯ ಬೇಜಾವಾಬ್ದಾರಿ ಹೇಳಿಕೆ ನೀಡುವುದು ಎಷ್ಟು ಸರಿ..? ಸಿ.ಡಿ ವಿಚಾರದಲ್ಲಿ ನಾವು ನಮ್ಮ ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಕೋರ್ಟ್​ಗೆ ಹೋಗ್ತೀವಿ ಎಂದು ಹೇಳಿದ್ರು. ಸುಧಾಕರ್ ಹೇಳಿಕೆಯಿಂದ ಜನರಲ್ಲಿ ಈಗ ಎಲ್ಲರ ಬಗ್ಗೆ ಸಂಶಯ ಮೂಡುವಂತೆ ಮಾಡಿದೆ. ಹಾಲಿ ಮುಖ್ಯನ್ಯಾಯಮೂರ್ತಿಗಳ ನಿಗಾದಲ್ಲಿ ತನಿಖೆ ಆಗಬೇಕು ಅಲ್ಲಿಯವರೆಗೆ ನಮ್ಮ ಹೋರಾಟ ಬಿಡಲ್ಲ ಎಂದವರು ಹೇಳಿದ್ರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *