ದೇಶದ 18 ರಾಜ್ಯಗಳಲ್ಲಿ ಹೊಸ ಕೊರೋನಾ ತಳಿ ಪತ್ತೆ!
ನವದೆಹಲಿ: ಭಾರತದ 18 ರಾಜ್ಯಗಳಲ್ಲಿ ಹೊಸ ಕೊರೋನಾ ತಳಿ ಪತ್ತೆಯಾಗಿದೆ.
ಡಬಲ್ ರೂಪಾಂತರ ಹೊಂದಿದ ತಳಿ ಇದಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಹೊಸದಾಗಿ ರೂಪಾಂತರ ಹೊಂದಿದ ತಳಿಗಳು ಪತ್ತೆಯಾಗಿವೆಯಾದರೂ, ಇದರಿಂದಲೇ ಕೊರೋನಾ ಪ್ರಕರಣಗಳು ಕೆಲವು ರಾಜ್ಯಗಳಲ್ಲಿ ಹೆಚ್ಚಳವಾಗುತ್ತಿದೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಜಿನೋಮ್ ಸೀಕ್ವೆನ್ಸಿಂಗ್ ಹಾಗೂ ಎಪಿಡೆಮಿಯೋಲಾಜಿಕಲ್ ಅಧ್ಯಯನಗಳು ಮುಂದುವರೆದಿದೆ ಎಂದು ಸಚಿವಾಲಯದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
24 ಗಂಟೆಗಳಲ್ಲಿ ಭಾರತದಲ್ಲಿ 47,262 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು, ವರ್ಷದಲ್ಲಿ ವರದಿಯಾದ ಗರಿಷ್ಠ ಪ್ರಕರಣಗಳು ಇದಾಗಿದೆ