ಕಲಬುರಗಿ : ಮಹಿಳಾ ಅಂತರ್ರಾಷ್ಟ್ರೀಯ ಕಲಾ ಪ್ರದರ್ಶನ: 9 ದೇಶಗಳ ಕಲಾಕೃತಿಗಳ ಪ್ರದರ್ಶನ

ಕಲಬುರಗಿ : ಇಂಡಿಯನ್ ರಾಯಲ್ ಅಕ್ಯಾಡೆಮಿ ಆಫ್ ಆರ್ಟ್ ಅ್ಯಂಡ್ ಕಲ್ಚರ್ ಮತ್ತು ಎನ್.ವಿ. ಪದವಿ ಕಾಲೇಜು ಲಲಿತಕಲಾ ವಿಭಾಗವು ಜಂಟಿಯಾಗಿ ಮಹಿಳೆಯರ ಅಂರರರಾಷ್ಟ್ರೀಯ ಕಲಾ ಪ್ರದರ್ಶನ ಮತ್ತು ವರ್ಷದ ಮಹಿಳಾ ಪ್ರಶಸ್ತಿಯನ್ನು ಜಂಟಿಯಾಗಿ ಆಯೋಜಿಸುತ್ತಿದೆ ಎಂದು ಅಕ್ಯಾಡೆಮಿಯ ಅಧ್ಯಕ್ಷ ಡಾ. ರೆಹಮಾನ್ ಪಟೇಲ್ ಅವರು ತಿಳಿಸಿದ್ದಾರೆ.
ಪ್ರದರ್ಶನವನ್ನು ಜೆಮ್ಸ್ ನಿರ್ದೇಶಕಿ ಮತ್ತು ಡೀನ್ ಡಾ. ಕವಿತಾ ಪಾಟೀಲ್ ಅವರು ಉದ್ಘಾಟಿಸಲಿದ್ದಾರೆ. ಎನ್.ವಿ. ಸೊಸೈಟಿ ಸದಸ್ಯೆ ಡಾ. ಮೀನಾ ಪಾಟ್ಕಿ ದೇಶಪಾಂಡೆ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮಾರ್ಚ್ 9ರಂದು ಮಂಗಳವಾರ ಎನ್.ವಿ. ಪದವಿ ಕಾಲೇಜು ಆವರಣದಲ್ಲಿರುವ ಅಂನತರಾವ್ ದೇಶಮುಖ್ ಸಭಾಂಗಣದಲ್ಲಿ ಬೆಳಿಗ್ಗೆ 10-30ಕ್ಕೆ ಎನ್.ವಿ. ಕಾಲೇಜು ಪ್ರಿನ್ಸಿಪಾಲ್ ಯು.ಜಿ. ಸರ್ ದೇಶಪಾಂಡೆ ಅವರು ಅಧ್ಯಕ್ಷತೆ ವಹಿಸುವರು. ರಾಯಲ್ ಅಕ್ಯಾಡೆಮಿ ಅಧ್ಯಕ್ಷ ರೆಹಮಾನ್ ಪಟೇಲ್ ಈವೆಂಟ್ ವಿಷಯದ ಕುರಿತು ಮಾತನಾಡುವರು. ಐಕಾಂಪ್ಯಾಕ್ಟ್ ಇಂಟೀರಿಯರ್ಸ್ ಇಮ್ರಾನ್ ಖಲಿಕ್ ಮತ್ತು ಪ್ರದರ್ಶನ ಸಂಯೋಜಕ ಜೀತೇಂದ್ರ ಕೋಥಾಲಿಕರ್ ಮತ್ತು ನಾಗರಾಜ್ ಕುಲಕರ್ಣಿ ಅವರು ಉಪಸ್ಥಿತರಿರುವರು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಕಲಾ ಪ್ರದರ್ಶನದಲ್ಲಿ ಸುಮಾರು 9 ದೇಶಗಳು ಭಾಗವಹಿಸುತ್ತಿವೆ. ಭಾರತ, ಆಸ್ಟ್ರಿಲಿಯಾ, ಯು.ಎಸ್.ಎ, ಬಾಂಗ್ಲಾದೇಶ, ಶ್ರೀಲಂಕಾ, ಜರ್ಮನಿ, ಟರ್ಕಿ, ಈಜಿಪ್ಟ್, ಮತ್ತು ಈಜಿಪ್ಟ್, ಕಲಾವಿಧರ ಕಲಾಕೃತಿಗಳನ್ನು ಮೂರು ದಿನಗಳ ಅಂತರಾಷ್ಟೀಯ ಕಲಾ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುವುದು. ಕೋವಿಡ್-19, ಪ್ಲಾಸ್ಟಿಕ್ ಜಾಗೃತಿ, ಮಹಿಳಾ ಶಕ್ತಿ ಮತ್ತು ಇತರ ಅನೇಕ ಸಾಮಾಜಿಕ ವಿಷಯಗಳ ವಿಷಯವನ್ನು ಒಳಗೊಂಡಿರುವ ವರ್ಣಚಿತ್ರಗಳು ಪ್ರದರ್ಶನಕ್ಕೆ ಇರುತ್ತವೆ ಎಂದು ಅವರು ತಿಳಿಸಿದ್ದಾರೆ.
ಪೂಜಾ ಮೆಶ್ರಮ್ (ಯು.ಎಸ್.ಎ), ನರ್ಗಿಸ್ ಪರ್ವಿನ್ (ಬಾಂಗ್ಲಾದೇಶ), ಬ್ರಾನ್ಷಾ ಗೌಟಿಯರ್ (ಆಸ್ಟ್ರಿಲಿಯಾ) ಶಿಮಾ ಎಲಾಫಿ (ಈಜಿಪ್ಟ್), ಶ್ರೈನ್ಸಿ ಮನು (ಜೈಪುರ್) ಪ್ರೀತಿ ಧನುಕಾ (ಒಡಿಶಾ), ಅಲ್ಕಾ ಚಾದಾ ಹರ್ಪಾಲಾನಿ (ಬೆಂಗಳೂರು), ಕುಸುಮಲತಾ ಶರ್ಮಾ (ಭೋಪಾಲ್), ಮುಬೇರಾ ಬುಲ್ಬುಲ್(ಟರ್ಕಿ), ಸುಸೈನಾ ಠಾಕೂರ್ (ನೇಪಾಳ್), ಸುನೀತಾ ಮೀನಾ, (ಜೈಪುರ), ಅಪರ್ಣಾ ಬ್ಯಾನರ್ಜಿ (ಗುರಗಾಂವ್), ಬಬಿತಾ ರಾಜ್ (ನವದೆಹಲಿ), ಅನುರಾಧಾ ಮಿಸಲ್ (ಜರ್ಮನಿ), ಕಹ್ಕಶಿ ನಾಜ್ನೀನ್(ಬೀದರ), ವಂದನಾ ತೋಮರ್ (ವಾರಣಾಸಿ), ಶಿವಾನಿ ಕೌಲ್ ಭಟ್ (ಜಮ್ಮು), ರಾಣಿ (ಜಲಂಧರ್), ಮಮತಾ ಬೋರಾ (ಬೆಂಗಳೂರು), ಸುಹಾನಿ ಜೈನ್ (ನಾಗಪೂರ್), ಲಕ್ಷ್ಮೀ ಪೋದ್ದಾರ್, (ಕಲಬುರ್ಗಿ), ಜಲಜಾಕ್ಷಿ ಕುಲಕರ್ಣಿ (ಕಲಬುರ್ಗಿ), ದಿಶಾಂತಿನಿ (ಶ್ರೀಲಂಕಾ), ಪಾರ್ವತಿ ಬಿರಾದಾರ್ (ಹುಮ್ನಾಬಾದ್), ನೀಲಾಂಬಿಕಾ ಹಿರೇಮಠ್ ಮತ್ತು ಸವಿತಾ ಹಿರೇಮಠ್ (ಕಲಬುರ್ಗಿ) ಮುಂತಾದ ಕಲಾವಿದೆಯರು ಪಾಲ್ಗೊಳ್ಳುವರು ಎಂದು ಅವರು ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *