ಜನತಾ ಕರ್ಫ್ಯೂ ಇಡೀ ವಿಶ್ವಕ್ಕೆ ಸ್ಪೂರ್ತಿಯಾಗಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗ ಪರಿಣಾಮ ಕಳೆದ ವರ್ಷ ಇದೇ ಮಾರ್ಚ್ ತಿಂಗಳಿನಲ್ಲಿ ಹೇರಲಾಗಿದ್ದ ಜನತಾ ಕರ್ಫ್ಯೂ ಇಡೀ ವಿಶ್ವಕ್ಕೆ ಸ್ಫೂರ್ತಿಯಾಯಿತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ.

75ನೇ ಆವೃತ್ತಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, 75ನೇ ಆವೃತ್ತಿಯು ಹಲವು ಮಾರ್ಗಗಳಲ್ಲಿ ತುಂಬಾ ವಿಶೇಷ ಎನಿಸಿಕೊಳ್ಳುತ್ತದೆ. ಹಿಮಾಲಯದ ತುತ್ತ ತುದಿಗಳು, ಮರುಭೂಮಿಗಳು ಮತ್ತು ಸ್ವಾಭಾವಿಕ ವಿಪತ್ತುಗಳು, ಮಾನವ ಕುಲದ ಸೇವೆಯ ಕತೆಗಳು ಮತ್ತು ರಿಮೋಟ್ ಕಂಟ್ರೋಲ್ ಏರಿಯಾಗಳಲ್ಲಿನ ತಾಂತ್ರಿಕ ಅನ್ವೇಷಣಾ ಕತೆಗಳು ಸೇರಿದಂತೆ ಅಸಂಖ್ಯಾತ ವಿಚಾರಗಳನ್ನು 75 ಸಂಚಿಕೆಗಳಲ್ಲಿ ನಾವು ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಇದೇ ಮಾರ್ಚ್ ತಿಂಗಳು ನಾವು ಜನತಾ ಕರ್ಫ್ಯೂ ಎಂಬ ಪದವನ್ನು ಕೇಳಿದ್ದೆವು. ಇದು ಇಡೀ ವಿಶ್ವಕ್ಕೆ ಒಂದು ಸ್ಪೂರ್ತಿಯಾಯಿತು. ಶಿಸ್ತಿಗೆ ಇದು ಅಸಾಮಾನ್ಯ ಉದಾಹರಣೆಯಾಗಿದೆ ಎಂದು ತಿಳಿಸಿದ್ದಾರೆ.

ಸ್ವಾತಂತ್ರ್ಯದ ಹೋರಾಟದಲ್ಲಿ ನಮ್ಮ ಹೋರಾಟಗಾರರು ಅಸಂಖ್ಯಾತ ಕಷ್ಟಗಳನ್ನು ಎದುರಿಸಿದ್ದಾರೆ. ದೇಶಕ್ಕಾಗಿ ಅವರು ತಮ್ಮ ಪ್ರಾಣ ತ್ಯಾಗವನ್ನು ತಮ್ಮ ಕರ್ತವ್ಯ ಎಂದು ಪರಿಗಣಿಸಿದ್ದರು. ಅವರ ಅಮರ ಸಾಹಸವು ತ್ಯಾಗ ಮತ್ತು ಬಲಿದಾನಗಳು ನಿರಂತರವಾಗಿ ನಮ್ಮನ್ನು ಕರ್ತವ್ಯದ ದಾರಿಯೆಡೆಗೆ ಹುರಿದುಂಬಿಸುತ್ತವೆ.

ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ದೇಶದಾದ್ಯಂತ ನಡೆಯಲಿವೆ. ಸ್ವಾತಂತ್ರ್ಯ ಹೋರಾಟಗಾರರ ಸಾಹಸವಿರಲಿ, ಸ್ಥಳದ ಇತಿಹಾಸವೇ ಇರಲಿ ಅತವಾ ದೇಶದ ಯಾವುದೇ ಸಾಂಸ್ಕೃತಿಕತೆ ಇರಲಿ ಅದನ್ನು ಅಮೃತ ಮಹೋತ್ಸವ ವೇಳೆ ಮುನ್ನೆಲೆಗೆ ತರಬೇಕು ಮತ್ತು ಅದು ದೇಶದ ಪ್ರತೀಯೊಬ್ಬ ವ್ಯಕ್ತಿಯ ಸಂಪರ್ಕಕ್ಕೆ ಬರಬೇಕು ಎಂದು ತಿಳಿಸಿದ್ದಾರೆ.

ಇಂದು ನಮಗೆ ಹೆಮ್ಮೆ ಇದೆ. ವಿಶ್ವದಲ್ಲಿಯೇ ಅತಿದೊಡ್ಡ ಕೋವಿಡ್ ಲಸಿಕಾ ಅಭಿಯಾನವನ್ನು ನಡೆಸುತ್ತಿದ್ದೇವೆ. ಜನರು ತಮ್ಮ ಮನೆಯಲ್ಲಿರುವ ಹಿರಿಯರಿಗೆ ಲಸಿಕೆ ಹಾಕಿಸಿ ಅದರ ಫೋಟೋವನ್ನು ಟ್ವೀಟರ್‌ಗಳಲ್ಲಿ ಹಾಕುತ್ತಿದ್ದಾರೆ. ವಿಶ್ವದ ಅತೀದೊಡ್ಡ ಲಸಿಕಾ ಅಭಿಯಾನ ಭಾರತದಲ್ಲಿ ನಡೆಯುತ್ತಿದೆ. ಉತ್ತರಪ್ರದೇಶದ ಜಣನ್ಪುರದಲ್ಲಿ 109 ವರ್ಷದ ವೃದ್ಧ ಮಹಿಳೆ ಸ್ವತಃ ಲಸಿಕೆ ಪಡೆದುಕೊಂಡಿದ್ದಾರೆ. ಅದೇ ರೀತಿ ದೆಹಲಿಯಲ್ಲಿ 107 ವರ್ಷದ ವ್ಯಕ್ತಿಯು ಕೂಡ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೀಗಾಗಿ ಲಸಿಕೆ ಪಡೆಯುವಂತೆ ಜನರಿಗೆ ಸಾವು ಅರಿವು ಮೂಡಿಸಬೇಕೆಂದಿದ್ದಾರೆ.

ಮಾರ್ಚ್ ತಿಂಗಳಿನಲ್ಲಿ ಮಹಿಳಾ ದಿನಾಚರಣೆ ಆಚರಿಸಲಾಯಿತು. ಸಾಕಷ್ಟು ಮಹಿಳಾ ಸ್ಪರ್ಧಿಗಳು ತಮ್ಮ ಹೆಸರಿನಲ್ಲಿ ದಾಖಲೆ ಮತ್ತು ಪದಕಗಳನ್ನು ಪಡೆದುಕೊಂಡಿದ್ದಾರೆ. ದೆಹಲಿಯಲ್ಲಿ ಆಯೋಜಿಸಿದ್ದ ಐಎಸ್ಎಸ್ಎಫ್ ವರ್ಲ್ಡ್ ಕಪ್ ಶೂಟಿಂಗ್ ನಲ್ಲಿ ಭಾರತ ಉನ್ನತ ಸ್ಥಾನವನ್ನು ಪಡೆದುಕೊಂಡಿತ್ತು. ಇಟಲಿಯಲ್ಲೂ ಕೂಡ ಚಿನ್ನದ ಪದಕದಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿತ್ತು. ಪಿವಿ ಸಿಂಧು ಮತ್ತು ಬಿಡಬ್ಲ್ಯೂಎಫ್ ಸ್ವಿಸ್ ಓಪನ್ ಸೂಪರ್ 300 ಟೂರ್ನಮೆಂಟ್ ನಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆಂದು ಹೇಳಿದ್ದಾರೆ.

ಇದೇ ವೇಳೆ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ಮಿಥಾಲಿ ರಾಜ್‌ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿಯವರು, ಮಿಥಾಲಿ ರಾಜ್‌ ಅವರ ಕಠಿಣ ಶ್ರಮ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಪ್ರೇರಣೆ ಎಂದು ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *