ಕಾಳಗಿ ತಾಲೂಕಿನಾದ್ಯಂತ ಯುವಕರಲ್ಲಿ ಹೋಳಿ ಹಬ್ಬದ ಸಡಗರ ಸಂಭ್ರಮ ಮನೆ ಮಾಡಿತ್ತು
ಹೌದು ಕಲಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನಾದ್ಯಂತ ಯುವಕರು ಹೋಳಿ ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಣೆ ಮಾಡಿದರು.
ಹೋಳಿಹಬ್ಬವನ್ನ ವಿವಿಧ ಹಳ್ಳಿಗಳಲ್ಲಿ ವಿವಿಧ ರೀತಿಯಾಗಿ ಹೋಳಿ ಹುಣ್ಣಿಮೆಯನ್ನು ಆಚರಣೆ ಮಾಡುತ್ತಾರೆ. ಆದರೆ ಈ ಬಾರಿ ಕೋವಿಡ್ ಎರಡನೇ ಅಲೆ ಇರುವುದರಿಂದ ಜಿಲ್ಲಾಡಳಿತ ಕೂಡ ಕೊಂಚ ಸಡಗರಕ್ಕೆ ಬ್ರೇಕ್ ಹಾಕಿದೆ. ಹೀಗಾಗಿ ಯುವಕರು ಕೂಡ ಸರಕಾರದ ನಿಯಮದಂತೆ ಇರುವ ಚೌಕಟ್ಟಿನಲ್ಲೇ ಹಬ್ಬವನ್ನು ಆಚರಣೆ ಮಾಡಿದರು. ಯುವಕರು ಒಬ್ಬರಿಗೊಬ್ಬರು ಬಣ್ಣ ಹಚ್ಚಿಕೊಂಡು. ತಲೆಯ ಮೇಲೆ ಮಟ್ಟೆ ಒಡೆದುಕೊಂಡು ಕುಣಿದು ಕುಪ್ಪಳಿಸಿದ ದೃಶ್ಯಗಳು ಕಂಡುಬಂದವು. ವರದಿ ಶಿವರಾಜ್ ಕಟ್ಟಿಮನಿ