ನಗರದ ಹೋಟೆಲ್‌ಗಳಿಗೂ ಕಾಲಿಟ್ಟ ವೈರಸ್..! ರೆಸ್ಟೋರೆಂಟ್, ಪಬ್‌ಗಳಿಗೂ ಬರುತ್ತಾ ಸ್ಟ್ರಿಕ್ಟ್ ರೂಲ್ಸ್..?
ಮತ್ತೆ ಸಿಲಿಕಾನ್ ಸಿಟಿಯಲ್ಲಿ ಗಲ್ಲಿಯಲ್ಲೂ ಕೊರೋನಾ ಹರಡೋಕೆ ಆರಂಭವಾಗಿದೆ. ಇಷ್ಟು ದಿನ ಅಪಾರ್ಟ್ಮೆಂಟ್, ಹಾಸ್ಟೆಲ್‌ಗಳಲ್ಲಿ ಕೊರೋನಾ ಕೇಸ್‌ಗಳು ಬರ್ತಿದ್ವು, ಆದ್ರೆ ಇನ್ಮುಂದೆ ನೀವು ಹೋಗೋ ರೆಸ್ಟೋರೆಂಟ್, ಪಬ್‌ಗಳಲ್ಲೂ ಎಚ್ಚರ ವಹಿಸ್ಬೇಕು…
ಆದ್ರೀಗ ಇದು ಪಬ್, ಹೋಟೆಲ್‌ಗಳ ಸರದಿ, ಯಾಕೆಂದ್ರೆ ಈ ವೈರಸ್ ಹೋಟೆಲ್‌ಗಳನ್ನು ಬಿಡ್ತಿಲ್ಲ. ನೀವೇನಾದ್ರೂ ಹೋಟೆಲ್ ಪಬ್‌ಗಳಿಗೆ ಹೋಗ್ಬೇಕು ಅಂತ ಇದ್ರೆ ಎಚ್ಚರಿಕೆ ವಹಿಸೋದು ತುಂಬಾನೆ ಮುಖ್ಯ, ಈ ರೀತಿ ಹೇಳೋದಕ್ಕೆ ಕಾರಣ ಇದೆ, ಬಿಇಎಲ್ ರಸ್ತೆಯಲ್ಲಿರೋ ಪಬ್ ಒಂದರಲ್ಲಿ ಬರೋಬ್ಬರೀ 16 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. 87 ಜನರ ಸ್ವಾಬ್ ಟೆಸ್ಟ್ ನಡೆಸಿರೋ ಪೈಕಿ ಸುಮಾರು 16 ಜನರಿಗೆ ಸೋಂಕು ಧೃಡ ಪಟ್ಟಿದ್ದು, ಆತಂಕವನ್ನು ಹೆಚ್ಚಿಸಿದೆ. ಈ 16 ಜನರು ಸರ್ವ್ ಮಾಡಿರೋ ಜನರು ಎಲ್ಲೆಲ್ಲಿ ಇದಾರೆ ಅನ್ನೋ ಪತ್ತೆ ಹಚ್ಚೋ ಕಾರ್ಯ ಕೂಡ ಇದೀಗ ಆರಂಭವಾಗಿದ್ದು, ಟ್ರಾವೆಲ್ ಹಿಸ್ಟರಿ ಹುಡುಕಾಟಕ್ಕೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ಪಬ್‌ನ್ನು ಸ್ಯಾನಿಟೈಸ್ ಮಾಡಿ ಈ 16 ಮಂದಿಯ ಜೊತೆಗಿದ್ದ ಪ್ರೈಮರಿ ಹಾಗೂ ಸೆಕೆಂಡರಿ ಕಾಂಟಾಕ್ಟ್‌ಗಳನ್ನು ಪರೀಕ್ಷೆಗೆ ಒಳಪಡಿಸ್ತಿದ್ದಾರೆ.
ಇನ್ನು ಈಗಾಗ್ಲೇ ಬೆಂಗಳೂರಿಗೆ ಪ್ರತ್ಯೇಕ ರೂಲ್ಸ್‌ನ್ನು ಜಾರಿಗೊಳಿಸಲಾಗಿದೆ. ದೇಗುಲ, ಹಬ್ಬ, ಧಾರ್ಮಿಕ ಆಚರಣೆಗಳನ್ನು ಸಾರ್ವಜನಿಕ ಸ್ಥಳದಲ್ಲಿ ಮಾಡ್ಬಾರ್ದು ಅನ್ನೋ ಸ್ಟ್ರಿಕ್ಟ್ ರೂಲ್ಸ್ ಜಾರಿಗೆ ತಂದಿದೆ. ಹೀಗಿರುವಾಗ ಇದೀಗ ಪಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಕೊರೋನಾ ಹಬ್ಬುತ್ತಿದೆ. ಹೀಗಾಗಿ ಈ ಹಿಂದೆ ಇದ್ದಂಥಹ ರೂಲ್ಸ್ ಮತ್ತೆ ಜಾರಿಯಾಗೋ ಎಲ್ಲಾ ಲಕ್ಷಣಗಳು ಕಾಣ್ತಿದೆ. ಯಾಕೆಂದ್ರೆ ಈ ಹಿಂದೆ ಹೋಟೆಲ್ ಪಬ್‌ಗಳಿಗೆ ಇಂತಿಷ್ಟೇ ಕಸ್ಟಮರ್ಸ್ ಬರ್ಬೇಕು ಅನ್ನೋ ನಿಯಮ ಮಾಡಲಾಗಿತ್ತು, ಆದ್ರೆ ಅನ್‌ಲಾಕ್ ಬಳಿಕ ಎಲ್ಲದಕ್ಕೂ ರಿಲೀಫ್ ಕೊಡಲಾಗಿತ್ತು. ಇದೀಗ ಮತ್ತೆ ಈ ರೀತಿ ಕೇಸ್‌ಗಳ ಸಂಖ್ಯೆ ಹೆಚ್ಚಿರೊದ್ರಿಂದ ರೂಲ್ಸ್ ಜಾರಿಯಾಗೋ ಸಾಧ್ಯತೆ ಇದೆ.
ಒಟ್ನಲ್ಲಿ ಸಿಲಿಕಾನ್ ಸಿಟಿಯಲ್ಲಿ ಹೋಟೆಲ್, ಪಬ್‌ಗಳಿಗೂ ಕೊರೋನಾ ಲಗ್ಗೆಯಿಟ್ಟಿದ್ದು, ಜನ್ರು ತಮ್ಮ ಆರೋಗ್ಯದ ಬಗ್ಗೆ ಮುಂಜಾಗೃತೆ ವಹಿಸಬೇಕಿದೆ.