ಕಾಂಗ್ರೆಸ್ ಕಚೇರಿಯಲ್ಲಿ, ಬಿಜೆಪಿ ಬಜಾರ್ ನಲ್ಲಿ, ಜೆಡಿಎಸ್ ನಿದ್ರೆಯಲ್ಲಿ.

ಕಳೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ವಿರೋಧಿ ಅಲೆ ಮತ್ತು ಆ ಪಕ್ಷ ಮೂರು ಭಾಗವಾದ ಹಿನ್ನಲೆಯಲ್ಲಿ ಅನಾಯಾಸವಾಗಿ ಬಳ್ಳಾರಿ ಮಹಾ ನಗರ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್. ಟಿಕೆಟ್ ಬಯಸುವ ಅಭ್ಯರ್ಥಿಗಳು ಎ.8 ರೊಳಗೆ ಪಕ್ಷದ ಕಚೇರಿಗೆ ಬಂದು ಅರ್ಜಿ ಸಲ್ಲಿಸುವಂತೆ ಕೋರಿದೆ.
ಆದರೆ ಕಳೆದ ಬಾರಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ಮಾತ್ರ ಈ ಬಾರಿ ಚುರುಕುಗೊಂಡಿದ್ದು. ಚುನಾವಣೆ ಘೊಷಣೆ ಆಗುತ್ತಿದ್ದಂತೆ ವಾರ್ಡ್ ಗಳಿಗೆ ತೆರಳಿ ಅಭ್ಯರ್ಥಿಗಳಿಂದ ಅರ್ಜಿ ಸ್ವೀಕಾರ ಮತ್ತು ಮತದಾರರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ.

ಕಛೇರಿಯಲ್ಲಿ ಎ 8 ರೊಳಗೆ ಅರ್ಜಿ ಸಲ್ಲಿಸಲುಕಾಂಗ್ರೆಸ್ ಮನವಿ
ಮಹಾನಗರ ಪಾಲಿಕೆಯ 39 ವಾರ್ಡುಗಳಿಗೆ ಎಪ್ರಿಲ್ 27 ರಂದು ಚುನಾವಣೆ ನಡೆಯುತ್ತಿದ್ದು. ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಬಯಸುವವರು ಆಯಾ ವಾರ್ಡ್‍ಗಳ ಮೀಸಲಾತಿ ಪ್ರಕಾರ, ತಮ್ಮ ದಾಖಲಾತಿ ಮತ್ತು ನಿಗಧಿತ, ಅಧಿಕೃತ ಅರ್ಜಿಗಳೊಂದಿಗೆ, ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಕಛೇರಿಯಲ್ಲಿ ಎ 8 ರೊಳಗಾಗೊ ಸಲ್ಲಿಸಬೇಕು ಎಂದು ಬಳ್ಳಾರಿ ನಗರ ಜಿಲ್ಲಾ ಅಧ್ಯಕ್ಷ ಜಿ,ಎಸ್.ಮಹಮ್ಮದ್ ರಫೀಕ್ ಕೋರಿದ್ದಾರೆ.

ಕಾಂಗ್ರೆಸ್ ನವರು ಗಾಳ ಹಾಕ್ತಾರ ಹುಷಾರ್
ಅಭ್ಯರ್ಥಿಗಳ ಅಯ್ಕೆ ಕುರಿತಂತೆ ಬಾಲಾಂಜನೇಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು‌. ಚುನಾವಣೆಗೆ ಸ್ಪರ್ಧೆ ಮಾಡಲು ಒಬ್ಬರಿಗೇ ಟಿಕೆ ಟ್ ನೀಡಲಿದೆ. ಹಾಗಂತ ಉಳಿದವರು ಅಸಮಾಧಾನ ಆಗುವುದು ಬೇಡ.

ಕಾಂಗ್ರೆಸ್ ನವರು ನಮ್ಮಲ್ಲಿ ಟಿಕೆಟ್ ಸಿಗದವರಿಗೆ ಗಾಳ ಹಾಕುತ್ತಾರೆ. ಹುಷಾರಾಗಿರಿ ಯಾರಿಗೇ ಟಿಕೆಟ್ ಸಿಗಲಿ ಎಲ್ಲರೂ ಸೇರಿ‌ ಕೆಲಸ ಮಾಡಿಎಂದ ಅವರು.
ಮತದಾರರು, ಕಾರ್ಯಕರ್ತ ರಲ್ಲಿ ಗೊಂದಲ‌ ಇಲ್ಲ. ಮುಖಂಡರಲ್ಲಿಯೇ ತಪ್ಪಿದೆ ಅದನ್ನು ಸರಿಪಡಿಸಿಕೊಳ್ಳಿ.
ಟಿಕೆಟ್ ಸಿಗದೇ ಹೋದರೆ ಸಿಟ್ಟಾಗುವವರನ್ನು ಸಮಾಧಾನ ಮಾಡೋಣ, ಈ ಬಾರಿ 26 ರಿಂದ 28 ಸ್ಥಾನ ಗೆಲಿಯಬೇಕು ಎಂದು ಹೇಳಿದರು. ಸಭೆಯಲ್ಲಿ ಗೌಳಿ ಶಂಕ್ರಪ್ಪ, ದೇವಣ್ಣ,ಚಂದ್ರ ಮೊದಲಾದವರು ಇದ್ದರು.

ಲೀಡರ್ ಗಳು ಡಿಸೈಡ್ ಮಾಡಲ್ಲ:
ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಲೀಡರ್ ಗಳು ಡಿಸೈಡ್ ಮಾಡಲ್ಲ.
ಅರ್ಜಿ ಕೊಡಿ ಅವುಗಳನ್ನು ರಾಜ್ಯ ಮುಖಂಡರಿಗೆ ಕಳಿಸುತ್ತೇವೆ ಅವರು ಅಂತಿಮ ಮಾಡುತ್ತಾರೆ
ಅದಕ್ಕೂ‌ಮುನ್ನ ಅವರುಬ
ಇಂಟಲಿಜೆನ್ಸಿಯಿಂದ ಸಹ ಜನಾಭಿಪ್ರಾಯ ಸಂಗ್ರಹ ಮಾಡಿರುತ್ತಾರೆ ಎಂದು ನಗರ ಶಾಸಕ‌ ಗಾಲಿ ಸೋಮಶೇಖರ ರೆಡ್ಡಿ ಹೇಳಿದರು.
ಈ ಚುನಾವಣೆ ನಮಗೆ ಭದ್ರ ಬುನಾದಿ. ಎಲ್ಲಾ ಚುನಾವಣೆಗೆ ಇದುವೇ ಬುನಾದಿ. ಇಲ್ಲಿ ಬಿಜೆಪಿ ಬಂದರೆ ಮುಂದಿನ ಎಲ್ಲವೂ ಬಿಜೆಪಿ‌ ಪಾಲಾಗಲಿವೆ.
ರಾಜ್ಯ ಹಾಗು ಕೇಂದ್ರದಲ್ಲಿ ಅಭಿವೃದ್ಧಿಯ ಹರಿಕಾರ ಮೋದಿ ಅವರ ಪ್ರಭಾವ ಇದೆ.
ಎಲ್ಲರೂ ಸೇರಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದರು.

ಜೆಡಿಎಸ್ ನಿದ್ರೆಯಲ್ಲಿ
ಬಿಜೆಪಿ ಬೀದಿ ಬೀದಿ ತಿರುಗಿ ಸಭೆ ನಡೆಸಿದರೆ, ಕಾಂಗ್ರೆಸ್ ಕನಿಷ್ಠ ಪಕ್ಷ ಅರ್ಜಿ ಆಹ್ವಾನಿಸಿದೆ. ಆದರೆ ಪಾಲಿಕೆ ಚುನಾವಣೆ ಬಗ್ಗೆ ಜೆಡಿಎಸ್ ಇನ್ನು ನಿದ್ರೆಯಿಂದ ಎಚ್ಚೆತ್ತುಕೊಂಡಂತೆ ಕಂಡು ಬರುತ್ತಿಲ್ಲ. ಕ್ರಿಯಾಶೀಲರಾಗಿರದ ಅಧ್ಯಕ್ಷರು, ಪ್ರಭಾವಿ ನಾಯಕರ ಕೊರತೆಯಿಂದ ಪಕ್ಷ ಚೇತರಿಸಿಕೊಳ್ಳಬೇಕಿದೆ. ಕಳೆದ ಹಲವು ಚುನಾವಣೆಗಳನ್ನು ಗಮನಿಸಿದರೆ ನಗರದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣವಾದ ಈ ಜೆಡಿಎಸ್ ಪಕ್ಷ ಈಗ ಅಧಿಕಾರ ರಹಿತವಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *