ಆಳಂದ : ಪುರಸಭೆಯಿಂದ ಮಾಸ್ಕ್ ಧರಿಸದವರಿಗೆ ದಂಡ ಕೋವಿಡ್-19 ಹರಡದಂತೆ ಸುರಕ್ಷಾ ಕ್ರಮಕ್ಕೆ ಸಲಹೆ
ಆಳಂದ : ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಅನೇಕರು ಮಾಸ್ಕ್ ಧರಿಸದ ವಾಹನ ಸವಾರರಿಗೆ ಪುರಸಭೆ ಮುಖ್ಯಾಧಿಕಾರಿ ಮಹಾವೀರ ಠಾಕಾಳೆ ಮಾರ್ಗದರ್ಶನದಲ್ಲಿ ಸಂಬಂಧಿತ ಅಧಿಕಾರಿಗಳು ದಂಡ ವಿಧಿಸಿದರು.
ಹಲವರು ತಪ್ಪಿಸಿಕೊಂಡು ಹೋದರು. ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಮಾಸ್ಕ್ ಧರಿಸದೇ ಓಡಾಡುತ್ತಿರುವುದು ಪುರಸಭೆಗೆ ದೊಡ್ಡ ತಲೆನೋವಾಗಿದೆ. ಇನ್ನು ಶ್ರೀರಾಮ ಮಾರುಕಟ್ಟೆ ಇನ್ನಿತರ ಪ್ರಮುಖ ಬಡಾವಣೆ ರಸ್ತೆಗಳಲ್ಲೂ ಸಹ ಧ್ವನಿವರ್ಧಕದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸಲು ಜಾಗೃತಿ ಮೂಡಿಸಿದರೂ ಸಹ ವ್ಯಾಪಾರಿಗಳು ಹಾಗೂ ಗ್ರಾಹಕರು ಅನೇಕರು ಮಾಸ್ಕ್ ಧರಿಸದೆ ವ್ಯವಹರಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರತೊಡಗಿದೆ. ವಾಣಿಜ್ಯ ಪ್ರದೇಶಗಳಲ್ಲಿಯೂ ಸಹ ಕೋವಿಡ್ ನಿಯಮಗಳು ಪಾಲನೆ ಆಗುತ್ತಿಲ್ಲ. ಹೀಗಾಗಿ ಪುರಸಭೆ ಇನ್ನೂ ಬಿಗಿ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗಿದೆ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.
ಬಸ್ ನಿಲ್ದಾಣ, ಮಾರುಕಟ್ಟೆ, ಸಿದ್ಧಾರ್ಥಚೌಕ್ ಪ್ರಮುಖ ಸ್ಥಗಳಲ್ಲಿ ಹಠಾತ ದಾಳಿಕೊಂಡು ಮಾಸ್ಕ್ ಧರಿಸಿದ ಸಾರ್ವಜನಿಕರಿಗೆ ದಂಡ ಹಾಕಲಾಗುತ್ತಿದೆ.
ಪುರಸಭೆ ಪರಿಸರ ಅಭಿಯಂತರ ರವಿಕಾಂತ ಮೀಸ್ಕಿನ್, ಎಸ್‍ಐ ಲಕ್ಷ್ಮಣ ತಳವಾರ, ಸಿಬ್ಬಂದಿ ರಾಜಕುಮಾರ ಪಿಂಪಳೆ, ಚಿದಾನಂದ ಜಂಗಲೆ, ನಾಗರಾಜ ಅಮರೆ, ಶಂಭುಲಿಂಗ ಜಗದೆ, ಹುಸೇನಿ ಚೌದ್ರಿ ಮತ್ತಿತರ ದಂಡವಸೂಲಿ ಇತರರು ಸೇರಿ ಕೋವಿಡ್-19 ನಿಯಮಾವಳಿ ಪಾಲಿಸಿ ಆಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದು ಜಾಗೃತಿ ಪ್ರಕಕ್ರಿಯೆಯಲ್ಲಿ ತೊಡಗಿದ್ದಾರೆ.
ಜಾಗೃತಿ ಸಭೆ: ತಹಸೀಲ್ದಾರ ಕಚೇರಿಯಲ್ಲಿ ಕೊರೊನಾ ವೈರಸ್ ಬಗ್ಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಈಚೆಗೆ ಮುಂಜಾಗೃತಿ ವಹಿಸುವಂತೆ ಸಲಹೆ ಸೂಚನೆಗಳನ್ನು ಅಧಿಕಾರಿಗಳು ಪಾಲನೆಗೆ ಕ್ರಮಕೈಗೊಳ್ಳಬೇಕು ಎಂದು ತಹಸೀಲ್ದಾರ ಯಲ್ಲಪ್ಪ ಸುಬೇದಾರ ಅವರು ಸೂಚಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಲಸಿಕೆ ನೀಡಲಾಗುತ್ತಿದೆ. ಸಾರ್ವಜನಿಕರು ಇದರ ಸದ್ಭಳಕೆ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಮುಂಜಾಗೃತೆ ವಹಿಸಿ: ನೆಗಡಿ, ಕೆಮ್ಮು ಸಾಮಾನ್ಯ ಜ್ವರ, ಉಸಿರಾಟಕ್ಕೆ ತೊಂದರೆಯಾದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ಆದಷ್ಟು ಕೈಗಳನ್ನು ಮೆಲಿಂದ ಮೇಲೆ ತೊಳೆದು ಸ್ವಚ್ಚವಾಗಿಟ್ಟುಕೊಳ್ಳಬೇಕು. ಗಾಳಿಯ ವೈರಾಣ ಬರುವ ಸಾಧ್ಯತೆ ಇರುತ್ತವೆ. ಸೀನು, ಮೂಗು, ಕಣ್ಣಿಗೆ ತಿಕ್ಕದರೆ ವೈರಸ್ ಹರಡುತ್ತದೆ. ಯಾವಗಲೂ ಕೈಗಳು ಸ್ವಚ್ಛವಾಗಿಟ್ಟುಕೊಳ್ಳಬೆಕು. ಸಾಮಾನ್ಯವಾಗಿ ಆಸ್ಪತ್ರೆಯ ಸಿಬ್ಬಂದಿಗಳು ಬಳಸುವ ಮಾಸ್ಕ್‍ಗಳನ್ನು ಬಳಸಲಾಗುತ್ತಿದೆ. ಮಾಸ್ಕ್ ಧರಿಸಿ ಸುರಕ್ಷಾ ಕ್ರಮಗಳನ್ನು ಅಳವಡಿಸಬೇಕು. ಕೋವಿಡ್ ಲಸಿಕೆಯನ್ನು ಪಡೆಯಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಜಿ. ಅಭಯಕುಮಾರ ಅವರು ಮನವಿ ಮಾಡಿದ್ದಾರೆ.