ಇಂಡಿ : ಮಾಧ್ಯಮದವರ ರಕ್ಷಣೆಗೆ ಪೊಲೀಸ್ ಇಲಾಖೆ ಸದಾ ಸಿದ್ದ :ಡಿವೈಎಸ್ಪಿ ಶ್ರೀಧರ ದೊಡ್ಡಿ
ಇಂಡಿ : ಸುದ್ದಿ ಮಾಡುವ ವಿಷಯ ಸೇರಿದಂತೆ ಇತರೆ ವಿಷಯದಲ್ಲಿ ಮಾಧ್ಯಮದವರಿಗೆ ಬೇದರಿಕೆ ಹಾಕುವ ಕೆಲಸ ಸಮಾಜಘಾತುಕ ಶಕ್ತಿಗಳು ಯಾರಾದರು ಮಾಡಿದರೆ ನೇರವಾಗಿ ನಮ್ಮ ಕಚೇರಿಗೆ ಸಂಪರ್ಕಿಸಿದರೆ ಮಾಧ್ಯಮದವರ ರಕ್ಷಣೆಗೆ ಪೆÇಲೀಸ್ ಇಲಾಖೆ ಸದಾ ಸಿದ್ದವಿದೆ .ಸಮಾಜಘಾತುಕ ಶಕ್ತಿಗಳನ್ನು ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿವೈಎಸ್ಪಿ ಶ್ರೀಧರ ದೊಡ್ಡಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೆಳೆಯರ ಬಳಗ ಹಮ್ಮಿಕೊಂಡ ಸನ್ಮಾನ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪೆÇಲೀಸ್ ಇಲಾಖೆ ಸಾರ್ವಜಕ ಸ್ನೇಹಿಯಾಗಿ ಕೆಲಸ ಮಾಡುತ್ತದೆ. ಪೆÇಲೀಸ್ರು ಸಾರ್ವಜನಿಕರೊಂದಿಗೆ ಗೌರವಿತಯಾಗಿ ನಡೆದುಕೊಳ್ಳಬೇಕು. ಸಾರ್ವಜನಿಕರಿಗೆ ಪೆÇಲೀಸ್ರೆಂದರೆ ಭಯ ಬೇಡ. ಪೆÇಲೀಸ್ ಇಲಾಖೆಯ ಭಯ ಹೋಗಲಾಡಿಸಲು ಪೆÇಲೀಸರು ಸಾರ್ವಜನಿಕರೊಂದಿಗೆ ಅನುನ್ಯವಾಗಿ ನಡೆದುಕೊಳ್ಳಬೇಕು. ಸಮಸ್ಯೆಗಳನ್ನು ಹೊತ್ತು ಠಾಣೆಗೆ ಬಂದರೆ ಗೌರವಿತವಾಗಿ ಅವರೊಂದಿಗೆ ನಡೆದುಕೊಂಡು ಅವರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.ಆದರೆ ಸಮಾಜ ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ,ಸಮಾಜದಲ್ಲಿ ಶಾಂತಿ,ಸೌಹಾರ್ಧತೆಗೆ ಧಕ್ಕೆ ತರುವ ಕೆಲಸ ಮಾಡಿದರೆ ಅಂತವರಿಗೆ ಮುಲಾಜಿಲ್ಲದೆ ಕಾನೂನಿನ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಸಾರ್ವಜನಿಕರು ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ, ಸಮಾಜದಲ್ಲಿ ಶಾಂತಿಗೆ ಬಂಗ ತರುವ ಪುಂಡಾಟಿಕೆ ನಡೆದರೆ ನಮಗೆ ನೇರವಾಗಿ ಮಾಹಿತಿ ನೀಡಬೇಕು. ಹಪ್ತಾ ವಸೂಲಿ,ಬಡ್ಡಿ ದಂಧೆ, ಮಟ್ಕಾ,ಜೂಜಾಟ ಸೇರಿದಂತೆ ಕಾನೂನು ಬಾಹಿರ ಕೆಲಸದಲ್ಲಿ ತೊಡಗಿದವರ ಮಾಹಿತಿ ನೀಡಿದರೆ ಆವರು ಯಾರೇ ಆದರೂ ಅವರ ಮೇಲೆ ನಿರ್ದಾಕ್ಷಣವಾಗಿ ಕ್ರಮ ಜರುಗಿಸಲಾಗುತ್ತದೆ.ಅಪರಾಧ ತಡೆಗಟ್ಟುವಲ್ಲಿ ಸಾರ್ವಜನಿಕರು ಪೆÇಲಿಸ್ ಇಲಾಖೆ ಜತೆ ಸಹಕರಿಸಬೇಕು ಎಂದು ಹೇಳಿದರು.
ಕರ್ನಾಟಕ ಪತ್ರಕರ್ತರ ಸಂಘದ ತಾಲೂಕ ಅಧ್ಯಕ್ಷ ಖಾಜು ಸಿಂಗೆಗೋಳ,ಪ್ರ.ಕಾರ್ಯದರ್ಶಿ ಶರಣಬಸಪ್ಪ ಎನ್.ಕೆ,ಹಿರಿಯ ಪತ್ರಕರ್ತ ಐ.ಸಿ.ಪೂಜಾರ, ರಾಮಚಂದ್ರ ಯಂಕಂಚಿ,ಕಾನಿಪ ಸಂಘದ ತಾಲೂಕ ಅಧ್ಯಕ್ಷ ಲಾಲಸಿಂಗ ರಾಠೋಡ, ವಿನೋದ ತಾಂಬಾ, ಜೈಭೀಮ ಅಗರಖೇಡ,ವಿವಿಧ ಸಂಘಟನೆಗಳ ಮುಖಂಡರಾದ ಶಿವಾನಂದ ಮೂರಮನ, ಶಿವು ತೆನ್ನಿಹಳ್ಳಿ,ಚಂದಣ್ಣ ಆಲಮೇಲ(ಮಿರಗಿ), ಸಂಜು ಜನ್ನಾ ಇತರರು ಈ ಸಂದರ್ಭದಲ್ಲಿ ಇದ್ದರು.