ರಾಜ್ಯಾದ್ಯಂತ ಟ್ಯಾಕ್ಸಿ ದರ ಏರಿಕೆ: ಸರ್ಕಾರ ಆದೇಶ
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಟ್ಯಾಕ್ಸಿ ದರ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ.
ವಿವಿಧ ಮಾದರಿಯ ಟ್ಯಾಕ್ಸಿ ಗಳಿಗೆ ಬಾಡಿಗೆ ದರವನ್ನು ವಾಹನಗಳ ಮೌಲ್ಯಕ್ಕೆ ತಕ್ಕಂತೆ ಪರೀಕ್ಷಕರಣೆ ಮಾಡಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಹೆಚ್ಚಳ ಹಿನ್ನೆಲೆಯಲ್ಲಿ ಟ್ಯಾಕ್ಸಿ ದರ ಪರಿಷ್ಕರಣೆ ಮಾಡಲಾಗಿದೆ.
5 ಲಕ್ಷ ರೂಪಾಯಿ ವರೆಗಿನ ವಾಹನಕ್ಕೆ ಕನಿಷ್ಠ 4 ಕಿ.ಮೀ 75 ರೂಪಾಯಿ ದರ ನಿಗಧಿ ಮಾಡಲಾಗಿದೆ.ಪ್ರತಿ ಕೀಲೋ ಮೀಟರ್ ದರವನ್ನು 18 ರೂಪಾಯಿಂದ 36 ರೂಪಾಯಿಗೆ ಹೆಚ್ಚಿಸಲಾಗಿದೆ.
5 ಲಕ್ಷದಿಂದ 10 ರೂಪಾಯಿ ಮೊತ್ತದ ವಾಹನಕ್ಕೆ 100 ರೂಪಾಯಿ ಪ್ರತಿ ನಾಲ್ಕು ಕಿ.ಮೀಗೆ ದರ ನಿಗಧಿ ಮಾಡಲಾಗಿದ್ದು ಪ್ರತಿ ಕಿ.ಮಿ 21 ರೂಪಾಯಿಂದ 42 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.
10 ರಿಂದ 16 ಲಕ್ಷ ರೂಪಾಯಿ ವರೆಗಿನ ವಾಹನಗಳಿಗೆ 120 ರೂಪಾಯಿ ನಿಗಧಿ ಮಾಡಲಾಗಿದೆ.ಪ್ರತಿ ಕಿ ಮೀ 24 ರೂಪಾಯಿಂದ 48 ರೂಗೆ ಹೆ್ಚ್ಚಚ್ಚಳ ಮಾಡಲಾಗಿದೆ.
16 ಲಕ್ಷ ಮೇಲ್ಟಟ್ಟ ವಾಹನಗಳಿ್ಗೆಗೆ ಪ್ರತಿ ಕಿ.ಮೀ 150 ರೂ ನಿಗಧಿ ಮಾಡಲಾಗಿದೆ. 27 ರೂಪಾಯಿ 54 ರೂಪಾಯಿ ಹೆಚ್ಚಳ ಮಾಡಿ ಸರ್ಕಾರ ಪರಿಷ್ಕರಣೆ ಮಾಡಿದೆ.
ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದರು.ಸಾರಿಗೆ ಇಲಾಖೆ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಸರ್ಕಾರ ಪರಿಷ್ಕರಣೆ ಮಾಡಿ ಆದೇಶ ಮಾಡಿದೆ.