ಅರೋಗ್ಯವಂತ ಸಮಾಜಕ್ಕೆ ಜವಾಬ್ದಾರಿಯುತ ಮಾಧ್ಯಮಗಳು ಅತ್ಯಾವಶಕ | Article By Kashibai Guttedar
ಹೌದು ಇಂತಹ ಕರೋನ ಹಂತ ಸಂದರ್ಭದಲ್ಲಿ ಇವುಗಳ ಪಾತ್ರ ತುಂಬಾ ಮುಖ್ಯವಾದುದು.
ಈ ಕರೋನ ವೈರಸ್ ಹಾವಳಿನಿಂದ ತತರಿಸಿರುವ ಜನತೆಗೆ ಖಚಿತ ಮಾಹಿತಿ, ಮುನೆಚ್ಚಿರಿಕೆ ಕ್ರಮಗಳ ಕುರಿತು ಮಾಹಿತಿ ನೀಡಿ ಅತ್ಯಂತ ಸುದೀರ್ಘವಾಗಿ ಕಾರ್ಯನಿರ್ವಹಿಸುವವರೇ ಈ ನಮ್ಮ ಪತ್ರಕರ್ತರು.
ಅದರ ಜೊತೆಗೆ ನ್ಯಾಯಕ್ಕೋಸ್ಕರ ಹತ್ತು ಹಲವು ಬಾರಿ ತಮ್ಮ ಜೀವನನ್ನೇ ಪಣಕಿಟ್ಟು ದೈರ್ಯದಿಂದ ವರದಿ ಮಾಡಿ ನ್ಯಾಯ ಕೊಡಿಸುವವರೇ ಈ ಮಾಧ್ಯಮ ಮಿತ್ರರು.
ಪತ್ರಿಕಾ ಸ್ವತಂತ್ರದ ಮೂಲಭೂತ ಸಿದ್ದಂತಾಗಳ ರಕ್ಷಣೆ ಮಾಡುತ್ತಿರುವ, ತಮ್ಮ ಕೆಲಸದ ನಿರ್ವಹಣೆಯ ಸಂದರ್ಭದಲ್ಲಿಯೇ ತಮ್ಮ ಪ್ರಾಣ ಕಳೆದುಕೊಂಡು ಹಾಗೂ ಕರೋನ ಸಂಕಷ್ಟದಲಿಯೇ ನಮಗೆಲ್ಲರಿಗೂ ಖಚಿತ ಮಾಹಿತಿ ನೀಡಿ ಸಾಹಸ ಮೆರೆಯುತ್ತಿದ್ದಾರೆ ಎಂದು ಹೇಳಿದಾರೆ ತಪ್ಪಾಗಲಾರದು.
ನಿಸ್ಪಕ್ಷಪಾತವಾಗಿ ಸಮಾಜದ ಶ್ರೇಯಸ್ಸಿಗಾಗಿ ಯಾವುದೇ ರೀತಿಯ ದಕ್ಕೆ ಉಂಟಾಗದಂತೆ ಮಾಹಿತಿ ನೀಡುವರು.ಇಂದು ಇವರು ಇರಲಿಲ್ಲ ಎಂದರೆ ಈ ಪ್ರಪಂಚ ಊಹಿಸಲು ಕೂಡ ಆಗುತ್ತಿರಲಿಲ್ಲ.
ಈ ಪತ್ರಿಕಾ ಸ್ವತಂತ್ರ ದಿನ ಆಚರಣೆ ಮಾಡುವುದು ನಿನ್ನೆ ಮೊನ್ನೆಯದಲ್ಲ ಸುಮಾರು ವರ್ಷಗಳಿಂದಲೂ ಆಚರಿಸುವಂತಹದು.
ಇದಕ್ಕೆ ಸುಮಾರು ದಶಕಗಳ ಇತಿಹಾಸವಿದೆ 1991 ರಲ್ಲಿ ನಡೆದ ಯುನೆಸ್ಕೊದ 26 ಸಮ್ಮೇಳನದ ಲ್ಲಿ ಪತ್ರಿಕಾ ಸ್ವತಂತ್ರ ಕುರಿತು ಆಫ್ರಿಕನ್ ಜರ್ನಿಲಿಷ್ಟಗಳ ಒತ್ತಾಸೆ ಇಂದ ಮೇ 3 ರಂದು ಸ್ವಾತಂತ್ರ ಪತ್ರಿಕಾ ದಿನಾಚರಣೆಯನ್ನು ಆಚರಣೆ ಮಾಡಬೇಕೆಂಬ ತೀರ್ಮಾನ ತೆಗೆದುಕೊಂಡು,1993 ರಂದು ಅಂಗಿಕರಿಸಲಾಯಿತು.
ಅಂದಿನಿಂದ ಇಂದಿನ ವರೆಗೂ ಆಚರಣೆ ಮಾಡುತ್ತಾ ಬಂದಿದ್ದಾರೆ.
ಇದರ ಮುಖ್ಯ ಉದ್ದೇಶ ಎಂದರೆ
ವಿಶ್ವದಾದ್ಯಂತ ಪತ್ರಿಕಾ ಸ್ವಾತಂತ್ರವನ್ನು ಮೌಲ್ಯಮಾಪನ ಮಾಡುವುದು, ತಮ್ಮ ಸ್ವಾತಂತ್ರಕ್ಕಾಗಿ ಮಾಧ್ಯಮಗಳ ಮೇಲೆ ನಡೆಯುತ್ತಿರುವ ದಾಳಿಯಿಂದ ರಕ್ಷಿಸಿಕೊಳುವುದರ ಮಾರ್ಗಪಾಯಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಮತ್ತು ಪತ್ರಿಕಾ ಸ್ವಾತಂತ್ರವನ್ನು ಕಾಪಾಡಿಕೊಳ್ಳುವ ಸಲುವಾಗಿ ಸರಕಾರಗಳಿಗೆ ಮನವರಿಕೆ ಮಾಡಿಕೊಡುವ ಉದ್ದೇಶವನ್ನು ಹೊಂದಿದೆ.
1843 ಮೊತ್ತಮೋದಲ ಬಾರಿಗೆ ಮಂಗಳೂರು ಸಮಾಚಾರ ಪತ್ರಿಕೆ ಹರ್ಮನ್ ಮೋಗ್ಲಿಂಗ ಅವರು ಕರ್ನಾಟಕದ ಮೊದಲ ಪತ್ರಿಕೆ ಎಂದು ತಿಳಿಸಿದರು.
ಕ್ರಿಸ್ತ ಮತದ ಪ್ರಚಾರದ ಸಲುವಾಗಿ ಇದನ್ನು ಹೊರ ತಂದರು.ಹೀಗೆ ಹತ್ತು ಹಲವು ಪತ್ರಿಕೆಗಳು ತೆರೆಕೊಂದುಕೊಂಡವು.
ಪತ್ರಿಕೆ ಸ್ವಾತಂತ್ರವನ್ನು ಎತ್ತಿ ಹಿಡಿಯುವುದಕ್ಕಾಗಿ
ನಮ್ಮ ದೇಶದ ಹಿತಕ್ಕಾಗಿ ಪ್ರತಿನಿತ್ಯದ ಸುದ್ದಿಗಳನ್ನು ತಿಳುಸುವವರೇ ನಮ್ಮ ಪತ್ರಕರ್ತರು.
ಪತ್ರಿಕೋದ್ಯಮ ಎಂಬುದು ಯಾವಾಗಲು ಉತ್ತಮವಾದ ಸತ್ಯಂಶ ವನ್ನು ಹುಡುಕುತ್ತದೆ ವಿನಹ ಅಸತ್ಯವನಲ್ಲ.
ಮಾನವೀಯತೆ ಮತ್ತು ಸಮಾಜದ ಪ್ರಗತಿಯನ್ನು ಸದಾ ಬಯಸುತ್ತದೆ ಹಾಗೆ ನಮ್ಮ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯುತ್ತದೆ.
ಇಂದಿನ ಸ್ಪರ್ಧಾತ್ಮಕ ಯುಗಗಳಲ್ಲಿ ಪತ್ರಿಕಾ ರಂಗ ಮಾಧ್ಯಮಗಳು ತನ್ನದೇ ಅದ ವಿಶಿಷ್ಟ ಸ್ಥಾನಮಾನಗಳನ್ನೂ ತುಂಬುತ್ತಿದೆ.
ಪತ್ರಿಕಾ ಸ್ವಾತಂತ್ರ ಮೂಲಭೂತ ತತ್ವಗಳ ಅರಿವು ಮೂಡಿಸಲು, ಮೌಲ್ಯಗಳನ್ನು ಎತ್ತಿ ಹಿಡಿಯಲು
ಮತ್ತು ಪತ್ರಕರ್ತರ ರಕ್ಷಣೆಗೆಂದೇ ಜನ್ಮ ತಾಳಿದ ದಿನವೇ ಈ ವಿಶ್ವ ಸ್ವಾತಂತ್ರ ಪತ್ರಿಕಾ ದಿನ.
ಕರೋನ ಮಹಾಮಾರಿಯ ಪರಿಸ್ಥಿತಿಯಲ್ಲೂ ಕೂಡ
ಕರೋನ ವಾರಿಯರ್ಸ್ ಗಳಂತೆ ಹೋರಾಡುತ್ತ,
ನಾಡಿನ ಜನತೆಗೆ ನಿಕರವಾದ ಸುದ್ದಿಗಳನ್ನು ನೀಡುತ್ತಿರುವವರೇ ಈ ನಮ್ಮ ಪತ್ರಿಕಾ ರಂಗದವರು.
ಸತತವಾಗಿ 2ವರ್ಷಗಳಿಂದ ಈ ಕರೋನ ಸಂದರ್ಭದಲ್ಲಿಯೂ ತಮ್ಮ ಮನೆ ಮಠ, ತಮ್ಮ ಜೀವನದ ಬಗ್ಗೆ ಯಾವುದೇ ರೀತಿಯ ಅಂಜಿಕೆ ಇಲ್ಲದೆ ಎಲ್ಲಾ ಬಗೆಯ ಸುದ್ದಿಗಳನ್ನು ಜನತೆಗೆ ತಿಸುತ್ತಿರುವ ನನ್ನ ಎಲ್ಲ ಮಾಧ್ಯಮ ಮಿತ್ರರಿಗೂ ಹಾಗೂ ಭಾವಿ ಪತ್ರಕರ್ತರಿಗೂ ಪತ್ರಿಕಾ ಸ್ವಾತಂತ್ರ ದಿನಾಚರಣೆಯ ಶುಭಾಶಯಗಳು.
ಕಾಶಿಬಾಯಿ. ಸಿ. ಗುತ್ತೇದಾರ