ಹೊರ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದ ಘಟಕವನ್ನು ಸುಪರ್ದಿಗೆ ಪಡೆಯಲಾಗಿದೆ : ಡಿಸಿ ವಿ ವಿ ಜೋತ್ಸ್ನಾ
ಹೊರ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದ ಘಟಕವನ್ನು ಸುಪರ್ದಿಗೆ ಪಡೆಯಲಾಗಿದೆ : ಡಿಸಿ ವಿ ವಿ ಜೋತ್ಸ್ನಾ
ಕಲಬುರಗಿ : ನಗರದ ವಿಜಯ ಆಕ್ಸಿಜನ್ ಉತ್ಪಾದನಾ ಘಟಕದಿಂದ ರಾತ್ರೋರಾತ್ರಿ ಹೊರ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿರುವುದರ ಹಿನ್ನೆಲೆ ಆಕ್ಸಿಜನ್ ಘಟಕವನ್ನು ಜಿಲ್ಲಾಡಳಿತ ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ವಿ ವಿ ಜೋತ್ಸ್ನಾ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಅಧಿಕಾರಿಗಳು ಆಕ್ಸಿಜನ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆಗೆ ಮುಂದಾದಾಗ ಘಟಕದ ಮಾಲೀಕ ಒಳಬಿಡದೇ ಮೊಂಡುತನ ಪ್ರದರ್ಶಿಸಿದ್ದಾನೆ.
ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾಯ್ದೆ ಅಡಿ ಆಕ್ಸಿಜನ್ ಉತ್ಪಾದನಾ ಘಟಕವನ್ನು ಜಿಲ್ಲಾಡಳಿತ ಜಪ್ತಿ ಮಾಡಿ, ಸದ್ಯ ಎಸಿ ಮಾನಿಟರಿಂಗ್ನಲ್ಲಿ ಯುನಿಟ್ ರನ್ ಮಾಡಲಾಗುವುದು ಎಂದರು
ಜಿಲ್ಲೆಯಲ್ಲಿ ದಿನನಿತ್ಯ ಹಲವಾರು ಸೋಂಕಿತರು ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪುತ್ತಿದ್ದರೂ ಸಹ, ಕೆಲವರು ದುಡ್ಡಿನ ಆಸೆಗೆ ಜಿಲ್ಲಾಡಳಿತದ ಕಣ್ಣುತಪ್ಪಿಸಿ ಆಕ್ಸಿಜನ್ನ ರಾತ್ರೋರಾತ್ರಿ ಹೊರ ರಾಜ್ಯಕ್ಕೆ ರವಾನಿಸುತ್ತಿದ್ದಾರೆ.
ಈ ಕೂಡಲೇ ಜಿಲ್ಲಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಅಕ್ರಮ ಆಕ್ಸಿಜನ್ ಸಪ್ಲೈ ತಡೆಗಟ್ಟಬೇಕು. ಆಗಲೇ ಜಿಲ್ಲೆಯಲ್ಲಿ ಉಂಟಾಗುತ್ತಿರುವ ಸಾವುಗಳನ್ನು ತಡೆಯಬಹುದು ಹಾಗೂ ಆಕ್ಸಿಜನ್ ಕೊರತೆ ಕೂಡ ನೀಗಿಸಬಹುದು ಎಂಬುದು ಇಲ್ಲಿನ ಜನರ ಒತ್ತಾಯವಾಗಿದೆ.