‘ಕರೋನ ಟೆಸ್ಟ್ ಮಾಡಿಸಿಕೊಳ್ಳುವವರು ಪೂರ್ಣ ಮಾಹಿತಿ ನೀಡುವುದು ಕಡ್ಡಾಯ’
ಕರೋನ ಟೆಸ್ಟ್ ಗೆ ಒಳಗಾಗುವವರು ಸಂಪೂರ್ಣ ಮಾಹಿತಿ ನೀಡುವುದು ಅತಿ ಅಗತ್ಯ, ಅಪೂರ್ಣ ಮಾಹಿತಿಯಿಂದಾಗಿ ಸೋಂಕಿತರ ಪತ್ತೆಮಾಡುವುದು ದುಸ್ತರವಾಗುತ್ತಿದೆ, ಆದ್ದರಿಂದ ಇನ್ನು ಮುಂದೆ ಕರೋನ ಟೆಸ್ಟ್ ಮಾಡಿಸುವಾಗ ಅವರ ಪೂರ್ಣ ವಿವರಗಳನ್ನು ಪಡೆಯುವುದು ಕಡ್ಡಾಯ ಮಾಡಬೇಕೆಂದು ಸಚಿವ ಅರವಿಂದ ಲಿಂಬಾವಳಿ ಸೂಚಿಸಿದ್ದಾರೆ.
ಅವರು ಇಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಅವರ ಸ್ಥಿತಿಯಲ್ಲಿ ಮಾಗಡಿರಸ್ತೆಯ ಆರೋಗ್ಯ ಭವನದಲ್ಲಿರುವ ರಾಜ್ಯ ಕೋವಿಡ್ ವಾರ್ ಸೆಂಟರ್ ನಲ್ಲಿ ಸಭೆ ನಡೆಸಿ ಮಾತನಾಡುತ್ತಿದ್ದರು.
ಟೆಸ್ಟ್ಗೆ ಒಳಗಾಗುವವರು ತಮ್ಮ ಪೂರ್ಣ ಮಾಹಿತಿ ನೀಡಿದರೆ ಸರ್ಕಾರಕ್ಕೆ ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ವ್ಯವಸ್ಥೆ ಮಾಡಲು ನೆರವಾಗುತ್ತದೆ.ಜೊತೆಗೆ ಪಾಸಿಟೀವ್ ಬಂದ ವ್ಯಕ್ತಿ ಚಿಕಿತ್ಸೆಯಿಂದ ತಪ್ಪಿಸಿ ಕೊಳ್ಳಲು ಮೊಬೈಲ್ ಆಫ್ ಮಾಡಿಕೊಂಡರೆ ಅವರನ್ನು ಪತ್ತೆ ಹಚ್ಚಲು ಟೆಸ್ಟ್ ವೇಳೆ ಪೂರ್ಣ ಮಾಹಿತಿ ದರೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಈ ಬಗ್ಗೆ ಜನಜಾಗೃತಿ ಮೂಡಿಸಲು ಗಣ್ಯ ವ್ಯಕ್ತಿಗಳ ರಾಯಭಾರತ್ವ ದಲ್ಲಿ ಪ್ರಚಾರ ಆಂದೋಲನ ನಡೆಸಬೇಕೆಂದು ಸಲಹೆ ನೀಡಿದರು.ಅನೇಕ ಲ್ಯಾಬ್ ಗಳು ನಿಗದಿತ ಸಮಯದಲ್ಲಿ ಮಾಡಿದ ವರದಿಗಳನ್ನು ಅಪ್ಲೋಡ್ ಮಾಡುತ್ತಿಲ್ಲ, ಜೊತೆಗೆ ಕೆಲವು ಲಾಭಗಳು ತಪ್ಪು ವರದಿಗಳನ್ನು ಸಲ್ಲಿಸುತ್ತಿರುವುದನ್ನು ಗಮನಿಸಲಾಗಿದೆ ಅಂತಹ ಲ್ಯಾಬ್ ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಿ, ಅವರಿಗೆ ನೋಟಿಸ್ ಜಾರಿ ಮಾಡಿ ಎಂದು ಸಚಿವರು ಸೂಚಿಸಿದರು.
ರಾಜ್ಯದ ಎಲ್ಲಾ ತಾಲ್ಲಕುಗಳಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲು ಅವರು ಸೂಚಿಸಿದರು. ಸೋಂಕಿತರು ಮೊದಲು ಹೋಗಿ ಕೇರ್ ಸೆಂಟರ್ ಗೆ ಬಂದು ತಪಾಸಣೆಗೆ ಒಳಗಾಗಿ ನಂತರವೇ ಆಸ್ಪತ್ರೆಗಳಿಗೆ ಅವರನ್ನು ಕಳುಹಿಸಲಾಗುತ್ತದೆ.ತಾಲೂಕು ಕೇಂದ್ರಗಳಲ್ಲಿ ಈಗಾಲೇ ಬೆಡ್ ಸಹಿತ ಕೊಠಡಿ ಇರುವುದರಿಂದ ಅವುಗಳನ್ನು ಪೋವಿಟ್ ಕೇರ್ ಸೆಂಟರ್ ಗಳಾಗಿ ಪರಿವರ್ತಿಸಬಹುದಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿನೀಡಿದ ಸಲಹೆ ಸೂಕ್ತವಾಗಿದೆ,ಅದರಂತೆ ಕ್ರಮಕೈಗೊಳ್ಳಿ ಎಂದು ಸಚಿವರು ಆದೇಶಿಸಿದರು.
ಸೋಂಕಿತರು ಹೆಚ್ಚಿರುವ ಹತ್ತು ಜಿಲ್ಲೆಗಳಲ್ಲಿ ಮೈಸೂರು, ಮಂಡ್ಯ, ಹುಬ್ಬಳ್ಳಿ-ಧಾರವಾಡ ಕಲಬುರ್ಗಿ, ಬಳ್ಳಾರಿ ಹಾಸನ ,ದಕ್ಷಿಣ ಕನ್ನಡ, ತುಮಕೂರು, ಬೀದರ್ ಜಿಲ್ಲೆಗಳ ತಾಲ್ಲೂಕು ಕೇಂದ್ರ ಗಳಲ್ಲೂ ಕೋವಿಡ್ ಕೇರ್ ಸೆಂಟರ್ ಆರಂಭಿಸುವಂತೆ, ಹಾಗೂ ಬೇಡಿಕೆ ಇರುವಷ್ಟು ಹಾಸಿಗೆಗಳ ಲಭ್ಯತೆಯನ್ನು ಖಚಿತ ಪಡಿಸಿಕೊಳ್ಳಬೇಕೆಂದು ಸಚಿವರು ತಿಳಿಸಿದರು.
ಇದರಿಂದ ಒಂದೇ ಕೊಠಡಿ ಇರುವ ಮನೆಗಳಲ್ಲಿ ವಾಸಿಸುವ ವ್ಯಕ್ತಿಗಳನ್ನು ಅಲ್ಲಿಗೆ ದಾಖಲು ಮಾಡಿ ಚಿಕಿತ್ಸೆ ನೀಡಿದರೆ, ಆಸ್ಪತ್ರೆ ಮೇಲಿನ ಒತ್ತಡ ಕಡಿಮೆ ಮಾಡಿಕೊಳ್ಳಲು ಸಾಧ್ಯ ವಾಗುತ್ತದೆ ಎಂದರು. ಸಭೆಯಲ್ಲಿ ಕೊರೋನಾ ನಿರ್ವಹಣೆಯ ಹೊಣೆ ಹೊತ್ತ ಶ್ರೀ ಪೊನ್ನುರಾಜ್, ವಿಶ್ವಜಿತ್ ಮಿಶ್ರ, ಮಂಜುನಾಥ್ ಪ್ರಸಾದ್, ಡಾ.ಅರುಂಧತಿ ಚಂದ್ರಶೇಖರ್ ಸೇರಿದಂತೆ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು