‘ಸರ್ಕಾರ ಜೀವ ಉಳಿಸುವ ಸ್ಥಿತಿಯಲ್ಲಿಲ್ಲ, ನಮ್ಮ ಜೀವ ನಾವೇ ರಕ್ಷಿಸಿಕೊಳ್ಳಬೇಕು’: ಶರಣಪ್ರಕಾಶ ಪಾಟೀಲ​​

ಈಗಿನ ದುಸ್ಥಿತಿಯಲ್ಲಿ ನಮ್ಮ ಮತ್ತು ನಮ್ಮವರ ಜೀವ ನಾವೇ ರಕ್ಷಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ನಿರಂತರವಾಗಿ ಕೈ ಕಾಲು ತೊಳೆಯುತ್ತಿರಿ ಎಂದು ಕೆಪಿಸಿಸಿ ವಕ್ತಾರ ಡಾ. ಶರಣಪ್ರಕಾಶ ಪಾಟೀಲ ಮನವಿ ಮಾಡಿದ್ದಾರೆ.

ಸೇಡಂ: ಕೊರೊನಾ 2ನೇ ಅಲೆ ಅತ್ಯಂತ ಅಪಾಯಕಾರಿಯಾಗಿದೆ. ಸರ್ಕಾರ ಜೀವ ಉಳಿಸುವ ಸ್ಥಿತಿಯಲ್ಲಿಲ್ಲ. ನಮ್ಮ ಜೀವ ನಾವೇ ರಕ್ಷಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಹಾಗೂ ಕೆಪಿಸಿಸಿ ವಕ್ತಾರ ಡಾ. ಶರಣಪ್ರಕಾಶ ಪಾಟೀಲ ಸಲಹೆ ನೀಡಿದ್ದಾರೆ

 

ಕೊರೊನಾ ಪ್ರಕರಣಗಳ ಸಂಖ್ಯೆ ವ್ಯಾಪಕವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸಾವು ನೋವುಗಳ ಸಂಖ್ಯೆ ಹೆಚ್ಚಾಗಬಹುದು. ಹಾಗಾಗಿ ಯಾರೂ ಸಹ ಮನೆಯಿಂದ ಹೊರ ಬರಬೇಡಿ. ತೀರಾ ಅವಶ್ಯಕತೆ ಇದ್ದಲ್ಲಿ ಮಾತ್ರ ಮಾಸ್ಕ್ ಧರಿಸಿ ಹೊರ ಬನ್ನಿ ಎಂದು ಸಲಹೆ ನೀಡಿದ್ದಾರೆ.

ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದರ ಪರಿಣಾಮ ಈ ಜನತೆ ಅನುಭವಿಸುವಂತಾಗಿದೆ. ಈಗಿನ ದುಸ್ಥಿತಿಯಲ್ಲಿ ನಮ್ಮ ಮತ್ತು ನಮ್ಮವರ ಜೀವ ನಾವೇ ರಕ್ಷಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ನಿರಂತರವಾಗಿ ಕೈ ಕಾಲು ತೊಳೆಯುತ್ತಿರಿ ಎಂದು ಮನವಿ ಮಾಡಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *