ಬೆಡ್‌ ಬ್ಲಾಕಿಂಗ್‌ ದಂಧೆಯಲ್ಲಿ ಸ್ವಪಕ್ಷದ ಶಾಸಕ ಶಾಮೀಲು; ರಾಜ್ಯ ಬಿಜೆಪಿಗೆ ಮುಜುಗರ

ಹೈಲೈಟ್ಸ್‌:

  • ಬೆಡ್‌ ಬ್ಲಾಕಿಂಗ್‌ ದಂಧೆಯಲ್ಲಿ ಸ್ವಪಕ್ಷದ ಶಾಸಕನೇ ಶಾಮೀಲು
  • ಘಟನೆಯಿಂದ ರಾಜ್ಯ ಬಿಜೆಪಿಗೆ ಇರಿಸುಮುರಿಸು
  • ಸಂಕಷ್ಟದ ಸಮಯದಲ್ಲಿಇಂತಹ ಘಟನೆಯಿಂದ ಪಕ್ಷಕ್ಕೆ ಮುಜುಗರ
  • ಈ ವಿಚಾರವಾಗಿ ದಿಲ್ಲಿ ಅಂಗಳಕ್ಕೂ ಮಾಹಿತಿ ರವಾನೆ

ಬೆಂಗಳೂರು: ಬೆಡ್‌ ಬ್ಲಾಕಿಂಗ್‌ ಪ್ರಕರಣದಲ್ಲಿ ಪಕ್ಷದ ಶಾಸಕ ಶಾಮೀಲಾಗಿರುವುದು ಬಯಲಿಗೆ ಬಂದದ್ದರಿಂದ ರಾಜ್ಯ ಬಿಜೆಪಿಯಲ್ಲಿ ತಲ್ಲಣ ಉಂಟಾಗಿದೆ. ಜತೆಗೆ ಈ ವಿಚಾರವಾಗಿ ದಿಲ್ಲಿ ಅಂಗಳಕ್ಕೂ ಮಾಹಿತಿ ರವಾನೆಯಾಗಿದೆ.

ಸಂಸದ ತೇಜಸ್ವಿ ಸೂರ್ಯ ಮತ್ತಿತರರು ಬೆಡ್‌ ಬ್ಲಾಕಿಂಗ್‌ ಪ್ರಕರಣವನ್ನು ಭೇದಿಸಿದಾಗಲೂ ಬಿಜೆಪಿಯಲ್ಲಿ ಒಂದು ಬಗೆಯ ತಳಮಳ ಸೃಷ್ಟಿಯಾಗಿತ್ತು. ಕೋವಿಡ್‌ನಂತಹ ಸಂಕಷ್ಟದ ಸಮಯದಲ್ಲಿಇಂತಹ ಘಟನೆ ನಡೆದದ್ದು ಪಕ್ಷಕ್ಕೆ ಮುಜುಗರ ತರಲಿದೆ ಎಂದೇ ಭಾವಿಸಲಾಯಿತು. ಆದರೆ, ಅದಕ್ಕಿಂತಲೂ ಹೆಚ್ಚಿನ ಇರಿಸುಮುರಿಸು ಈಗ ಆಗಿದೆ. ಅಂದರೆ ಪಕ್ಷದ ಶಾಸಕರೇ ಬೆಡ್‌ ಬ್ಲಾಕಿಂಗ್‌ಗೆ ಇಂಬು ಕೊಟ್ಟಿದ್ದಾರೆ ಎನ್ನುವುದನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಬಗ್ಗೆ ಪಕ್ಷದ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆಯಾಗಿದೆ ಎನ್ನಲಾಗಿದೆ.

ಬೆಡ್‌ ಬ್ಲಾಕಿಂಗ್‌ ಪ್ರಕರಣ ಬಯಲಿಗೆ ಎಳೆದಿದ್ದು, ರಾಷ್ಟ್ರೀಯ ಮಾಧ್ಯಮಗಳಲ್ಲೂ ದೊಡ್ಡ ಸುದ್ದಿಯಾಗಿತ್ತು. ಇದರಿಂದಾಗಿ ಸಂಸದ ತೇಜಸ್ವಿ ಸೂರ್ಯ ನಡೆಸಿದ ಕಾರ್ಯಾಚರಣೆ ದಿಲ್ಲಿಯ ವರಿಷ್ಠರ ಗಮನಕ್ಕೆ ಬರುವಂತಾಗಿತ್ತು. ಇದಲ್ಲದೆ ಕೆಲವು ನಾಯಕರೂ ಈ ಬಗ್ಗೆ ಹೈಕಮಾಂಡ್‌ಗೆ ಮಾಹಿತಿ ನೀಡಿದ್ದರು. ಆದರೆ, ಗುರುವಾರದ ಹೊತ್ತಿಗೆ ಈ ಪ್ರಕರಣಕ್ಕೆ ಬೇರೆಯದೇ ಟ್ವಿಸ್ಟ್‌ ಸಿಕ್ಕಿದೆ. ಇದರಿಂದ ಬಿಜೆಪಿ ನಾಯಕರು ದಂಗಾಗುವಂತಾಗಿದೆ ಎಂದು ತಿಳಿದು ಬಂದಿದೆ.

ಹಾಗಾಗಿ ಬೆಡ್‌ ಬ್ಲಾಕಿಂಗ್‌ನಲ್ಲಿ ಪಕ್ಷದ ಶಾಸಕ ಶಾಮೀಲಾದ ಸಂಗತಿ ಈಗಾಹಲೇ ಹೈಕಮಾಂಡ್‌ಗೆ ತಲುಪಿದೆ. ಇದರ ಆಧಾರದಲ್ಲಿ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಕುತೂಹಲವಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *