ಗಮನಿಸಿ: ನಿಗದಿತ ಅವಧಿ ಮುಗಿದ 1 ತಿಂಗಳೊಳಗೂ ಲಸಿಕೆಯ 2ನೇ ಡೋಸ್ ಪಡೆಯಬಹುದು, ತಡವಾದರೆ ಆತಂಕ ಬೇಡ!
ಎರಡನೇ ಲಸಿಕೆ ತಡವಾದರೂ ಆತಂಕ ಬೇಡ ಎಂದು ಆರೋಗ್ಯ ಪರಿಣಿತರು ಹೇಳಿದ್ದಾರೆ. ನಿಗದಿತ ಅವಧಿಯೊಳಗೆ ಎರಡನೇ ಲಸಿಕೆ ಪಡೆಯದೇ ಇದ್ದರೆ ಏನೂ ಅಪಾಯವಿಲ್ಲ. 2ನೇ ಡೋಸ್‌ನ ನಿಗದಿತ ಅವಧಿ ಮುಗಿದ ಒಂದು ತಿಂಗಳೊಳಗೆ ಪಡೆಯಬಹುದು ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಹೈಲೈಟ್ಸ್:
- ಅವಧಿ ಮುಗಿದ 1 ತಿಂಗಳ ಬಳಿಕವೂ ಲಸಿಕೆ ಪಡೆಯಬಹುದು
- ಎರಡನೇ ಡೋಸ್ ಸಮಯಕ್ಕೆ ಪಡೆದಿಲ್ಲ ಅನ್ನುವ ಭಯ ಬೇಡ
- ಪಡೆಯದಿದ್ದರೆ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ
ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಲಸಿಕೆ ಅಭಾವ ಸೃಷ್ಟಿಯಾಗಿದೆ. ಕೆಲವು ಕಡೆ ಕೋವಿಶೀಲ್ಡ್ ಸಿಕ್ಕರೆ ಇನ್ನು ಕೆಲವು ಕಡೆ ಕೊವ್ಯಾಕ್ಸಿನ್ ಲಸಿಕೆ ಲಭ್ಯವಿಲ್ಲ. ಈಗಾಗಲೇ ಮೊದಲ ಲಸಿಕೆ ಪಡೆದವರು ಎರಡನೇ ಲಸಿಕೆ ಸಿಗದೆ ಆತಂಕಿತರಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಎರಡನೇ ಲಸಿಕೆ ಹಾಕಿಸಿಕೊಳ್ಳದಿದ್ದರೆ ಮೊದಲ ಲಸಿಕೆ ವ್ಯರ್ಥವಾಗುತ್ತದೆ ಎನ್ನುವುದು ಬಹಳಷ್ಟು ಜನರ ಭಯ.
ಆದರೆ, ಎರಡನೇ ಲಸಿಕೆ ತಡವಾದರೂ ಆತಂಕ ಬೇಡ ಎಂದು ಆರೋಗ್ಯ ಪರಿಣಿತರು ಹೇಳಿದ್ದಾರೆ. ನಿಗದಿತ ಅವಧಿಯೊಳಗೆ ಎರಡನೇ ಲಸಿಕೆ ಪಡೆಯದೇ ಇದ್ದರೆ ಏನೂ ಅಪಾಯವಿಲ್ಲ. 2ನೇ ಡೋಸ್‌ನ ನಿಗದಿತ ಅವಧಿ ಮುಗಿದ ಒಂದು ತಿಂಗಳೊಳಗೆ ಪಡೆಯಬಹುದು ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಎರಡನೇ ಲಸಿಕೆ ಪಡೆಯಲು ನಿಗದಿಪಡಿಸಿದ ಅವಧಿಯಲ್ಲಿಯೇ ಪಡೆದರೆ ಹೆಚ್ಚು ಪರಿಣಾಮಕಾರಿ. ತಡವಾಗಿ ತೆಗೆದುಕೊಂಡರೆ ಲಸಿಕೆಯ ತೀವ್ರತೆ ತುಸು ಕಡಿಮೆಯಾಗಿರುತ್ತದೆ ಅಷ್ಟೆ. ಮೊದಲ ಲಸಿಕೆ ಪಡೆದು ಮೂರು ತಿಂಗಳವರೆಗೂ 2ನೇ ಲಸಿಕೆ ತೆಗೆದುಕೊಳ್ಳದಿದ್ದರೆ ಮಾತ್ರ ಮೊದಲ ಲಸಿಕೆ ತನ್ನ ಶಕ್ತಿ ಕಳೆದುಕೊಳ್ಳುತ್ತದೆ. ಆಗ ಲಸಿಕೆ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ.