Lockdown Guideline: ಬಹುತೇಕ ಹಿಂದಿನ ಕರ್ಫ್ಯೂ ನಿಯಮಗಳೇ ಜಾರಿ; ಹಾಗಾದರೆ ನಿರ್ಬಂಧ ಯಾವುದಕ್ಕೆ?

ಬೆಂಗಳೂರು: ಕೊರೋನಾ ಕರ್ಫ್ಯೂನಿಂದ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್​ ಮೊರೆ ಹೋಗಿದೆ. ಮೇ 10ರಿಂದ 2 ವಾರಗಳ ಕಾಲ ಕರ್ನಾಟದಲ್ಲಿ ಕಠಿಣ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಿಎಂ ಬಿ.ಎಸ್​. ಯಡಿಯೂರಪ್ಪ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿ ಸಿದ್ಧಪಡಿಸಿದೆ. ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಕಠಿಣ ಲಾಕ್​ಡೌನ್​ ರಾಜ್ಯಾದ್ಯಂತ ಜಾರಿಯಲ್ಲಿನ ಇರಲಿದೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಮಾತ್ರ ಹಾಲು, ದಿನಸಿ ಅಂಗಡಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದರು.

ಸಿಎಂ ಬಿಎಸ್​ವೈ ಅವರು ಲಾಕ್​ಡೌನ್​ ಘೋಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರು ಲಾಕ್​ಡೌನ್​ ಮಾರ್ಗಸೂಚಿಗಳನ್ನು ವಿವರಿಸಿದರು. ಬಹುತೇಕ ಹಿಂದಿನ ಜನತಾ ಕರ್ಫ್ಯೂನಲ್ಲಿ ಹೇರಲಾಗಿದ್ದ ನಿಯಮಗಳನ್ನು ಇಲ್ಲಿ ಜಾರಿ ಮಾಡಲಾಗಿದೆ. ಕೆಲವೊಂದು ನಿರ್ಬಂಧಗಳನ್ನು ಮಾಡಲಾಗಿದೆ. ಸಿಎಂ ಬಿಎಸ್​ವೈ ಲಾಕ್​ಡೌನ್​ ಎಂಬ ಪದ ಬಳಸಿದ್ದರೆ, ಮುಖ್ಯ ಕಾರ್ಯದರ್ಶಿಗಳು ಇದು ಲಾಕ್​ಡೌನ್​ ಅಲ್ಲ, ಕಠಿಣ ನಿಯಮಗಳು ಜಾರಿ ಎಂದು ಹೇಳಿದರು.

ಯಾವುದಕ್ಕೆ ಅವಕಾಶ

  • ಬೆಳಗ್ಗೆ 6ಗಂಟೆಯಿಂದ 10ರವರೆಗೆ ಮದ್ಯ ಪಾರ್ಸೆಲ್‌ಗೆ ಅವಕಾಶ
  • ಅಗತ್ಯ ವಸ್ತುಗಳ ಖರೀದಿಗೆ ನಡೆದುಕೊಂಡೇ ಹೋಗಬೇಕು. ಅಗತ್ಯ ವಸ್ತಗಳ ತರಲು ವಾಹನ ಬಳಸುವಂತಿಲ್ಲ
  • ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
  • ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ಹಾಲು ಮಾರಾಟಕ್ಕೆ ಅನುಮತಿ
  • ವೈದ್ಯಕೀಯ ತುರ್ತುಸೇವೆಗಳಿಗೆ ಅನುಮತಿ
  • ಹೋಟೆಲ್​ಗಳಿಂದ ಪಾರ್ಸೆಲ್​ಗೆ ಅನುಮತಿ. ಆದರೆ, ನಡೆದುಕೊಂಡೇ ಹೋಗಬೇಕು.
  • ಸರ್ಕಾರಿ ಕಚೇರಿಗಳು ಸೀಮಿತ ಮಂದಿಯಲ್ಲಿ ಕಾರ್ಯ ನಿರ್ವಹಿಸಲು ಅನುಮತಿ
  • ಆರೋಗ್ಯ ಸಂಬಂಧಿತ ಸಿಬ್ಬಂದಿ ಓಡಾಡಲು ಅವಕಾಶ
  • ಮಾಧ್ಯಮ ಸಿಬ್ಬಂದಿ ಓಡಾಡಲು ಅನುಮತಿ
  • ಮದುವೆಯಲ್ಲಿ 50 ಮಂದಿ ಮಾತ್ರ ಪಾಲ್ಗೊಳ್ಳಲು ಅವಕಾಶ
  • ತಳ್ಳುವ ಗಾಡಿಯಲ್ಲಿ ತರಕಾರಿ ಮಾರಾಟ ಮಾಡಲು ಅನುಮತಿ
  • ರೈಲು, ವಿಮಾನ ಎಂದಿನಂತೆ ಓಡಾಟ. ಆದರೆ, ಟಿಕೆಟ್ ಕಡ್ಡಾಯವಾಗಿ ತೋರಿಸಬೇಕು
  • ಈ ಕಾಮರ್ಸ್ ಚಟುವಟಿಕೆಗಳಿಗೆ ಅವಕಾಶ
  • ನಿಗದಿತ ಕಟ್ಟಡ ಆವರಣದೊಳಗೆ ಕಟ್ಟಡ ನಿರ್ಮಾಣಕ್ಕೆ ಅವಕಾಶ
  • ತುರ್ತು ಎಂದು ಧೃಡಪಡಿಸಿದರೆ ಮಾತ್ರ ಸಂಚಾರಕ್ಕೆ ಮಾತ್ರ

ಯಾವುದಕ್ಕೆ ನಿರ್ಬಂಧ

  • 10 ಗಂಟೆಯ ಮೇಲೆ ಯಾರೂ ರಸ್ತೆಯಲ್ಲಿ ಓಡಾಡುವಂತಿಲ್ಲ
  • ಕಾರ್ಮಿಕರು, ಕೆಲಸಗಾರರು ಬೆಂಗಳೂರು ಬಿಟ್ಟು ಹೋಗುವಂತಿಲ್ಲ
  • ವಾಹನ ಸಂಚಾರಕ್ಕೆ ಅವಕಾಶ ಇಲ್ಲ
  • ಯಾರಿಗೂ ಪಾಸ್ ನೀಡುವುದಿಲ್ಲ
  • ಗಾರ್ಮೆಂಟ್ಸ್ ಕ್ಲೋಸ್ ಆಗಲಿವೆ
  • ಅಂತರ್​ಜಿಲ್ಲಾ ಗಡಿಗಳು ಬಂದ್​
  • ಎಲ್ಲ ಕೈಗಾರಿಕಗಳಿಗೆ ನಿರ್ಬಂಧ

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *