ಕೊರೊನಾದಿಂದ ತ್ವರಿತ ಚೇತರಿಕೆಗೆ ರಾಗಿ ದೋಸೆ ತಿನ್ನಿ, ಬೆಲ್ಲ-ತುಪ್ಪ ಸೇವಿಸಿ: ಕೇಂದ್ರ ಆರೋಗ್ಯ ಸಚಿವಾಲಯ

ಹೈಲೈಟ್ಸ್‌:

  • ಉಪಾಹಾರಕ್ಕೆ ರಾಗಿ ದೋಸೆ ಅಥವಾ ಒಂದು ಕಪ್‌ ಗಂಜಿ ಸೇವಿಸುವುದು ಉತ್ತಮ. ಇವು ದೇಹಕ್ಕೆ ಅಗತ್ಯ ಪೌಷ್ಟಿಕಾಂಶ ನೀಡುತ್ತವೆ.
  • ಊಟವಾದ ಬಳಿಕ ಬೆಲ್ಲ-ತುಪ್ಪ ಸೇವಿಸಬೇಕು. ಈ ಪೌಷ್ಟಿಕಾಂಶಗಳನ್ನು ರೊಟ್ಟಿ ಜತೆಯೂ ಸೇವಿಸಬಹುದು
  • ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದೂ ಮಹತ್ವದ್ದಾಗಿದೆ

ಹೊಸದಿಲ್ಲಿ: ಕೊರನಾ ಸೋಂಕಿಗೆ ತುತ್ತಾಗಿ ಚೇತರಿಸಿಕೊಂಡವರು ಆಯಾಸದಿಂದ ಮುಕ್ತಿ ಪಡೆಯಲು ಅನುಸರಿಸಬೇಕಾದ ಆಹಾರ ಕ್ರಮದ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬೆಳಗಿನ ಉಪಹಾರಕ್ಕೆ ರಾಗಿ ದೋಸೆ ಸೇವಿಸುವಂತೆ ಸಲಹೆ ಮಾಡಿರುವುದು ವಿಶೇಷ. ಹಾಗೆಯೇ ಬೆಲ್ಲ-ತುಪ್ಪ ಸೇವಿಸುವಂತೆಯೂ ಸಲಹೆ ಮಾಡಲಾಗಿದೆ.

ಕೇಂದ್ರದ ಪಂಚ ಶಿಫಾರಸು:
1.ನಿತ್ಯ ರಾತ್ರಿ ಮಲಗುವ ಮುನ್ನ ಬಾದಾಮಿ ಹಾಗೂ ಒಣದ್ರಾಕ್ಷಿಯನ್ನು ನೆನೆಸಿಟ್ಟುಕೊಳ್ಳಬೇಕು. ಬೆಳಗ್ಗೆ ಎದ್ದ ತಕ್ಷಣ ಅವುಗಳ ಸೇವನೆಯೊಂದಿಗೆ ದಿನ ಆರಂಭಿಸಬೇಕು. ಬಾದಾಮಿಯು ಪ್ರೊಟೀನ್‌ಗಳಿಂದ ಸಮೃದ್ಧವಾಗಿದ್ದರೆ, ಒಣದ್ರಾಕ್ಷಿಯಲ್ಲಿ ಕಬ್ಬಿಣದ ಅಂಶ ಹೇರಳವಾಗಿರುತ್ತದೆ.

2.ಉಪಾಹಾರಕ್ಕೆ ರಾಗಿ ದೋಸೆ ಅಥವಾ ಒಂದು ಕಪ್‌ ಗಂಜಿ ಸೇವಿಸುವುದು ಉತ್ತಮ. ಇವು ದೇಹಕ್ಕೆ ಅಗತ್ಯ ಪೌಷ್ಟಿಕಾಂಶ ನೀಡುತ್ತವೆ.

3.ಊಟವಾದ ಬಳಿಕ ಬೆಲ್ಲ-ತುಪ್ಪ ಸೇವಿಸಬೇಕು. ಈ ಪೌಷ್ಟಿಕಾಂಶಗಳನ್ನು ರೊಟ್ಟಿ ಜತೆಯೂ ಸೇವಿಸಬಹುದು.

4.ರಾತ್ರಿ ಊಟಕ್ಕೆ ಖಿಚಡಿ ಬಳಸಬೇಕು. ಖಿಚಡಿಯಲ್ಲಿಎಲ್ಲ ಬಗೆಯ ಪೌಷ್ಟಿಕಾಂಶಗಳೂ ಇರುತ್ತವೆ. ಮಾತ್ರವಲ್ಲದೆ, ಖಿಚಡಿಯು ಕರುಳಿಗೆ ಹೆಚ್ಚಿನ ಒತ್ತಡ ನೀಡುವುದಿಲ್ಲ. ರಾತ್ರಿ ನಿದ್ದೆಯೂ ಚೆನ್ನಾಗಿ ಬರುತ್ತದೆ.

5.ದೇಹದಲ್ಲಿ ನೀರಿನ ಅಂಶ ಕಡಿಮೆಯಾಗದಂತೆ ನೋಡಿಕೊಳ್ಳುವುದೂ ಮಹತ್ವದ್ದಾಗಿದೆ. ಹೀಗಾಗಿ ಆಗಾಗ ನೀರು ಕುಡಿಯುತ್ತಿರಬೇಕು. ಇದರ ಜತೆಗೆ ಲಿಂಬು ಶರಬತ್ತು ಅಥವಾ ಮಜ್ಜಿಗೆ ಕುಡಿಯುವುದು ಒಳ್ಳೆಯದು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *