ಮೇ 10 ರಿಂದ ಧಾರಾವಾಹಿ, ರಿಯಾಲಿಟಿ ಶೋ ಚಿತ್ರೀರಕಣ ಸ್ಥಗಿತ
ರಾಜ್ಯದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕ ವಾಗುತ್ತಿರುವ ಹಿನ್ನೆಲೆಯಲ್ಲಿ ಮೇ.10ರಿಂದ 24 ವರೆಗೆ ಧಾರಾವಾಹಿ,ರಿಯಾಲಿಟಿ ಶೋಗಳ ಚಿತ್ರೀಕರಣವನ್ನು ನಿಲ್ಲಿಸಲು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಒಮ್ಮತ ನಿರ್ಧಾರ ಕೈಗೊಂಡಿದೆ.
ಸೋಂಕು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈಗೊಂಡಿರುವ ಕ್ರಮಗಳಿಗೆ ಕರ್ನಾಟಕ ಟೆಲವಿಷನ್ ಅಸೋಸಿಯೇಷನ್ ತನ್ನ ನೈತಿಕ ಜವಬ್ದಾರಿ ನಿರ್ವಹಿಸಿ ಸರ್ಕಾರದ ಪ್ರಯತ್ನಕ್ಕೆ ಕೈಜೋಡಿಸುವ ಸಲುವಾಗಿ ಇಂತಹದೊಂದು ತೀರ್ಮಾನ ಮಾಡಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ ಶಿವಕುಮಾರ್ ತಿಳಿಸಿದ್ದಾರೆ.
ಕೊರೊನಾ ಸೋಂಕಿನ ಅವಾಹುತದಿಂದ ಈಗಾಗಲೇ ಅನೇಕ ಕಲಾವಿದರು, ನಿರ್ಮಾಪಕರು ಸೇರಿದಂತೆ ಅನೇಕಕರನ್ನು ಕಳೆದುಕೊಂಡಿದ್ದೇವೆ.ಅದು ನಮ್ಮನ್ನು ಕಾಡುತ್ತಿದೆ. ಇಂತಹ ಅನಾಹುತಗಳು ಮುಂದೆ ನಡೆಯದಂತೆ ಎಚ್ಚರವಹಿಸುಲು ಧಾರಾವಾಹಿಗಳ ಚಿತ್ರೀಕರಣ ನಿಲ್ಲಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಮೂಲೆಯಲ್ಲಿ ರೆಸಾರ್ಟ್, ಪ್ರವಾಸಿ ತಾಣ,ಬೆಂಗಳೂರಿನ ಹೊರ ವಲಯದಲ್ಲಿ ಧಾರಾವಾಹಿ ಚಿತ್ರೀಕರಣ ಮಾಡಬಾರದು ಎಂದು ಒಮ್ಮದ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಯಾರಾದರೂ ಕದ್ದು ಮುಚ್ಚಿ ಚಿತ್ರೀಕರಣ ಮಾಡುವುದು ತಿಳಿದು ಬಂದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಅಡಿಯಲ್ಲಿ ಆ ಧಾರಾವಾಹಿಯ ಚಿತ್ರತಂಡ ಮತ್ತು ವಾಹಿನಿಗಳು ಸರ್ಕಾರದ ಕೋವಿಡ್ ನಿಯಮಾವಳಿಗಳ ಪ್ರಕಾರ ಕಠಿಣ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಚ್ಚರ ಎಂದಿದ್ದಾರೆ.
ಮೇ.24 ರಂದು ಅಂದಿನ ಸ್ಥಿತಿಗಳನ್ನು ಆಧರಿಸಿ ಚಿತ್ರೀಕರಣದ ಪುನರಾರಂಭದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.