ನಾಳೆಯಿಂದ ಬಳ್ಳಾರಿ ಜಿಲ್ಲೆಯಲ್ಲಿ ಮದುವೆಗಳಿಗೆ ನಿಷೇಧ ಕಠಿಣ ಲಾಕ್ ಡೌನ್: ಆನಂದ್ ಸಿಂಗ್
ಬಳ್ಳಾರಿ ಮೇ 11 : ನಾಳೆಯಿಂದ ಮೇ 24 ರ ವರೆಗೆ ಮದುವೆ, ಹುಟ್ಟು ಹಬ್ಬ, ಗೃಹ ಪ್ರವೇಶ ಸೇರಿದಂತೆ ಯಾವ ಕಾರ್ಯಕ್ರಮಕ್ಕೂ ಅವಕಾಶವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಅವರು ಇಂದು ಸಂಜೆ
ಕೊರೊನಾ ಹೆಚ್ಚಳ ಹಿನ್ನಲೆ ತುರ್ತು ಸುದ್ದಿಗೋಷ್ಟಿ ನಡೆಸಿ
ನಾಳೆಯಿಂದ ಜಿಲ್ಲೆಯಲ್ಲಿ ಫುಲ್ ಲಾಕ್ಡೌನ್ ಜಾರಿ ಮಾಡಲಾಗಿದೆ.
ಬೆಳಿಗ್ಗೆ ಆರರಿಂದ ಹತ್ತು ಗಂಟೆವರೆಗೆ ಮಾತ್ರ ದಿನಸಿ ಹಾಲು ಹಣತಣು, ತರಕಾರಿ ಖರೀದಿಗೆ ಅವಕಾಶ ನೀಡಿದೆ.
ನಂತರ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಕ್ಕೆ ಮಾತ್ರ ವಿನಾಯಿತಿ..
ಉಳಿದ ಯಾವುದೇ ಚಟುವಟಿಕೆಗೆ ಜನರು ಹೊರಗೆ ಬರಲು ಅವಕಾಶ ಇಲ್ಲ.
ಕೈಗಾರಿಕೆಗಳಲ್ಲೂ ಸಹ ಕಾರ್ಮಿಕರನ್ನು ಆವರಣದಲ್ಲಿಯೇ ಇಟ್ಟುಕೊಂಡು ನಡೆಸಬೇಕು. ಹೊರಗಡೆಯಿಂದ ಹೋಗುವುದು ಬರುವುದು ಇಲ್ಲ.
ರಾಜ್ಯದಲ್ಲಿ ಬಳ್ಳಾರಿ ಕೊರೊನಾ ಪಾಸಿಟಿವ್ ರೇಟ್ ನಲ್ಲಿ ಮೂರನೇ ಮತ್ತು
ಡೆತ್ ರೇಟ್ ನಲ್ಲಿ ಎರಡನೇ ಸ್ಥಾನದಲ್ಲಿ ಇದೆ.. ಹೀಗಾಗಿ ಕೆಲ ಕಠಿಣ ನಿರ್ಧಾರ ಅನಿವಾರ್ಯವಾಗಿದೆಂದರು.
ರಾಜ್ಯಕ್ಕೆ ಇರುವ ನಿಯಮಗಳೇ ಬೇರೆ ಜಿಲ್ಲೆಗೆ ವಿಧಿಸಿರುವ ನಿಯಮಗಳೇ ಬೇರೆ ಎಂದರು