ವಾಡಿ ಎಸಿಸಿ ಯೂನಿಯನ್ ನಾಯಕ ಶಿವಾಜಿ ಕೋಮ್ಟೆ ನಿಧನಕ್ಕೆ: ಅಷ್ಠಗಿ ಕಂಬನಿ

ಕಲಬುರಗಿ:ಮೇ.11: ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ACC ಯೂನಿಯನ್ ನಾಯಕರು ಹಾಗೂ ಹಿರಿಯ ದಲಿತ ಮುಖಂಡರಾದ ಶ್ರೀ ಶಿವಾಜಿ ಕೋಮ್ಟೆ ಯವರು (ಮೋಹನಲಾಲ ಕೋಮ್ಟೆ ಯವರ ಸಹೋದರ) ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖವನ್ನುಂಟು ಮಾಡಿದೆ ಎಂದು ಬಿಜೆಪಿ ಎಸ್ ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ಅಂಬಾರಾಯ ಅಷ್ಠಗಿ ಕಂಬನಿ ಮಿಡಿದಿದ್ದಾರೆ.
ಆತ್ಮೀಯ ಸಹೋದರನಂತಿದ್ದ ಶಿವಾಜಿ ಕೋಮ್ಟೆ ಅಣ್ಣ ನವರ ಅಕಾಲಿಕ ಅಗಲಿಕೆಯಿಂದ ಚಿತ್ತಾಪುರ ತಾಲೂಕಿನಲ್ಲಿ ಮತ್ತು ಜಿಲ್ಲೆಯಾದ್ಯಂತ ಕಾರ್ಮಿಕ ಹಾಗೂ ದಲಿತ ವರ್ಗಗಳಲ್ಲಿ ಶೂನ್ಯ ಆವರಿಸಿದಂತಾಗಿದೆ. ಶ್ರೀಯತರು ದಲಿತ ಮತ್ತು ಬಡವರ ಪರವಾಗಿ ಮತ್ತು ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುತ್ತಿದ್ದರು.
ನನಗೆ ಆತ್ಮೀಯರಾದ ಶ್ರೀಯುತರು ಹೋರಾಟ ಮನೋಭಾವದ ಚಿಂತನಶೀಲ ವ್ಯಕ್ತಿತ್ವ ಉಳ್ಳವರಾಗಿದ್ದರು.ಅವರನ್ನು ಕಳೆದುಕೊಂಡಿರುವುದು ಕಲಬುರಗಿ ಜಿಲ್ಲೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಮತ್ತು ಅಭಿಮಾನಿ ಬಳಗಕ್ಕೆ ಭಗವಂತ ನೀಡಲಿ ಎಂದು ಅಂಬಾರಾಯ ಅಷ್ಠಗಿ ಪ್ರಾರ್ಥಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *