ಕೊರೊನಾ ಲಸಿಕೆ ಪಡೆದ ನಟ ಶ್ರೀಮುರಳಿ, ನಟಿ ಆಶಿಕಾ ರಂಗನಾಥ್

ಹೈಲೈಟ್ಸ್‌:

  • ಕೊರೊನಾ ಲಸಿಕೆ ಪಡೆದ ರೋರಿಂಗ್ ಸ್ಟಾರ್ ಶ್ರೀಮುರಳಿ
  • ಲಸಿಕೆ ಹಾಕಿಸಿಕೊಂಡ ನಟಿ ಆಶಿಕಾ ರಂಗನಾಥ್, ನಿರ್ದೇಶಕ ಮಹೇಶ್ ಕುಮಾರ್
  • ”ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ” ಎಂದ ‘ಮದಗಜ’ ಚಿತ್ರತಂಡ

ಭಾರತದಲ್ಲಿ ಮಹಾಮಾರಿ ಕೊರೊನಾ ವೈರಸ್ ಸೋಂಕಿನ ಎರಡನೇ ಅಲೆಯ ಅಬ್ಬರ ತಾರಕಕ್ಕೇರಿದೆ. ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸಲು ಲಸಿಕೆ ರಾಮಬಾಣ. ಈಗಾಗಲೇ 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಸೋಮವಾರದಿಂದ (ಮೇ 10) 18 ರಿಂದ 44 ವರ್ಷ ವಯೋಮಾನದವರಿಗೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆ, ನಿಮ್ಹಾನ್ಸ್ ಆಸ್ಪತ್ರೆ ಸೇರಿದಂತೆ ಕೆಲವು ಆಯ್ದ ಸ್ಥಳಗಳಲ್ಲಿ ಹಾಗೂ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಸಿಕೆ ನೀಡುವ ಕಾರ್ಯ ಚಾಲ್ತಿಯಲ್ಲಿದೆ.

18 ರಿಂದ 44 ವರ್ಷ ವಯೋಮಾನದವರಿಗೆ ಲಸಿಕೆ ನೀಡಲು ಶುರುವಾಗುತ್ತಿದ್ದಂತೆಯೇ, ಲಸಿಕೆ ಹಾಕಿಸಿಕೊಳ್ಳಲು ಚಿತ್ರರಂಗದ ಮಂದಿ ಮುಂದಾಗಿದ್ದಾರೆ. ರೋರಿಂಗ್ ಸ್ಟಾರ್ ಶ್ರೀಮುರಳಿ, ನಟಿ ಆಶಿಕಾ ರಂಗನಾಥ್, ನಿರ್ದೇಶಕ ಮಹೇಶ್ ಕುಮಾರ್ ಸೇರಿದಂತೆ ‘ಮದಗಜ‘ ಚಿತ್ರತಂಡ ಕೊರೊನಾ ಲಸಿಕೆ ಪಡೆದಿದ್ದಾರೆ.

ತಾವು ಲಸಿಕೆ ಪಡೆದ ಫೋಟೋವನ್ನು ನಟ ಶ್ರೀಮುರಳಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ”ನನ್ನ ಮೊದಲ ವ್ಯಾಕ್ಸಿನೇಶನ್ ಆಯ್ತು. ಇನ್ನು ಹಾಕಿಸಿಕೊಳ್ಳದವರು ತಡ ಮಾಡ್ಬೇಡಿ. ನಿಮ್ಮ ವ್ಯಾಕ್ಸಿನೇಶನ್ ಹಾಕಿಸಿಕೊಳ್ಳಿ” ಎಂದು ಫೇಸ್‌ಬುಕ್‌ನಲ್ಲಿ ಶ್ರೀಮುರಳಿ ಬರೆದುಕೊಂಡಿದ್ದಾರೆ.

ಇನ್ನೂ ನಟಿ ಆಶಿಕಾ ರಂಗನಾಥ್ ಕೂಡ ತಾವು ಲಸಿಕೆ ಹಾಕಿಸಿಕೊಂಡ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದು, ”ಎಲ್ಲರೂ ಲಸಿಕೆ ಹಾಕಿಸಿಕೊಳ್ಳೋಣ” ಎಂದಿದ್ದಾರೆ.

ಅಂದ್ಹಾಗೆ, ಶ್ರೀಮುರಳಿ, ಆಶಿಕಾ ರಂಗನಾಥ್ ಅಭಿನಯದ ಮಹೇಶ್ ಕುಮಾರ್ ನಿರ್ದೇಶನದ ‘ಮದಗಜ’ ಸಿನಿಮಾ ಶೂಟಿಂಗ್ ಹಂತದಲ್ಲಿದೆ. ಕರ್ನಾಟಕ, ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆ ಈಗಾಗಲೇ ‘ಮದಗಜ’ ಶೂಟಿಂಗ್ ನಡೆದಿದೆ. ಕೋವಿಡ್ ಕಾರಣದಿಂದ ಸದ್ಯ ‘ಮದಗಜ’ ಶೂಟಿಂಗ್‌ಗೆ ಬ್ರೇಕ್ ಬಿದ್ದಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *