ಕ್ರಿಮಿನಲ್‌ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿದ ಸುಪ್ರೀಂ ಕೋರ್ಟ್‌

ಹೈಲೈಟ್ಸ್‌:

  • ಅಪರಾಧ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿದ ಸುಪ್ರೀಂ
  • ಆರು ತಿಂಗಳಲ್ಲಿ ಜಾರಿಗೆ ಕ್ರಮ ಕೈಗೊಳ್ಳಲು ಎಲ್ಲ ಹೈಕೋರ್ಟ್‌ಗಳಿಗೆ ಆದೇಶ
  • ಆದಷ್ಟು ಶೀಘ್ರ ಕಟ್ಟುನಿಟ್ಟಿನ ಜಾರಿಗೆ ಕ್ರಮ ವಹಿಸಬೇಕೆಂದು ‘ಸುಪ್ರೀಂ’ ಕೋರ್ಟ್‌ ನಿರ್ದೇಶನ

ಬೆಂಗಳೂರು: ಕ್ರಿಮಿನಲ್‌ ಅಪರಾಧ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಸುಪ್ರೀಂ ಕೋರ್ಟ್‌ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಅವುಗಳನ್ನು 6 ತಿಂಗಳಲ್ಲಿ ಜಾರಿಗೊಳಿಸುವಂತೆ ಎಲ್ಲ ಹೈಕೋರ್ಟ್‌ಳಿಗೆ ಆದೇಶಿಸಿದೆ. ಸದ್ಯದ ಅಪರಾಧ ಪ್ರಕರಣಗಳ ನ್ಯಾಯದಾನ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸುವ ಹೊಸ ಮಾರ್ಗಸೂಚಿ ಜಾರಿಗೆ ಎಲ್ಲ ಹೈಕೋರ್ಟ್‌ಗಳು, ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಹಾಯ ಪಡೆದುಕೊಳ್ಳಬೇಕು. ಸರಕಾರಗಳ ಸಮನ್ವಯದಿಂದ ಪೊಲೀಸ್‌ ಕಾಯಿದೆಗೆ ಅಗತ್ಯ ತಿದ್ದುಪಡಿ ತಂದು ಮಾರ್ಗಸೂಚಿಯಲ್ಲಿನ ಅಂಶಗಳನ್ನು ಆದಷ್ಟು ಶೀಘ್ರ ಕಟ್ಟುನಿಟ್ಟಿನ ಜಾರಿಗೆ ಕ್ರಮ ವಹಿಸಬೇಕೆಂದು ‘ಸುಪ್ರೀಂ’ ನಿರ್ದೇಶನ ನೀಡಿದೆ.

ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಗಳಲ್ಲಿ ಲೋಪ ಸರಿಪಡಿಸುವ ಉದ್ದೇಶದಿಂದ ಸುಪ್ರೀಂಕೋರ್ಟ್‌ ಸ್ವಯಂ ದಾಖಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಿಂದಿನ ಸಿಜೆಐ ಎಸ್‌.ಎ ಬೊಬ್ಡೆ, ಎಲ್‌.ನಾಗೇಶ್ವರ ರಾವ್‌ ಮತ್ತು ಎಸ್‌. ರವೀಂದ್ರ ಭಟ್‌ ಅವರಿದ್ದ ತ್ರಿಸದಸ್ಯಪೀಠ, ಈ ಮಹತ್ವದ ಆದೇಶ ಮಾಡಿದೆ. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕಾರ ನೀಡಲು ಸುಪ್ರೀಂಕೋರ್ಟ್‌ನ ಹೆಸರಾಂತ ವಕೀಲರಾದ ಆರ್‌. ಬಸಂತ್‌, ಸಿಧಾಯ್‌ ಲೂತ್ರಾ ಮತ್ತು ಕೆ.ಪರಮೇಶ್ವರ್‌ ಅವರನ್ನು ಅಮಿಕಸ್‌ ಕ್ಯೂರಿಗಳನ್ನಾಗಿ ನೇಮಕ ಮಾಡಿತ್ತು.

ಕೋರ್ಟ್‌ ನಿರ್ದೇಶನದ ಮೇರೆಗೆ ಅವರು ಸಾಕಷ್ಟು ಅಧ್ಯಯನ ನಡೆಸಿ ತಮ್ಮ ಅನುಭವದ ಆಧಾರದಲ್ಲಿ ಮಾರ್ಗಸೂಚಿ ಸಿದ್ಧಪಡಿಸಿದ್ದರು. ಆ ಬಗ್ಗೆ ಹೈಕೋರ್ಟ್‌ಗಳ ಅಭಿಪ್ರಾಯಗಳನ್ನೂ ಪಡೆದ ನಂತರ ಸುಪ್ರೀಂಕೋರ್ಟ್‌ ಮಾರ್ಗಸೂಚಿ ಅಂತಿಮಗೊಳಿಸಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *