ವಾಹನ ಬಳಸಲು ಅನುಮತಿ ನೀಡಿದ ಸರಕಾರ
ರಾಜ್ಯದಲ್ಲಿ ಅಗತ್ಯ ವಸ್ತು ಖರೀದಿಗೆ ವಾಹನಗಳನ್ನು ಬಳಸಲು ಸರಕಾರ ಅನುಮತಿ ನೀಡಿದೆ.
ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್ ಟ್ವೀಟ್ ಮಾಡಿದ್ದಾರೆ. ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ವಾಹನಗಳನ್ನು ಕೊಂಡೊಯ್ಯಬಹುದು. ಆದರೆ ಅದೇ ಏರಿಯಾದಲ್ಲಿ ಬಳಸಬೇಕು. ತಮ್ಮ ಏರಿಯಾದಿಂದ ಹೊರಗೆ ಹೋಗುವಂತಿಲ್ಲ ಎಂದು ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಹತ್ತಿರದ ಅಂಗಡಿಗೆ ತೆರಳಲು ವಾಹನ ಬಳಸಬಹುದು. ಆದರೆ ಸೋಮವಾರ ಈ ರೀತಿ ಬಳಕೆಯಾದ ವಾಹನಗಳ ಮೇಲೆ ಹಾಕಲಾಗಿರುವ ಪ್ರಕರಣಗಳ ಕುರಿತು ಇನ್ನಷ್ಟೆ ಸ್ಪಷ್ಟನೆ ಬರಬೇಕಿದೆ.