ಕರೋನ ಸಂಕಷ್ಟದಲ್ಲಿ ನಮಗಾಗಿ ಹಗಲಿರುಳು ಶ್ರಮಿಸುತ್ತಿರುವ ದಾದಿಯರು / Article By Kashibai Guttedar
ಮೇ 12 ಖ್ಯಾತ ದಾದಿ ಪ್ಯಾರೆನ್ಸ್ ನೈನ್ಟಿಗೆಲ್ ಅವರು ಹುಟ್ಟಿದ ದಿನವಾಗಿದ್ದು ಅವರು ಮನುಕುಲಕ್ಕೆ ನೀಡಿದ ಅಮೋಘ ಸೇವೆಯನ್ನು ಸ್ಮರಿಸುವ ಸಲುವಾಗಿ ವಿಶ್ವ ದಾದಿಯಾರ ದಿನವನ್ನು ಆಚರಿಸಲಾಗುತ್ತದೆ. ಕಳೆದ ಒಂದೂವರೆ ವರ್ಷದಿಂದ ಇಡೀ ವಿಶ್ವಕ್ಕೆ ಸಾವಲಾಗಿರುವ ಇಲ್ಲಿಯವರೆಗು ಕೊರೋನ ವಿರುದ್ಧದ ನರ್ಸಗಳ ಹೋರಾಟ ಅಸಾಮಾನ್ಯ.
ಇಂದು ವಿಶ್ವ ದಾದಿಯಾರ ನೆನಪಲ್ಲಿ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ಸುಯೋಗ ನಮಗೆ ದೊರೆತಿದೆ.
ಮನುಕುಲದ ಮತ್ತು ಕೊರೋನ ನಡುವಿನ ಹೋರಾಟದಲ್ಲಿ ಸೈನಿಕರಂತೆ ತಮ್ಮ ಕಾರ್ಯ ನಿರ್ವಹಿಸುತ್ತಿರುವುದು ನಮ್ಮ ನರ್ಸಗಳಿಗೆ ಹೃದಯಪೂರ್ವಕ ಅಭಿನಂದನೆಗಳು.
ನಿಮ್ಮ ಶ್ರಮದಾನವನ್ನು ನಾನು ಕವಿತೆಯ ಮೂಲಕ ವರ್ಣಿಸಲು ಇಚ್ಛೆಸುತ್ತೇನೆ.
ಅಕ್ಕನ ಪ್ರೀತಿ
ತಂಗಿಯ ಅಕ್ಕರೆ
ಅವ್ವನ ಹೃದಯವಂತಿಕೆ
ನೀ ಎಲ್ಲಿಯವಳು
ನಿನ್ನ ಸೇವೆ ಇಲ್ಲಿಯದ್ದು.
ಮಗುವಿನೊಂದಿಗೆ ಮಗುವಾದ
ಅಜ್ಜಿಯೊಂದಿಗೆ ಊರುಗೋಲಾದ
ಅಜ್ಜನೊಂದಿಗೆ ಊರುಗೊಲಾದ
ಅಜ್ಜನಿಗೆ ಆಸರೆಯಾದ
ನಿನ್ನ ಸ್ವಾರ್ಥವ ಮರೆತು
ಬಯಕೆಯ ಬದಿಗೊತ್ತಿ
ಮಾನವೀಯತೆಯಾ ಸಾರಿದ.
ಸರಳ ತನದಿ
ಸೈತವರ್ಣದ ಸಹೋದರಿಯಾರೇ
ರೋಗಿಗಳ ಪಾಲಿನ ಮಮತೆ ಮಣಿಯರು
ಮನೆಮನೆಯ ಕಷ್ಟಕ್ಕೆ
ನೀವು ಮುಂದಾದ ಮಿಡುತೆಯರೇ.
ವಿಶ್ವದ ಸರ್ವಶ್ರೇಷ್ಠ ಸಹೋದರಿಯಾರೇ
ಆಸ್ಪತ್ರೆಯಲ್ಲಿ ಮಿನುಗುವ ಮಿಡಿಯುವ
ಮನೋಹರಿಯಾರೇ
ಲೋಕದ ಹಿತಕಾಯುವ
ನಿನ್ನ ಅಕ್ಕರೆಯಾ ಸುದಿನದಿ.
ಶುಭಾಶಯಗಳು ನಿಮಗೆ
ಹೆಚ್ಚಾಗಲಿ ನಿಮ್ಮ ಸೇವೆ
ಮೆಚ್ಚುವ ಕೈಗಳು
ಪೋಶಿಶುವ ಮನಗಳು
ನಿಮ್ಮನ್ನ ಬೆಳೆಸಲು.
ಲೋಕವ ಉಳಿಸುವ
ಬಂದ ಕಣ್ಮಣಿಗಳೇ
ಪ್ರಾಣ ಬಿಟ್ಟೆವು
ಕರ್ತವ್ಯ ಬಿಡೆವು
ಎಂದುಲೋಕಕ್ಕೆ ಸಾರಿದ ನಾರಿಯರೇ.
ತಮ್ಮ ಪ್ರಾಣವ ಒತ್ತೆ ಇಟ್ಟು ಪರರನ್ನು
ಕಾಪಾಡುವ ಸಹೋದರಿಯಾರಿಗೆ ಈ
ಕವನದ ಸಾಲುಗಳೇ ಅರ್ಪಣೆ
ವಿಶ್ವ ದಾದಿಯಾರ ದಿನದ ಶುಭಾಶಯಗಳು.
ಕಾಶಿಬಾಯಿ. ಸಿ. ಗುತ್ತೇದಾರ ಪಾಳಾ