ರಜಾಕಾರರಿಂದ ನಮಗೆ ಸಂವಿಧಾನ ಪಾಠದ ಅಗತ್ಯವಿಲ್ಲ! ಓವೈಸಿಗೆ ತೇಜಸ್ವಿ ಸೂರ್ಯ ತಿರುಗೇಟು

ಹೈದರಾಬಾದ್‌ನ ನಿಜಾಮ ಆಡಳಿತದ ಅವಧಿಯಲ್ಲಿದ್ದ ರಜಾಕಾಕರಿಂದ ನಮಗೆ ಸಂವಿಧಾನದ ಪಾಠದ ಅಗತ್ಯವಿಲ್ಲ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೈದರಾಬಾದ್‌ ಸಂಸದ

ಹೊಸ ದಿಲ್ಲಿ: ರಜಾಕಾಕರಿಂದ ನಮಗೆ ಸಂವಿಧಾನದ ಪಾಠದ ಅಗತ್ಯವಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಅಖಿಲ ಭಾರತ ಮಜ್ಲಿಸ್-ಇ-ಇಥೆಹಾದುಲ್ ಮುಸ್ಮಿಮಿನ್ (ಎಐಎಂಐಎಂ) ಪಕ್ಷದ ಮುಖ್ಯಸ್ಥ, ಹೈದರಾಬಾದ್‌ ಸಂಸದ ಅಸಾದುದ್ದೀನ್ ಓವೈಸಿಗೆ ತಿರುಗೇಟು ನೀಡಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಜರಾಗುವುದು ಸಾಂವಿಧಾನಿಕ ಪ್ರಮಾಣವನ್ನು ಉಲ್ಲಂಘಿಸಿದಂತೆ ಎಂದು ಓವೈಸಿ ಟ್ವೀಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ, ಭಾರತದ ರಾಷ್ಟ್ರಪತಿಗಳು ಮತ್ತು ಮುಖ್ಯಮಂತ್ರಿಗಳ ಅಧಿಕೃತ ನಿವಾಸಗಳಲ್ಲಿ ಇಫ್ತಾರ್ ಪಾರ್ಟಿಗಳನ್ನು ಸಂಘಟಿಸುತ್ತಿದ್ದಾಗ ನಿಮ್ಮ ‘ಜಾತ್ಯತೀತತೆ’ ಎಲ್ಲಿತ್ತು? ಎಂದು ಪ್ರಶ್ನಿಸಿದ್ದಾರೆ.

 

ಅಲ್ಲದೆ ಅಯೋಧ್ಯೆಯಲ್ಲಿ ದೇವಸ್ಥಾನವನ್ನು ನೆಲಸಮ ಮಾಡಿ ಮಸೀದಿ ಕಟ್ಟಲಾಗಿತ್ತು. ಇದೀಗ ಆ ತಪ್ಪನ್ನು ಸರಿಪಡಿಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡ ಅವರು ಓವೈಸಿಯನ್ನು ಹೈದರಾಬಾದ್ ನಿಜಾಮ ಆಡಳಿತದ ಕಾಲದ ರಜಾಕಾರರಿಗೆ ಹೋಲಿಕೆ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಆಗಸ್ಟ್‌ 5 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಪ್ರಧಾನಿ ಕಚೇರಿ ಅಧಿಕೃತಗೊಳಿಸಿಲ್ಲ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *