ಬಸವೇಶ್ವರ ಜಯಂತಿ ನಿಮಿತ್ಯ ನಡೆಯಬೇಕಿದ್ದ ಬಳೂರ್ಗಿ ಜಾತ್ರೆ ರದ್ದು
ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಬಸವೇಶ್ವರ ಜಯಂತಿ ನಿಮಿತ್ಯವಾಗಿ ಜಾತ್ರೆ ನಡೆಯುತ್ತಿತ್ತು.ಆದರೆ ಕೊರೊನಾ ಮಾಹಾಮಾರಿ ರೊಗದ ಹೆಚ್ಚಳದಿಂದ, ಲಾಕ್ ಡೌನ್ ಕಾರಣ ಜಾತ್ರೆಯನ್ನು ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.ಮಾನ್ಯ ತಾಲ್ಲೂಕು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಜಂಟಿ ಸಮುಖದಲ್ಲಿ ಈ ಆದೇಶ ಬಸವೇಶ್ವರ ಜಾತ್ರಾ ಕಮಿಟಿಗೆ ಹೊರಡಿಸಲಾಯಿತು. ಗ್ರಾಮದ ಮುಖಂಡರಾದ ಅರ್ಜುನ ಸೋಮಜಾಳ. ಅರವಿಂದ್ ದೊಡ್ಡಮನಿ ಗೌರಿಶಂಕರ ಸೊನ್, ಸಿದ್ರಾಮಪ್ಪ ಮಾಯಿ,ಕಬೀರದಾಸ ರಾಠೊಡ್,ದತ್ತು ಪೂಜಾರಿ ಉಪಸ್ಥಿತರಿದ್ದರು.