Corona Lockdown: ಕೋವಿಡ್ಗೆ ಕಡಿವಾಣ ಹಾಕೋಕೆ ಯಾದಗಿರಿ ಜಿಲ್ಲೆ 3 ದಿನಗಳ ಸ್ವಯಂ ಲಾಕ್ಡೌನ್ ಘೋಷಣೆ, ತರಕಾರಿ-ದಿನಸಿ ವ್ಯಾಪಾರವೂ ಬಂದ್ !
ಯಾದಗಿರಿ: ಲಾಕ್ ಡೌನ್ ಜಾರಿ ಮಾಡಿದರು ಜಿಲ್ಲೆಯಲ್ಲಿ ಕೋವಿಡ್ ಇನ್ನು ನಿಯಂತ್ರಣಕ್ಕೆ ಬರುತ್ತಿಲ್ಲ. ದಿನ ನಿತ್ಯ ಪ್ರಕರಣಗಳು ಹೆಚ್ಚಾಗುವ ಜೊತೆ ಕೋವಿಡ್ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾರಣ, ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್ ಕಡಿವಾಣ ಹಾಕಲು ಜಿಲ್ಲಾಧಿಕಾರಿ ಡಾ ರಾಗಾಪ್ರೀಯಾ ಅವರು ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಹಾಗೂ ಜಿಲ್ಲಾಉಸ್ತುವಾರಿ ಸಚಿವ ಆರ್ ಶಂಕರ್ ಅವರ ಸೂಚನೆಯಂತೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಈಗ ಮೂರು ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ. ರಾಜ್ಯ ಸರ್ಕಾರ ಕೋವಿಡ್ ಚೈನ್ ಕತ್ತರಿಸಲು ಈಗಾಗಲೇ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಿದರು ಅಗತ್ಯ ವಸ್ತುಗಳ ಖರೀದಿ ಮಾಡಲು ಮಾತ್ರ ಜನ ಮುಗಿ ಬಿಳುವ ಜೊತೆ ಅಗತ್ಯ ವಸ್ತುಗಳ ನೆಪದಲ್ಲಿ ಸಾರ್ವಜನಿಕರ ಸಂಚಾರ ಹೆಚ್ಚಾಗಿದೆ. ಅದೆ ರೀತಿ ಜನರು ಕೂಡ ಕೋವಿಡ್ ನಿಯಮ ಪಾಲನೆ ಮಾಡದೆ ಉಲ್ಲಂಘನೆ ಮಾಡುತ್ತಿರುವ ಹಿನ್ನೆಲೆ ಹಾಗೂ ಬೃಹತ್ ನಗರಗಳಿಂದ ಜಿಲ್ಲೆಗೆ ವಲಸೆ ಕಾರ್ಮಿಕರು ಆಗಮಿಸಿದ್ದು ಇದರಿಂದ ಕೂಡ ಕೊರೊನಾ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ .
ಇದರಿಂದ ಸಚಿವ ಆರ್ ಶಂಕರ್ ಅವರು ಕೂಡ ಯಾದಗಿರಿ ಜಿಲ್ಲೆಯಲ್ಲಿ ದಿನ ನಿತ್ಯವೂ ಕೊರೊನಾ ಪ್ರಕರಣಗಳ ಹೆಚ್ಚಳ ಹಾಗೂ ಕೋವಿಡ್ ಸಾವು ಪ್ರಕರಣಗಳ ಹೆಚ್ಚಳದಿಂದ ತೀವ್ರ ಕಳವಳ ವ್ಯಕ್ತಪಡಿಸಿದ್ದು ಕೊರೊನಾ ಕಡಿವಾಣ ಆಗಲೇಬೇಕೆಂದು ಜಿಲ್ಲಾಧಿಕಾರಿಗೆ ಕಟ್ಟುನಿಟ್ಟಿನ ಲಾಕ್ ಡೌನ್ ಗೆ ಸೂಚನೆ ನೀಡಿದರು. ಈ ಹಿನ್ನೆಲೆ ಖುದ್ದು ಜಿಲ್ಲಾಧಿಕಾರಿ ಅವರು ಮೂರು ದಿನಗಳ ಕಂಪ್ಲಿಟ್ ಲಾಕ್ ಡೌನ್ ಮಾಡಿ ಆದೇಶ ಹೊರಡಿಸಿದ್ದಾರೆ.
ಇದೆ 19 ರ ಬುಧವಾರ ಬೆಳಿಗ್ಗೆ 6 ಗಂಟೆಯಿಂದ 21 ಶುಕ್ರವಾರ ಬೆಳಿಗ್ಗೆ 6 ಗಂಟೆವರಗೆ ಮೂರು ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಿದ್ದಾರೆ . ಅಗತ್ಯ ವಸ್ತುಗಳಾದ ಹಾಲು, ಆಸ್ಪತ್ರೆಗಳು, ಔಷಧಿ ಅಂಗಡಿ ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್, ಅಗ್ನಿ ಶಾಮಕ, ಪೆಟ್ರೋಲ್ ಪಂಪ್, ಇತರೆ ತುರ್ತು ವೈದ್ಯಕೀಯ ಸೇವೆ ಹೊರತು ಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧ ಮಾಡಿದ್ದಾರೆ.
ಮೂರು ದಿನಗಳ ಕಾಲ ದಿನಸಿ ಅಂಗಡಿ, ತರಕಾರಿ, ಹಣ್ಣು ಅಂಗಡಿಗಳು ಕೂಡ ಬಂದ್ ಮಾಡಲಾಗುತ್ತದೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್ ಶಂಕರ್ ಮಾತನಾಡಿ, ಲಾಕ್ ಡೌನ್ ಮಾಡಿದರು ಕೇಸ್ ಕಡಿಮೆ ಆಗುತ್ತಿಲ್ಲ, ಡೇತ್ ರೇಟ್ ಕಡಿಮೆಯಾಗಿಲ್ಲ. ಹೀಗಾಗಿ ಮೂರು ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್ ಡೌನ್ ಮಾಡಲು ಜಿಲ್ಲಾಧಿಕಾರಿಗೆ ಸೂಚಿಸಿದ್ದು, ಜನರು ಕೋವಿಡ್ ನಿಯಮ ಪಾಲಿಸಬೇಕಾಗಿದೆ. ಹಳ್ಳಿಯ ಜನರು ಎಚ್ಚರವಾಗಿರಬೇಕು. ಮಾಸ್ಕ್ ಹಾಕುವ ಜೊತೆ ಸಮಾಜಿಕ ಅಂತರ ಕಾಪಾಡಬೇಕೆಂದರು.
ಜನರು ಎನು ಮಾಡಬೇಕು ?
ಜಿಲ್ಲಾಧಿಕಾರಿ ಅವರು ಮೂರು ದಿನಗಳ ಕಾಲ ಕಂಪ್ಲಿಟ್ ಲಾಕ್ ಡೌನ್ ಮಾಡಿದ್ದು, ಅಗತ್ಯ ವಸ್ತುಗಳ ಖರೀದಿ ಮಾಡಲು ಮಂಗಳವಾರದವರಗೆ ಅವಕಾಶವಿದೆ. ಮುಂದಿನ ಮೂರು ದಿನಗಳ ಮಟ್ಟಿಗೆ ಅಗತ್ಯ ವಸ್ತುಗಳು, ತರಕಾರಿ ಖರೀದಿ ಮಾಡಿ ಮನೆಯಲ್ಲಿ ಇಟ್ಟುಕೊಳ್ಳಬಹುದಾಗಿದೆ. ಮತ್ತೆ ಮುಂದೆ ಏನು ಸಿಗಲ್ಲವೆಂದು ಅಗತ್ಯಕ್ಕಿಂತ ಮೀರಿ ಮನೆಯಲ್ಲಿ ಇಟ್ಟು ಕೊಳ್ಳದಿದ್ದರೆ ಒಳಿತು.
ನಾವು ಮಾಡಿದ ತಪ್ಪಿಗೆ ಈಗ ನಾವೇ ಲಾಕ್…!
ಕೋವಿಡ್ ಮುಂಜಾಗ್ರತೆ ವಹಿಸಬೇಕು, ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು, ಜಾತ್ರೆ ಉತ್ಸವ ಮಾಡಬಾರದೆಂದು ಸರಕಾರ ಅನೇಕ ಬಾರಿ ಜಾಗೃತಿ ಮೂಡಿಸಿದರು ಜನರು ಮಾತ್ರ ಕೋವಿಡ್ ನಿಯಮ ಪಾಲನೆ ಮಾಡದೇ ಸಂಪೂರ್ಣ ನಿರ್ಲಕ್ಷ್ಯ ಮಾಡಿದ್ದ ಪರಿಣಾಮ ಈಗ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ. ಜನರು ಮಾಡಿದ ತಪ್ಪಿಗೆ ಈಗ ನಾವೇ ಮನೆಯಲ್ಲಿ ಲಾಕ್ ಆಗಿ ಇರುವಂತಾಗಿದೆ. ಪ್ರತಿಯೊಬ್ಬರು ನಾವು ನಿರ್ಲಕ್ಷ್ಯ ಮಾಡದೇ ಕೋವಿಡ್ ನಿಯಮ ಪಾಲಿಸಿ ಕೊರೊನಾ ಓಡಿಸಬೇಕಾಗಿದೆ.