*ಕಲಬುರಗಿ ಇಎಸ್ಐ ಅಸ್ಪತ್ರೆ ಮೇಲ್ದರ್ಜೆಗೆ: ಬೋಯಿಂಗ್ ಇಂಡಿಯಾ ಸಂಸ್ಥೆಯಿಂದ 250 ಆಮ್ಲಜನಕಯುಕ್ತ ಹಾಸಿಗೆ ನೆರವು*

 

* ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಪ್ರಕಟ

* ಕಲಬುರಗಿಯಲ್ಲಿ ಆಮ್ಲಜನಕ ಕೊರತೆ ಇಲ್ಲ

* ಅಂಕಿ ಅಂಶ ಮುಚ್ಚಿಟ್ಟರೆ ಕಠಿಣ ಕ್ರಮ

* ಜಿಲ್ಲೆಯಲ್ಲಿ ಕೊರೊನಾ ಪರಿಸ್ಥಿತಿ ನಿಯಂತ್ರಣ

* ಸರ್ಕಾರಿ ಶಾಲೆ, ವಸತಿ ನಿಲಯಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳ ಆರಂಭ.

ಕಲಬುರಗಿ, ಮೇ 18: ಬೋಯಿಂಗ್ ಇಂಡಿಯಾದ ನೆರವಿನೊಂದಿಗೆ ಕಲಬುರಗಿಯಲ್ಲಿರುವ ಇಎಸ್‌ಐ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸಿ ಆಧುನಿಕ ವೈದ್ಯಕೀಯ ಸೌಲಭ್ಯಗಳನ್ನು ನೀಡಿ ಸಾರ್ವಜನಿಕರಿಗೆ ಹೆಚ್ಚಿನ ನೆರವು ಕಲ್ಪಿಸಿ ಕೊಡಲಾಗುವುದು ಎಂದು **ಗಣಿ ಮತ್ತು ಭೂವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ **ಅವರು ಇಂದಿಲ್ಲಿ ತಿಳಿಸಿದರು.

250 ಬೆಡ್ ಆಮ್ಲಜನಕಯುಕ್ತ ಸಾಮರ್ಥ್ಯದ ಇಎಸ್ಐ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಲಭ್ಯವಿರುವಂತೆ ನವೀಕರಣ ಮಾಡಲಾಗುವುದು.ಬೋಯಿಂಗ್ ಇಂಡಿಯಾ ಸಂಸ್ಥೆಯವರು ಪ್ರತ್ಯೇಕ ಸೌಲಭ್ಯವನ್ನು ಸ್ಥಾಪಿಸುವ ಬದಲು ಅಸ್ತಿತ್ವದಲ್ಲಿರುವ ಇಎಸ್‌ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮಂಗಳವಾರ ನಗರದ
ಐವಾನ್ -ಇ -ಶಾಹಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ವಿಶ್ವದ ಪ್ರಮುಖ ವಿಮಾನಯಾನ ಸಂಸ್ಥೆ ಬೋಯಿಂಗ್ ಕಲಬುರಗಿಯಲ್ಲಿ ಅಸ್ಪತ್ರೆ ಮೇಲ್ದರ್ಜೆಗೇರಿಸಲು ಮುಂದೆ ಬಂದಿರುವುದು ಕಲ್ಯಾಣ
ಕನಾ೯ಟಕದ ಸೌಭಾಗ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹೊಸದಾಗಿ ಅಸ್ಪತ್ರೆ ನಿರ್ಮಿಸಲು ನಿವೇಶನ
ಗುರುತಿಸಿ ಕಟ್ಟಡ ಕಾಮಗಾರಿಗೆ ಬಹಳಷ್ಟು ಸಮಯ ವಿಳಂಬವಾಗುತ್ತದೆ. ಇದನ್ನು ತಪ್ಪಿಸಲು ಈಗಾಗಲೇ ಇರುವ ಇಎಸ್ಐ ಆಸ್ಪತ್ರೆಗೆ ಆಧುನಿಕ ಸ್ಪಶ೯ ನೀಡಲಾಗುವುದು ಎಂದು ಹೇಳಿದರು.
ಎಷ್ಟು ಸಾಧ್ಯವೋ ಅಷ್ಟು ಬೇಗ ಸಾರ್ವಜನಿಕರ ಸೇವೆಗೆ ಲಭ್ಯವಿರುವಂತೆ ಮಾಡಲಾಗುವುದು ಎಂದು ಆಶ್ವಾಸನೆ ನೀಡಿದರು.

*ಪಾಸಿಟಿವ್ ಪ್ರಮಾಣ ಇಳಿಕೆ*

ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಮಾಣ ‌ಕಡಿಮೆಯಾಗುತ್ತಿದ್ದು, ರಾಜ್ಯದಲ್ಲಿ ಮೊದಲು ಕಲಬುರ್ಗಿ ‌ಮೂರನೇ ಸ್ಥಾನದಲ್ಲಿತ್ತು. ಈಗ 19ನೇ ಸ್ಥಾನಕ್ಕೆ ಇಳಿದಿದೆ. ಒಂದು ವಾರದಲ್ಲಿ 24ನೇ ಸ್ಥಾನಕ್ಕೆ ಇಳಿಯಲಿದೆ ಎಂದು ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ಪಾಸಿಟಿವ್ ನಿಂದ ಬಳಲುತ್ತಿರುವವರಿಗೆ ಮನೆಯಲ್ಲಿ ಕ್ವಾರಂಟೈನ್ ಆಗಲು ಪ್ರತ್ಯೇಕ ‌ಕೊಠಡಿಯ ಸಮಸ್ಯೆ ಇದೆ. ಹಾಗಾಗಿ ಸರ್ಕಾರಿ ಶಾಲೆ, ವಸತಿ ನಿಲಯಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳನ್ನು ಆರಂಭಿಸಲಾಗಿದೆ. ಅವರನ್ನು ಕೇಂದ್ರಕ್ಕೆ ಕರೆತರಲು ಮನವೊಲಿಸಲಾಗುತ್ತಿದೆ ಎಂದರು.

*ಆಮ್ಲಜನಕ ಕೊರತೆ ಇಲ್ಲ*

ಜಿಲ್ಲೆಗೆ ಪೂರೈಕೆಯಾಗುವ ಆಮ್ಲಜನಕ ಸಾಮರ್ಥ್ಯವನ್ನು 35 ಕೆ.ಎಲ್.ಗೆ ಹೆಚ್ಚಿಸಿದ್ದರಿಂದ ಆಮ್ಲಜನಕದ ಕೊರತೆ ಉಂಟಾಗಿಲ್ಲ. ಇಲ್ಲಿಗೆ ಬಳ್ಳಾರಿಯಿಂದ ಬಂದ ಆಮ್ಲಜನಕ ಟ್ಯಾಂಕರ್ ನಮ್ಮ ಘಟಕಗಳನ್ನು ‌ಭರ್ತಿ ಮಾಡಿ ಉಳಿದ ಆಮ್ಲಜನಕವನ್ನು ಬೆಳಗಾವಿಗೆ ಕಳಿಸಿಕೊಡಲಾಗಿದೆ ಎಂದರು.

ಜಿಲ್ಲೆಗೆ ಮಂಗಳವಾರ 1700 ರೆಮ್ ಡಿಸಿವಿರ್ ಇಂಜೆಕ್ಷನ್ ಗಳು ಬರಲಿವೆ. ಜಿಲ್ಲಾಡಳಿತದ ಬಳಿ 200 ಇಂಜೆಕ್ಷನ್ ಸಂಗ್ರಹಗಳಿವೆ. ಒಟ್ಟು 1900 ಇಂಜೆಕ್ಷನ್ ಲಭ್ಯವಿವೆ. ಕಾಳಸಂತೆಗೆ ತಡೆ ಹಾಕಿದ್ದರಿಂದ ಇಂಜೆಕ್ಷನ್ ದುರ್ಬಳಕೆ ತಪ್ಪಿದೆ ಎಂದರು.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ. ರಾಜ್ಯದಲ್ಲಿ 26ನೇ ಸ್ಥಾನದಿಂದ ಕಲಬುರಗಿ ಈಗ 16 ನೇ ಸ್ಥಾನಕ್ಕೆ ಬಂದಿದೆ ಎಂದು ತಿಳಿಸಿದರು.

ರೆಮ್ಡಿಸಿವಿರ್ ಇಂಜೆಕ್ಷನ್ ರೋಗಿಯ ಮುಂದೆಯೇ ಓಪನ್ ಮಾಡಲು ಸೂಚಿಸಲಾಗಿದೆಕಲಬುರಗಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಪ್ರತಿನಿತ್ಯ 35 ಕೆಎಲ್‌ನಷ್ಟು ಆಕ್ಸಿಜನ್ ಪೂರೈಕೆ ಆಗುತ್ತಿದೆ. ಸದ್ಯ ಸರ್ಕಾರಿ ಆಸ್ಪತ್ರೆ ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ಕೊ ರತೆಯಾಗುತ್ತಿಲ್ಲ.ಕಾಳಸಂತೆಯಲ್ಲಿ ರೆಮ್ಡಿಸಿವಿರ್ ಇಂಜೆಕ್ಷನ್ ಮಾರಾಟಕ್ಕೆಸಂಪೂರ್ಣ ಕಡಿವಾಣ ಹಾಕಾಲಾಗಿದೆ ಎಂದರು.

*ಅಂಕಿ-ಅಂಶ ಮುಚ್ಚಿಟ್ಟರೆ ಕ್ರಮ*

ಗಣಿ ಇಲಾಖೆಯಿಂದ ನೂರು ಆಕ್ಸಿಜನ್ ಕಾನ್ಸನ್ಟ್ರೇಟರ್ ವ್ಯವಸ್ಥೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಆಸ್ಪತ್ರೆಗೆ ಆಕ್ಸಿಜನ್ ಘಟಕಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಬ್ಲಾಕ್‌ ಫಂಗಸ್ ಸಲುವಾಗಿ ಇಂಜೆಕ್ಷನ್ ಸಂಸದ ಉಮೇಶ್ ಜಾಧವ್ ತಂದಿದ್ದಾರೆ. ಬ್ಲಾಕ್‌ ಫಂಗಸ್‌ಗೆ ಬೇಕಾದ 100 ವೈಲ್ ಇಂಜೆಕ್ಷನ್ ಲಭ್ಯತೆ ಇದೆ. ಆ ನೂರು ಇಂಜೆಕ್ಷನ್ ವೈಲ್ ತಂದು ಚಿಕಿತ್ಸೆ ಕೊಡಿಸಲಾಗುವುದು.

ಕಲಬುರಗಿ ಜಿಲ್ಲೆಯಲ್ಲಿ ಕೂಡ ಬ್ಲ್ಯಾಕ್ ಫಂಗಸ್ ಕೇಸ್ ಗಳು ಬೆಳಕಿಗೆ ಬಂದಿವೆ ಅನ್ನೋ ಮಾಹಿತಿ ಇದೆ.‌ ಅದನ್ನು ನಿಯಂತ್ರಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು‌‌ ಎಂದು ಸಚಿವರು ತಿಳಿಸಿದರು. ಜಿಲ್ಲೆಯಲ್ಲಿ ಮೂರು ಜನರಿಗೆ ಬ್ಲಾಕ್ ಫಂಗಸ್ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಒಂದು ವೇಳೆ ಅಂಕಿ-ಅಂಶ ಮುಚ್ಚಿಡುವಂತಹ ಕೆಲಸ ಆಗುತ್ತಿದ್ದರೆ ಅದರ ವಿರುದ್ದ ಕ್ರಮ ಕೈಗೊಳ್ಳತ್ತೇನೆ ಎಂದು ನಿರಾಣಿ ಹೇಳಿದ್ದಾರೆ.

ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಕೋವಿಡ್ ಸೋಂಕು ಕಡಿಮೆಯಾಗಿದೆ.‌ ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಲಾಕ್ ಡೌನ್ ಮುಂದುವರಿಸಿದರೆ ಉತ್ತಮ ಎಂದು ಅಭಿಪ್ರಾಯಪಟ್ಟರು.
ಸೋಂಕು ಹೆಚ್ಚಾದರೆ ಇನ್ನೂ ಕಠಿಣ ಲಾಕ್ ಡೌನ್ ಮಾಡಬಹುದು.

ಹತ್ತು ದಿನಗಳ ಕಾಲ ಲಾಕ್ ಡೌನ್ ಮುಂದುವರಿಸಿದರೆ ಉತ್ತಮ ಎನ್ನುವುದು ನನ್ನ ಅಭಿಪ್ರಾಯ. ಈ ಬಗ್ಗೆ ಮುಖ್ಯಮಂತ್ರಿಯವರಿಗೂ ಕೂಡಾ ತಿಳಿಸಿದ್ದೇವೆ.‌ ಮುಖ್ಯಮಂತ್ರಿಗಳ ನಿರ್ಧಾರವೇ ಅಂತಿಮ. ಅವರು ನೀಡುವ ಸೂಚನೆಗಳನ್ನು ಪಾಲಿಸುತ್ತೇವೆ. ಪ್ರಧಾನಿ ಮೋದಿ ಅವರು ನೀಡುವ ಸಲಹೆಗಳನ್ನೂ ಪಾಲಿಸುತ್ತೇವೆ ಎಂದರು.

ಆಕ್ಸಿಜನ್ ಕೊರತೆ ನಿವಾರಿಸಲು ಗಣಿ ಇಲಾಖೆಯಿಂದ ಹತ್ತು ಟ್ಯಾಂಕರ್ ನೀಡುತ್ತಿದ್ದೇವೆ. ಹತ್ತು ದಿನದಲ್ಲಿ ಪ್ರತಿ ವಿಭಾಗಕ್ಕೆ ಎರಡೆರಡು ಆಕ್ಸಿಜನ್ ಟ್ಯಾಂಕರ್ ನೀಡಲಾಗುತ್ತದೆ. ಮೂರನೇ ಅಲೆಗಾಗಿ ಬೇಕಾದ ಎಲ್ಲಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ, ಬೀದರ್ ಸಂಸದ ಭಗವಂತ ಖೂಬಾ, ಎನ್ ಇಕೆಆರ್ ಟಿಸಿ ಅಧ್ಯಕ್ಷ, ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಬಸವ ಕಲ್ಯಾಣ ಶಾಸಕ ಶರಣು ಸಲಗರ, ವಿಧಾನಪರಿಷತ್ ಸದಸ್ಯ ಶಶೀಲ್ ನಮೋಶಿ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ, ಬಿಜೆಪಿ ‌ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಶಹರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಇದ್ದರು.

EoM

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *