ಕೊರೋನಾ ಸೋಂಕಿತರನ್ನು ಉಚಿತವಾಗಿ ಮನೆಯಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪಾಲಿಕೆಯಿಂದ ಆಟೋ ವ್ಯವಸ್ಥೆ
ಕಲಬುರಗಿ.ಮೇ :ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಮಹಾಮಾರಿ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ಕಲಬುರಗಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಕೊರೋನಾ ಸೋಂಕಿತರನ್ನು ಮನೆಯಿಂದ ಆಸ್ಪತ್ರೆಗೆ ಉಚಿತವಾಗಿ (24X7) ಕರೆದುಕೊಂಡು ಹೋಗಲು (ಆಟೋ ಅಂಬ್ಯುಲೆನ್ಸ್) ಐದು ಆಟೋಗಳನ್ನೊಳಗೊಂಡಂತೆ ಡ್ರೈವರ್ ಹಾಗೂ ಓರ್ವ ಸೂಪರವೈಜರ್ ಅವರನ್ನು ನಿಯೋಜಿಸಿ ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರಾದ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಆದೇಶ ಹೊರಡಿಸಿದ್ದಾರೆ.
ಪ್ರತಿದಿನ ಬೆಳಗಿನ 8 ರಿಂದ ರಾತ್ರಿ 10 ಗಂಟೆಯವರೆಗೆ ಆಟೋ ಡ್ರೈವರ್ ಗಳಾದ ಶೇಖ ರಶೀದ ಇವರ ಮೊಬೈಲ್ ಸಂಖ್ಯೆ 9060637888, ಶೇಖ ಶಬ್ಬಿರ್ ಇವರ ಮೊಬೈಲ್ ಸಂಖ್ಯೆ 9900562301 ಹಾಗೂ ರವಿಚಂದ್ರ ಇವರ ಮೊಬೈಲ್ ಸಂಖ್ಯೆ 9035853125 ಗೆ ಸಂಪರ್ಕಿಸಬಹುದಾಗಿದೆ.
ಅದೇ ರೀತಿ ಪ್ರತಿದಿನ ರಾತ್ರಿ 10 ರಿಂದ ಬೆಳಗಿನ 8 ಗಂಟೆಯವರೆಗೆ ಆಟೋ ಡ್ರೈವರ್ ಗಳಾದ ಇಸಾಕ್ ಇವರ ಮೊಬೈಲ್ ಸಂಖ್ಯೆ 9538369631 ಹಾಗೂ ಶಕೀಲ ಮಿಯಾ ಇವರ ಮೊಬೈಲ್ ಸಂಖ್ಯೆ 7676704268 ಗೆ ಸಂಪರ್ಕಿಸಬಹುದಾಗಿದೆ. ಇದಲ್ಲದೇ ಸೊಪರವೈಜರ್ರಾದ ಪ್ರೇಮ ಶಿಲ್ದ್ ಇವರ ಮೊಬೈಲ್ ಸಂಖ್ಯೆ 9483855538ಗೆ ಸಂಪರ್ಕಿಸಬಹುದಾಗಿದೆ.
ಕಲಬುರಗಿ ಮಹಾನಗರ ಪಾಲಿಕೆಯ ವ್ಯಾಪ್ತಿಯ ಸಾರ್ವಜನಿಕರು, ರೋಗಿಗಳ ಹಿತದೃಷ್ಟಿಯಿಂದ (24X7) ದಿನದ 24 ಗಂಟೆಯೂ ಪಾಳಿಯಂತೆ ಕಾರ್ಯನಿರ್ವಹಿಸಲು ಈ ಐದು ಆಟೋಗಳನ್ನೊಳಗೊಂಡಂತೆ ಡ್ರೈವರ್ ಗಳನ್ನು ಹಾಗೂ ಓರ್ವ ಸುಪರವೈಜರ್ ಇವರನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಈ ಉಚಿತ ಸೇವೆಯ ಪಡೆಯಲು ಮಹಾನಗರ ಪಾಲಿಕೆಯ ವಾಹನ ಶಾಖೆಗೆ ಸಂಪರ್ಕಿಸಬಹುದಾಗಿದೆ.
ಸಾರ್ವಜನಿಕರು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ವೆಬ್ಸೈಟ್ www.gulbargacity.mrc.gov.in, ಪಾಲಿಕೆಯ ಇ-ಮೇಲ್ ವಿಳಾಸ itstaff_ulb_gulbarga@yahoo.com, ಪಾಲಿಕೆಯ ವಾಟ್ಸ್ಆ್ಯಪ್ ಸಂಖ್ಯೆ 8277777728 ಹಾಗೂ ಪಾಲಿಕೆಯ ದೂರವಾಣಿ ಸಂಖ್ಯೆ 08472-260776ಗೆ ಗೆ ಸಂರ್ಪಕಿಸಲು ಕೋರಲಾಗಿದೆ.