ಲಾಕ್​ಡೌನ್​ನಿಂದ ಕಂಗೆಟ್ಟವರಿಗೆ ರಿಯಲ್ ಸ್ಟಾರ್​​ ನೆರವು..!ರೈತ ಮತ್ತು ಬಡವರ ಮಧ್ಯೆ ನಿಂತಿದ್ಯಾಕೆ ಉಪ್ಪಿ ?

ಕೊರೋನಾ ಲಾಕ್​ಡೌನ್​​ನಿಂದ ಕನ್ನಡ ಚಿತ್ರರಂಗ ಕೋಟಿ ಕೋಟಿ ನಷ್ಟ ಅನುಭವಿಸುವಂತಾಗಿದೆ.. ಸಿನಿಮಾ ಚಟುವಟಿಕೆಗಳಿಗೂ ಬ್ರೇಕ್​ ಬಿದ್ದು, ಸಿನಿಮಾ ಕಾರ್ಮಿಕರು, ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ.. ನಟ ಉಪೇಂದ್ರ ಕನ್ನಡ ಸಿನಿಮಾ ಕಾರ್ಮಿಕರ ಸಹಾಯಕ್ಕೆ ಮುಂದಾಗಿದ್ದಾರೆ.. ರಿಯಲ್​ ಸ್ಟಾರ್​ ಜೊತೆಗೆ ಸೆಲೆಬ್ರೆಟಿಗಳು ಸೇರಿದಂತೆ ಹಲವರು ಕೈ ಜೋಡಿಸಿದ್ದಾರೆ.. ಇದೀಗ ಬಡ ರೈತರಿಗೂ ರಿಯಲ್​ ಸ್ಟಾರ್​​ ಬೆಂಬಲವಾಗಿ ನಿಂತಿದ್ದಾರೆ.. ರೈತರು ಎದುರಿಸುತ್ತಿರುವ ದೊಡ್ಡ ಸಮಸ್ಯೆಯ ಪರಿಹರಿಸಲು ಮುಂದಾಗಿದ್ದಾರೆ.

ಕಳೆದ ವರ್ಷ ಲಾಕ್​ಡೌನ್​ನಿಂದ ತತ್ತರಿಸಿದ್ದ, ಚಿತ್ರರಂಗ ಚೇತರಿಸಿಕೊಳ್ಳುವ ಮೊದ್ಲೇ ಮತ್ತೆ ಕೊರೋನಾ ಆರ್ಭಟ ಶುರುವಾಗಿ ಮತ್ತೆ ಚಿತ್ರರಂಗ ಸ್ತಬ್ಧವಾಗಿದೆ.. ಥಿಯೇಟರ್​ ಬಾಗಿಲು ಮುಚ್ಚಿ, ಸಿನಿಮಾ, ಕಿರುತೆರೆ ಕಾರ್ಯಕ್ರಮಗಳ ಶೂಟಿಂಗ್​ ಇಲ್ಲದೇ ಸಾಕಷ್ಟು ಜನ ತಂತ್ರಜ್ಞರು, ಕಲಾವಿದರು ದಿನದ ಖರ್ಚು ಭರಿಸಲು ಪರದಾಡುತ್ತಿದ್ದಾರೆ.. ಸಿಲುಕಿರುವ 3000 ಸಿನಿಕಾರ್ಮಿಕರಿಗೆ ​ ನಟ ಉಪೇಂದ್ರ ದಿನಸಿ ಕಿಟ್ ನೀಡ್ತಿದ್ದಾರೆ.. ಇದೀಗ ಸೂಕ್ತ ಮಾರುಕಟ್ಟೆ ಸಿಗದೇ ಪರದಾಡುತ್ತಿದ್ದ ರೈತರಿಗೂ ಉಪ್ಪಿ ಸಹಾಯಕ್ಕೆ ಬಂದಿದ್ದಾರೆ.

ಸಿನಿಕಾರ್ಮಿಕರ ನಂತ್ರ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೂ ಉಪೇಂದ್ರ ನೆರವಿನ ಹಸ್ತ ಚಾಚಿದ್ದಾರೆ.. ಸಿನಿಕಾರ್ಮಿಕರಿಗೆ ಸಹಾಯ ಮಾಡಲು ಉಪ್ಪಿ ಮುಂದೆ ಬರುತ್ತಿದ್ದಂತೆ ಸಾಧು ಕೋಕಿಲ, ಹಿರಿಯ ನಟಿ ಬಿ. ಸರೋಜಾ ದೇವಿ, ಪೋಷಕ ನಟ ಶೋಭರಾಜ್​, ನಿರ್ದೇಶಕ ಪವನ್​ ಒಡೆಯರ್​ ಸೇರಿದಂತೆ ಹಲವರು ಅವರಿಗೆ ಬೆಂಬಲವಾಗಿ ನಿಂತರು.. ಕೈಲಾದ ಸಹಾಯ ಮಾಡಿದರು.. ಬರೀ ಸೆಲೆಬ್ರೆಟಿಗಳು ಮಾತ್ರವಲ್ಲದೇ, ಹಲವರು ರಿಯಲ್​ ಸ್ಟಾರ್​ಗೆ ಬೆಂಬಲವಾಗಿ ನಿಂತಿದ್ದು,  ನೆರವಿನ ಹಸ್ತ ಮತ್ತಷ್ಟು ಚಾಚಿದ್ದಾರೆ.

ಸಾಕಷ್ಟು ದಾನಿಗಳು ಕೊರೋನಾ ವಿರುದ್ಧದ ಹೋರಾಟಕ್ಕೆ ಉಪ್ಪಿ ಜೊತೆ ಕೈ ಜೋಡಿಸಿದ್ದಾರೆ.. ಹಾಗಾಗಿ ಒಂದು ಹೆಜ್ಜೆ ಮುಂದೆ ಹೋಗಿ ರೈತರಿಂದ ನೇರವಾಗಿ ಬೆಳೆ ಖರೀದಿ ಮಾಡಿ, ಅದನ್ನು ದಿನಸಿ ಕಿಟ್‌ ಮೂಲಕ ವಿತರಿಸುತ್ತಿದ್ದಾರೆ ಉಪೇಂದ್ರ. ಲಾಕ್​ಡೌನ್​ ಸಮಯದಲ್ಲಿ ಸೂಕ್ತ ಮಾರುಕಟ್ಟೆ ಸಿಗದೇ ಬೆಳೆ ಮಾರಾಟವಾಗದೆ ಸಂಕಷ್ಟಕ್ಕೆ ಸಿಲುಕಿರೊ ರೈತರು ಈಗ ಉಪೇಂದ್ರ ಅವರನ್ನ ಸಂಪರ್ಕಿಸುತ್ತಿದ್ದಾರೆ.

ತಮಗೆ ಅವಶ್ಯಕತೆ ಇರುವ ಬೆಳೆಯನ್ನು ರೈತರಿಂದ ಸೂಕ್ತ ಬೆಲೆಗೆ ಖರೀದಿಸಿ, ಬೇಕಿರುವವರಿಗೆ ಉಪ್ಪಿ ಹಂಚುತ್ತಿದ್ದಾರೆ.. ಬುದ್ಧಿವಂತನ ಈ ಪ್ರಯತ್ನಕ್ಕೆ ಭರ್ಜರಿ ಬೆಂಬಲ ಸಿಕ್ಕಿದ್ದು, ಈಗಾಗಲೇ ಈರುಳ್ಳಿ, ಟಮೋಟೋ ಸೇರಿದಂತೆ ತರಕಾರಿಯನ್ನೂ ತಂದು ರೈತರು ಲಾಭದ ನಿರೀಕ್ಷೆ ಇಲ್ಲದೇ ಅಸಲು ಪಡೆದು ಉಪ್ಪಿ ಮನೆಗೆ ತಲುಪಿಸುತ್ತಿದ್ದಾರೆ.. ಈಗಾಗಲೇ ಅದು ಅಗತ್ಯ ಇರುವವರಿಗೆ ವಿತರಿಸುವ ಕೆಲಸ ಕೂಡ ಯಥೇಚ್ಛವಾಗಿ ನಡೀತಿದೆ.. ಸೂಪರ್​ ಸ್ಟಾರ್​​ನ ಈ​ ಸೂಪರ್​​ ಐಡಿಯಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗ್ತಿದ್ದು, ಸರ್ಕಾರವೂ ಈ ಕೆಲಸ ಮಾಡಬಹುದಿತ್ತಲ್ವಾ ಅಂತ ಹಲವರು ಮನಸಲ್ಲೇ ಪ್ರಶ್ನೆ ಕೇಳಿಕೊಳ್ಳುತ್ತಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *